ಸುಧಾ ಪಾಟೀಲ ಅವರ ಕವಿತೆ-ಮಳೆಗಾಲದ ಮುಸ್ಸಂಜೆ

R

ಸೊಗಡಿದೆ ಸೊಗಸಿದೆ
ಈ ಮಳೆ ಹನಿಗೆ
ನೀರಿನ  ಚೆಲ್ಲಾಟಕೆ
ಮಣ್ಣಿನ  ಘಮಕೆ
ತಂಪಿನ ತಂಪು ತೋರಣಕೆ

ನೆನಪುಗಳ ತಳುಕಿದೆ
ವಯ್ಯಾರದ ಘಮಲಿದೆ
ಖುಷಿಯ ಆಗರವಿದೆ
ಅದೇನೋ  ಸಂದೇಶವಿದೆ
ಮಳೆಗಾಲದ ಮುಸ್ಸಂಜೆಯಲಿ

ಪ್ರಕೃತಿಯ ಹೊನಲಿದೆ
ಹೇಳಲಾರದ  ಸಂಭ್ರಮವಿದೆ
ಸ್ವರ ಮಾಧುರ್ಯವಿದೆ
ಇಂಪಾದ ಗಾಯನವಿದೆ
ಮಳೆಯ ಹನಿ ಹನಿ ಇಬ್ಬನಿಗೆ

ಅನುನಯದ  ಒಲವಿದೆ
ಭಾವಗಳ  ಹೊಂಬೆಳಕಿದೆ
ಭರವಸೆಯ  ಒಡಲಿದೆ
ಉಕ್ಕಿ ಹರಿಯುವ  ಚಿಲುಮೆಯಿದೆ
ನಯನ ಮನೋಹರ
ಮಳೆಗಾಲಕೆ


3 thoughts on “ಸುಧಾ ಪಾಟೀಲ ಅವರ ಕವಿತೆ-ಮಳೆಗಾಲದ ಮುಸ್ಸಂಜೆ

  1. ಮಳೆಗಾಲದ ಮುಸ್ಸಂಜೆ ಕವನ ತುಂಬಾ ಚೆನ್ನಾಗಿ ಮೂಡಿ ಬಂದಿದೆ ಸೂಪರ್ ಮೇಡಮ್

  2. ಬಹಳ ಚೆನ್ನಾಗಿ ಕವನ ಮೂಡಿ ಬಂದಿದೆ
    ಮೇಡಂ -ಸವಿತಾ ದೇಶಮುಖ

  3. ಮಳೆಯ ಸುಂದರ ಅಭಿವ್ಯಕ್ತಿ

Leave a Reply

Back To Top