ಕಾವ್ಯ ಸಂಗಾತಿ
ಇರಾಜ ವೃಷಭ ಎ.
ಒಲವಲಿ ಗೀಚಿದ ಸಾಲುಗಳು

ಮನದಲಿನ ನೂರು ಮಾತು ಹೇಳಲಿ ಹೇಗೆ ಗೆಳತಿ
ನಗು ಚೂರು ಕಣ್ಣಲ್ಲೇ ನಾನಷ್ಟೇ ನಾಚುವಂತೆ
ಎಲ್ಲಿಯೂ ಹೇಳದ ಸಾಲು ನನ್ನಲ್ಲೇ ಹೇಳು ಮೊದಲು
ಪಿಸುನುಡಿದು ನೋಡು ನನ್ನ ಮತ್ಯಾರು ಕೇಳದಂತೆ ll
ಮುದ್ದಾದ ಮಾಯೆ ನೀನು ಸದ್ದಿಲ್ಲದಂತೆ ಬಂದೆ
ನಿಂತ ಈ ನೀರಿನಲ್ಲಿ ಸುಳಿಯಾಗಿ ಕಾಡಿದೆ
ಚೆಲುವಾದ ಛಾಯೆ ನೀನು ಈ ಬಲಶಾಲಿಯನ್ನು ಕೊಂದೆ
ಕುಂತ ಈ ಜಾಗದಲ್ಲಿ ಒಲವನ್ನು ಹಂಚಿದೆ
ಗೀಚಲು ಹೋದೆ ಬರಹ ಕಂಡಿತು ನಿನ್ನಯ ಹೆಸರು
ಮಸಿಕಾಲಿಯಾದರೂ ನಿಲ್ಲದು ಬಣ್ಣನೆ
ಹಗಲಿರುಳು ಇದ್ದರೂ ನೀನಂತೂ ನನ್ನ ಉಸಿರು
ರವಿ ಶಶಿಯೂ ಹೋದರು ನಾನಿರುವೆ ತಣ್ಣಗೆ ll
ಜಗವನ್ನು ಬಿಟ್ಟು ಬಿಡಲು ತುದಿಗಾಲಿನಲ್ಲಿ ಇರುವೆ
ನೀ ಸಿಕ್ಕರೆ ಸಾಕು ಈ ಜನ್ಮ ಪಾವನ
ನನ್ನೆಲ್ಲ ಸುಖದ ಪಾಲು ನಿನಗೆಂದೆ ಮೀಸಲಿಡುವೆ
ಕೈ ಹಿಡಿದು ಸಾಗು ನೀನು ಶುರುವಾಗ್ಲಿ ಜೀವನ ll
ಇರಾಜ ವೃಷಭ ಎ.

Nice lines.. God bless u. Keep it up.
Thank You so much for comments and wishes