ಕನ್ನಡ ಮೂಲ: ಸ್ಮಿತಾ ಅಮೃತರಾಜ್
ಇಂಗ್ಲೀಷಿಗೆ: ಸಮತಾ ಆರ್.
ಹಸಿ ಮಣ್ಣ ಧ್ಯಾನ.
ಬಿದ್ದಿದ್ದಾರೆ ಪೈಪೋಟಿಗೆ ಎಲ್ಲರೂ
ದುರ್ಬೀನು ಧರಿಸಿ ಹಸಿ ಮಣ್ಣ ಅರಸಿ
ಗುದ್ದಲಿ ಪೂಜೆ ನಡೆಸಿ ಲೇಪಿಸುತ್ತಿದ್ದಾರೆ ಡಾಂಬರು
ಫೌಂಡೇಶನ್ ಕ್ರೀಂ ಹಚ್ಚುವಂತೆ.
ಸಂಕಟ ಸುಲಭಕ್ಕೆ ದಕ್ಕುವ ಸಂಗತಿಯಲ್ಲವೀಗ.
ಹಾರ ಬಯಸುವ ದೂಳ ಕಣಕಣದ ಚಡಪಡಿಕೆಗೆ
ಎಷ್ಟು ಚಂದದ ಮಿರುಗು ಬಣ್ಣದ ಲೇಪ.
ಏದುಸಿರು ಬಿಡುವಾಗ ಬಿರುಬಿಸಿಲಿನಲ್ಲಿ ರೂಪಾಂತರಗೊಂಡ ಪ್ರಾಣವಾಯು
ಹೇಳಿಕೊಡಲಾಗುತ್ತಿದೆ ಇಲ್ಲೀಗ ಎಳೆಯರಿಗೆ
ಚಿತ್ರಕ್ಕೆ ಬಣ್ಣ ತುಂಬುವ ಪಾಠ
ಫ್ಯಾನಿನ ಅಡಿಯಲ್ಲಿ ಕುಳ್ಳಿರಿಸಿ.
ತಲೆಯೆತ್ತಿದೆ ವಿಶಾಲ ಸಭಾಂಗಣ
ತೇವದ ಗುರುತೇ ಸಿಗದಂತೆ,
ಕೆರೆಯ ಸಮಾಧಿಯ ಮೇಲೆ.
ನಡೆಸುತ್ತಿದ್ದಾರೆ ಹಿರಿಯರು
ಶುಷ್ಕ ಸಮಾಲೋಚನೆ ಒಳಗೆ.
ಮೋಡ ಬಿತ್ತನೆ, ನದಿ ತಿರುವು
ಗಹನ ಚರ್ಚೆಯ ಕಾವು
ಎಸಿಯ ಒಳಗೂ ಸುರಿವ ಬೆವರು
ಸೈ ಎನ್ನಲಾಗದ ತೀರ್ಮಾನಕ್ಕೆ
ಮುಂದೂಡಲಾಗಿದೆ ಸಭೆ ನಾಳೆಗೂ.
ಎಲ್ಲಿಂದಲೋ ತೂರಿಬಂದ ಹಿಡಿ ಬೀಜವೀಗ
ಕಾದ ಟಾರು ರಸ್ತೆಯ ಮೇಲೆ ಬಿದ್ದು
ಪಟಪಟನೆ ಸಿಡಿದೇಳುತ್ತಿವೆ
ತಾಳ್ಮೆಗೆಟ್ಟು.
ಸಾವಿಗೆ ಸೆಡ್ಡುಹೊಡೆದ ದೈತ್ಯ ಮಹಲುಗಳು
ದಿಟ್ಟಿಸುವಾಗ ಬಿಡುಗಣ್ಣಿನಿಂದ
ನಾನಿಲ್ಲಿ ಧ್ಯಾನಿಸುತ್ತಿರುವೆ
ತೊಂಡೆ, ಬೆಂಡೆ ,ಬಸಳೆ
ಬೇರು ಸೋಕುವ ಹಸಿ ಮಣ್ಣ.
ನಾನೀಗ ಉಮೇದಿಗೆ ಬಿದ್ದಿದ್ದೇನೆ
ಹಸಿಮಣ್ಣು ಹಂಚುವುದಕ್ಕಾಗಿ
ಇಲ್ಲಿಯ ಮಣ್ಣು ಅಲ್ಲಿಯ ಸಸಿ
ಬೇರಿಳಿಸಿ ಬಿಟ್ಟ ಉಸಿರು..
ಪವಡಿಸಲಿ ಜಗದ ಜಗುಲಿಯಲ್ಲಿ
ಪ್ರಭುವೇ.
—-
A yearning for some wet soil.
Holding the binoculars,
Everyone is competing hard,
To search for a fistful of wet soil.
Worshipping the spade
Work is inaugurated,
As a foundation cream
Roads are smeared with coal tar.
Pain is not easily empathised now,
How nice to overlay
These fidgeting dust particles,
Who want to fly away,
with glistening hues.
The breath gets transformed
While gasping for air in the hot sun.
Here kids are taught to fill colours to the sketches ,sitting under a fan.
.
A capacious auditorium is erected
Without the traces of any moisture
On the grave of a vast lake.
Leaders are busy inside
With their dry speeches.
Deep discussions on
“Cloud seeding,linking rivers”
Are heating up the air,
Sweating even inside an ac room,
When Conclusions are hard to find
The meeting is carried over
Day after day..
A handful of seeds came flying
From nowhere and fell on the
Hot tar road,and unable to bear
Exploding aloud.
When the immortal giant mansions
Are staring with eyes wide open,
I am yearning for some fresh wet soil
To root my greens,gourds and creepers.
One of my apartment friends
Called me up for
An urgent supply of
Some fresh wet soil,
For a potted Tulasi plant.
Now I am all eager
To distribute the wet soil.
Soil from here ,will root deep
The plant over there
and let the breath out..
And let the Lord rest
On the stage of the world.
*******************************
ಧನ್ಯವಾದ ಸಂಗಾತಿ…ಗೆಳತಿ ಸಮತಾ
Thank you Sangaathi and Smitha
ಕನ್ನಡದ ಮಣ್ಣಿನಿಂದ ಪಾಶ್ಚಾತ್ಯರಮೆದುಳಿನ ವರೆಗೆ. ಅಭಿನಂದನೆಗಳು ಮೂಲ ಮತ್ತು ತರ್ಜುಮೆ ಮಾಡಿದವರಿಗೆ.
ಲೋಕನಾಥ್ ಅಮಚೂರು.
ಚೆಂದಿೃ ಇವೆ…
Very nice
ಅದ್ಭುತ ಕವಿತೆಯ ವಸ್ತು ಕಟು ವಾಸ್ತವ.ಅಷ್ಟೇ ಚೆಂದದ ಅನುವಾದ.ಅಭಿನಂದನೆಗಳು ಗೆಳತಿಯರಿಬ್ಬರಿಗೂ..