ಕೂಸು ಕಾಡುತ್ತಿದೆ..

ವಾರದ ಕವಿತೆ

ಕೂಸು ಕಾಡುತ್ತಿದೆ..

ಡಾ‌.ಸುಜಾತ ಲಕ್ಷ್ಮೀಪುರ.

Crescent, Moon, Balloon, Night, Star

ಕೂಸು ಕಾಡುತ್ತಿದೆ ಕಾಸು ಬೇಡುತ್ತಿದೆ
ಅಂಗಡಿ ಮುಂಗಟ್ಟಿಗೆಲ್ಲಾ ಬೀಗ ಜಡಿದಿದೆ
ಚಾಕಲೇಟಿನ ಬಯಕೆ ಮೈ ಮೇಲೆ ಬಂದು
ಕೂಸು ನೆಲದ ಮೇಲೆಲ್ಲಾ ಬಿದ್ದು ಒದ್ದಾಡಿದೆ

ಹಾಲು ಒಡೆದಿದೆ ಹಸಿವು ಕಾಡಿದೆ
ಕೂಸು ಖಾಲಿ ಬಾಟಲಿ ಹಿಡಿದು
ಸೆರಗಿಡಿದು ಎಳೆದೆಳೆದು ಕಾಡಿ ಬೇಡಿದೆ
ಎದೆಗಪ್ಪಿ ಮುದ್ದಿಸಿದರೂ ಅಳು ನಿಲ್ಲಿಸದೆ

ಎಳೆದೆಳೆದು ಚಿಲಕ ಹಾಕಿದರೂ ಬೀದಿಗೋಡಿದೆ
ಆಟದ ಸಾಮಾನು ಕೊಟ್ಟರೂ ಅರಚಾಡಿದೆ
ತೂದು ಎಸೆದು ಆಟಿಕೆಗಳ, ಬಿದ್ದು ಹೊರಳಾಡಿದೆ
ಮತ್ತೆ ಮತ್ತೆ ಬಾಗಿಲು ಬಡಿದು ನರಳಾಡಿದೆ

ಕಿಟಕಿಯೊಳಗಿಂದ ಚಂದಿರನೂ ಪೂರ ಕಾಣದೆ
ಸೂರ್ಯನೂ ಮನೆಯೊಳಗೆ ಇಣುಕದೆ
ಗಾಳಿಯೂ ಹತ್ತಿರ ಸುಳಿದಾಡದೆ ಸ್ಥಿರವಾಗಿದೆ
ಮಲಗಿದಲ್ಲೇ ಕೂಸು ಒದ್ದೆಮುದ್ದೆಯಾಗಿದೆ

ಲಾಕ್ ಆಗಿ ನಗುವೆಲ್ಲಾ ಉತ್ಸಾಹ ಡೌನ್ ಆಗಿದೆ
ಭರ್ರನೆ ತಿರುಗುತ್ತಿದ್ದ ಕೂಸಿನ ಕೈಕಾಲು ಕಟ್ಟಿಹಾಕಿದೆ
ನಾಲ್ಕು ಗೋಡೆಯ ನಡುವೆ ಕಮಟು ನಾಥ
ಹೊಸಗಾಳಿ ಬೆಳಕಿಲ್ಲದೆ ಮಂಕು ಆವರಿಸಿದೆ.

………….

.

One thought on “ಕೂಸು ಕಾಡುತ್ತಿದೆ..

Leave a Reply

Back To Top