ಅನುವಾದ ಸಂಗಾತಿ
ʼಪುನರ್ಜನ್ಮʼ
ಮಲಯಾಳಂಮೂಲ:ಧನೇಶ್
ಕನ್ನಡಾನುವಾದ: ಐಗೂರು ಮೋಹನ್ ದಾಸ್ ಜಿ.

ಕೊನೆಗೂ ನಾನು
ಶುಭ ಘಳಿಗೆಯೊಂದರಲ್ಲಿ
‘ಮರಣ’ ಹೊಂದಿಯೇ ಬಿಟ್ಟೆ…!
ನಂತರ ನಾನು
ಒಂದು ‘ ಪುಸ್ತಕ ‘ವಾಗಿ
‘ಪುನರ್ಜನ್ಮ ‘ಹೊಂದಿದೆ…!!.
ಕೆಲವು ಮಂದಿ
ಹೆಚ್ಚು ಆಸಕ್ತಿ ಇಲ್ಲಾದೇ
ನನ್ನನ್ನು ಓದಿ ಮುಗಿಸಿದ್ದರು….!
ಇನ್ನೂ ಕೆಲವು ಮಂದಿ
ಅಧ೯ದಲ್ಲಿಯೇ ಓದು
ನಿಲ್ಲಿಸಿದ್ದರು….!
ಕೆಲವು ಮಂದಿ ಮಾತ್ರ
ಪ್ರೀತಿಯಿಂದ ನನ್ನನ್ನು
ಓದುತ್ತಿದ್ದರು….!!.
ಕೆಲವು ಮಂದಿಯ
ಕಣ್ಣುಗಳಲ್ಲಿ ಮಿಂಚು ಕಂಡೆ….!
ಕಣ್ಣೀರು ಕಂಡೇ….!
ಪ್ರೀತಿ ಸಹ ಕಂಡುಬಿಟ್ಟೆ….!!
ನಾನು ಪುಸ್ತಕವಾಗಿ
ಮತ್ತೊಂದು ಜನ್ಮ ತಾಳಿದ್ದರೂ
ಹೆಚ್ಚಿನ ವ್ಯತ್ಯಾಸ ಇಲ್ಲಾದೇ
ಎಂದಿನಂತೆ ಮೌನವಾಗಿ
ಸಾಗುತ್ತಲೇ ಇರುವೆ…..!!!
ಮಲಯಾಳಂ ಮೂಲ: ಧನೇಶ್
ಕನ್ನಡ ಅನುವಾದ: ಐಗೂರು ಮೋಹನ್ ದಾಸ್ ಜಿ.

ಭಿನ್ನ ಭಾವನೆ