Day: March 8, 2021

ಇವಳಿಗೇಕೆ ಬೇರೆ ಹೆಸರು

ತಪ್ಪು-ಸರಿ ಕೇವಲ ಒಂದು ವರ್ಗಕ್ಕೆ ಸೀಮಿತವಲ್ಲ ಆದುದರಿಂದ ಇವಳಿಗೇಕೆ ಬೇರೆ ಹೆಸರು? ಸಮಾಜದಲ್ಲೊಬ್ಬರಾಗಿ ನೋಡಲು ಕಲಿಯೋಣ.

ಕ್ರಾಂತಿಯ ಕಹಳೆ 

ವಿಜ್ಞಾನದ ಪ್ರಗತಿಯ ಉಪಯೋಗಿಸುವರು
ಹೆಣ್ಣು ಭ್ರೂಣ ಪತ್ತೆಗಾಗಿ ಕ್ರೂರ ಹತ್ಯೆಗಾಗಿ
ಮನೆ ಬೆಳಗುವ ತಾಯಿ ತಂಗಿ ಹೆಂಡತಿ ಮಗಳು
ವನಿತೆಯ ವಾತ್ಸಲ್ಯದ ಪ್ರತಿರೂಪವೆಂದೇ ಮರೆವರು

ನಂಟು

ಹೆಣ್ಣು ಕ್ಷಮಯಾಧರಿತ್ರಿ ಎಂದಾಗಲೇ
ಕಂಬನಿ ಕರಗಿಸಿ
ಎಗ್ಗಿಲ್ಲದ ನೋವ ಅವುಡುಗಚ್ಚಿ
ಬಚ್ಚಿಡುವಂತಾಯಿತು

ಟೀಕೆ ವಿಮರ್ಶೆಯನ್ನು ತುಚ್ಚವೆಂದೂ, ಶತ್ರು ಮಾತ್ರ ನೀಡುವ ಕಿರುಕುಳವೆಂದೂ ತಿಳಿದ ಈ ದೇಶದಲ್ಲಿ ಭಟ್ಟಂಗಿಗಳು ವಂದಿಮಾಗಧರಿಂದ ಆಗಿರುವ ಅಪಾಯವೇ ಹೆಚ್ಚು

ಇಲ್ಲಿಯ ಸಾಧನೆ, ಸಿದ್ಧಿ, ಪ್ರಶಂಸೆ
ಪ್ರಶಸ್ತಿ ಎಲ್ಲವೂ
ಇತಿಹಾಸದ ಪುಟಗಳ ಧೂಳಾಗಿ
ವಿಸ್ಮೃತಿಯ ಸೇರುತ್ತವೆ ಎನ್ನುವುದು
ಮಾತ್ರ ಚಿರಂತನ ಸತ್ಯ’

ಲಂಕೇಶ್ ವಿಶೇಷ ಲೇಖನ ಲಂಕೇಶ್ ಒಂದು ನೆನಪು ಪಿ.ಲಂಕೇಶ್ ಅವರು ಒಬ್ಬ ಕಥೆಗಾರ,ಲೇಖಕ,ನಾಟಕಕಾರ,ಸಿನಿಮಾ ನಿರ್ದೇಶಕ,ಪತ್ರಕರ್ತ.ಎಲ್ಲಾ ಬಹುಮುಖ ಪ್ರತಿಭೆಯ ಅನಾವರಣ.ಅವರ ಪ್ರತಿಯೊಂದು ಬರಹದಲ್ಲಿ ವಾಸ್ತವವಕ್ಕೆ ಹೆಚ್ಚು ಒತ್ತು ಕೊಟ್ಟು ಬರೆಯುತ್ತಿದ್ದರು. ಒಂದು ತಲೆಮಾರನ್ನು ಪ್ರಭಾವಿಸಿದ ವ್ಯಕ್ತಿ ಪಿ ಲಂಕೇಶ್. ಜೀವನದಲ್ಲಿ ನಾವು,ಹಲವು ಲೇಖಕರ ಪ್ರಭಾವ ಬೀರುವಂತಹ ಪುಸ್ತಕಗಳನ್ನು ಓದ ಬೇಕಾಗುತ್ತದೆ,.ಅಂತಹ ಲೇಖಕರ ಪುಸ್ತಕಗಳನ್ನು ಓದುವುದರಿಂದ ನಾವು ಜೀವನವನ್ನು ನೋಡುವ ಸ್ಥಿತಿಬದಲಾಗುತ್ತದೆ. ಪುಸ್ತಕಗಳು ನಮ್ಮನ್ನು.ಪ್ರಭಾವಿಸುತ್ತವೆ,ಅವುಗಳ ಪ್ರಭಾವಕ್ಕೆ ಒಳಗಾಗಿ ಅದಕ್ಕೂ ಮೀರಿ ನಾವು ಬೆಳೆಯಬೇಕು ಅಂತವರಲ್ಲಿ ಒಬ್ಬರು ಬರಹಗಾರ  ಪಿ ಲಂಕೇಶ್. […]

Back To Top