ಕಾವ್ಯ ಸಂಗಾತಿ
ಶಿ ಕಾ ಬಡಿಗೇರ
“ಹಣಿಗೆ”

ಹೇಸಿಕೊಳ್ಳುವದಿಲ್ಲ ತುಸುವೂ
ಹೆಕ್ಕಿ ತೆಗೆಯಲು ಕೂದಲು ಹೊಕ್ಕ
ಹೊಲಸು!
ಶೀರುಗಳೋ ಹುಲುಸು
ಹುಲುಸಾಗಿ ಉದಯರುತ್ತವೆ ಸಿಕ್ಕಿಕೊಂಡು ಹಲ್ಲುಗಳ ನಡುವೆ…
ವರ್ಣಬೇಧವೋ ಒಪ್ಪಿಕೊಳ್ಳುವದಿಲ್ಲ
ಮುಷ್ಟಿಯಷ್ಟೂ! ಕಪ್ಪು, ಬಿಳುಪುಗಳ
ಸಮ್ಮಿಲನದ ಸಾಂಗತ್ಯಕ್ಕೆ ಸ್ಪರ್ಶದ ಅಭಿನಂದನೆ…
ಸಮಾನತೆಗೆ ಸದಾ ಸ್ಪಂದಿಸುವ ಹೆಚ್ಚುಗಾರಿಕೆ
ಎಡ, ಬಲಗಳ ನಡುವೆ ಬೈತಲೆ ಮೂಡಿಸಿ ಸತ್ಯಕ್ಕೆ ರಾಜಮಾರ್ಗ…
ಹಣಿಗೆಯ ಹಿರಿಮೆಗೆ ಸಾಟಿ ಉಂಟೆ?
ಅದಕೊಮ್ಮೆ ಅಂತರಂಗದ ಶರಣು
ಶಿ ಕಾ ಬಡಿಗೇರ
