ಕಾವ್ಯಯಾನ
ಅನ್ನದಾತ
ಬಿ.ಶ್ರೀನಿವಾಸ
ಬಿಟ್ಟಾಗ ಬಿರುಕು
ಬದುಕಲು ಹಾತೊರೆಯುತ್ತವೆ ಮಣ್ಣಕಣಗಳು
ಒಡೆದ ಹಿಮ್ಮಡಿ ಬಿರುಕಿನಲಿ
ನೆರಳು ಕೊಟ್ಟ ಮರದ ಕೊರಡೂ ಸಂತೈಸುತ್ತಿದೆ
ಗತ ವೈಭವ ಮರೆತು
ಅಕಾಲದಲಿ ಕೆಂಪಾದ ಬೆಳೆ ಕಡಿಮೆಯಾಗಿರುವುದುಂಟು ದೇಹ ರಕುತದ ಅಂಶ
ಕುಡಿದವರ ಹುಡುಕಬೇಕಿದೆ!
ಕುದಿಯುತ್ತಿದೆ ಅನ್ನ
ಅಗುಳಗುಳೂ ಎದ್ದೆದ್ದು ಏನೋ ಹೇಳಲು ತವಕಿಸುತಿದೆ
ಹಸಿರು ಶಾಲು ಹೊದ್ದ
ಗಡ್ಡಧಾರಿ ಟೋಪಿ ಸಂತನೊಬ್ಬ ಬಿಗಿದಪ್ಪಿ ಸಂತೈಸಿದಂತೆ ಕನಸು
ಕುಡ,ಕುಳಗಳ ಕಣ್ಣಿಂದಲೂ ಸುರಿಯುವುದು ಕಣ್ಣೀರು.
ಬೆಳೆಯುವಾಗ ಬೆವರು
ಬೆಳೆದಾದಮೇಲೆ ನೆತ್ತರು
ಹರಿಯುತಿರಲೇಬೇಕು ಸದಾ
ಒಂದಿಲ್ಲೊಂದು ನದಿ!
*************************