ಪ್ರೀತಿಯ ಅಪ್ಪ
ಅಕ್ಷತಾ ಜಗದೀಶ
ಮುಗಿಲೆತ್ತರದ ನಂಬಿಕೆ ಅಪ್ಪ
ನಂಬಿಕೆಯ ಬುನಾದಿ ಅಪ್ಪ
ಜಗದಲಿ ಎಂದು ಬದಲಾಗದ
ವ್ಯಕ್ತಿತ್ವವೇ ಅಪ್ಪ….
ತನ್ನವರಿಗಾಗಿಯೇ ದುಡಿವನು ಅಪ್ಪ
ತನಗಾಗಿ ಏನು ಖರೀದಿಸದ ಅಪ್ಪ…
ನಾ ಹುಟ್ಟಿದ ದಿನವೇ ಹುಟ್ಟಿದನು
ನನ್ನ ಅಪ್ಪನೊಳಗೆ ಒಬ್ಬ ಅಪ್ಪ..
ತನ್ನ ಹುಟ್ಟಿದ ದಿನ ಎಂದೂ ಆಚರಿಸದ ಅಪ್ಪ..
ಮಕ್ಕಳು ಹುಟ್ಟಿದ ದಿನವೇ ತನ್ನದೆಂಬಂತೆ ಸಂಭ್ರಮಿಸಿದ ಅಪ್ಪ..
ಅಗಾದ ಪ್ರೀತಿಯ ಕಡಲು ನೀ ಅಪ್ಪ
ತಪ್ಪೇಸಗಿದಾಗ ಗದರಿಸಿದ ಅಪ್ಪ..
ಗಂಭೀರತೆಗೆ ಹೆಸರಾದ ಅಪ್ಪ..
ಈಗ ಮತ್ತೆ ಬದಲಾದಂತೆ ಕಂಡ ಅಪ್ಪ..
ನನ್ನ ಮಗುವಿನೊಡನೆ ಮಗುವಾದ ಅಪ್ಪ..
ಮೊಮ್ಮಗನೊಡನೆ ಮುಗ್ದ ನಗುವ ಬೀರಿದ ಅಪ್ಪ..
ಯಾರೇನೆ ಹೇಳಲಿ….
ಕಾಣದ ಪ್ರೀತಿಯ ಪ್ರತಿಬಿಂಬ ನನ್ನ ಪ್ರೀತಿಯ ಅಪ್ಪ…..!
*******************