“ಅವರವರ ಇಷ್ಟ”ಮಕ್ಕಳ ಕವಿತೆ-ಸಿದ್ದಲಿಂಗಪ್ಪ ಬೀಳಗಿ.ಹುನಗುಂದ

ಅಜ್ಜಗೆ ಬೇಕು ಸಜ್ಜಕ
ಅಜ್ಜಿಗೆ ತಾಜಾ ಮಜ್ಜಿಗೆ
ಅಪ್ಪಗೆ ಇಷ್ಟ ಉಪ್ಪಿಟ್ಟು
ಅವ್ವಗೆ ಸಾಕು ತಾಲಿಪಟ್ಟು
ಅಣ್ಣಗೆ ಬೇಕು ಚಾಕಲೇಟು
ನನಗೆ ನಾಲ್ಕು ಬಿಸ್ಕತ್ತು

ಅಜ್ಜಗೆ ಅಂಗಿ ಧೋತ್ರ
ಅಜ್ಜಿಗೆ ರೇಶಿಮೆ ಸೀರೆ
ಅಪ್ಪಂಗೆ ಪ್ಯಾಂಟು ಶರ್ಟು
ಅವ್ವಗೆ ತರತರ ಡ್ರೆಸ್ಸು
ಅಣ್ಣಂಗೆ ಜೀನ್ಸು ಪ್ಯಾರ್ಲಲ್ಲು
ನನಗೆ ಲಂಗಾ ದಾವಣಿ

ಅಜ್ಜಗೆ ಕಾಶಿ ಕೇದಾರ
ಅಜ್ಜಿಗೆ ಇಷ್ಟ ಹರಿದ್ವಾರ
ಅಪ್ಪಗೆ ಸ್ಕೂಟರು ಫ್ಯಾಶನ್ನು
ಅವ್ವಗೆ ಖುಷಿ ವೀಕೆಂಡು
ಅಣ್ಣಗೆ ಬೇಕು ಕ್ರಿಕೇಟು ಮ್ಯಾಚು
ನನಗದು ಬಣ್ಣದ ಆಟಿಕೆ ಸಾಕು

ಸಾಲಿ ಕಲಿಯದ ಅಜ್ಜ ಅಜ್ಜಿ
ಬದುಕಿನ ಲೆಕ್ಕದಿ ಬಲು ವಜ್ಜಿ
ಅಷ್ಟಿಷ್ಟ್ ಓದಿ ಅಪ್ಪ ಅವ್ವ
ನಮ್ಮ ಮೇಲೆ ಬಲುಜೀವ
ಸಾಲಿಗೆ ಹೋಗಲು ನಾವು ರೆಡಿ
ನೂರು ಸಾವಿರ ಕನಸು ಹರಡಿ


Leave a Reply

Back To Top