Day: March 22, 2021

ಅಂಕಣ ಬರಹ ಖ್ಯಾತ ಲೇಖಕಿ ಶೀಲಾ ಭಂಡಾರ್ಕರ್ ಅವರಿಂದ ಅಂಡಮಾನ್ ಪ್ರವಾಸದ ವಿಶಿಷ್ಟ ಅನುಭವಗಳ ಸರಣಿಬರಹ……….. ಅದ್ಯಾಯ—ಎರಡು ಟ್ರೀಣ್ … ಟ್ರೀಣ್.. ಅಬ್ಬಾ ಯಾರಿದು ಇಷ್ಟು ಹೊತ್ತಿಗೆ ಫೋನ್ ಮಾಡ್ತಿರೋದು ಎಂದು ಗಾಬರಿಯಲ್ಲಿ ಎದ್ದರೆ.. ಎಲ್ಲಿದ್ದೇನೆಂದು ತಿಳಿಯುವುದಕ್ಕೆ ಸ್ವಲ್ಪ ಹೊತ್ತು ಬೇಕಾಯ್ತು. ಎದ್ದು ಫೋನ್ ಕೈಗೆ ತಗೊಂಡೆ.. ಹಲೋ ಎನ್ನುವುದರೊಳಗೆ ಆ ಕಡೆಯಿಂದ ಮೇಡಮ್ ಇನ್ನು ಅರ್ಧ ಗಂಟೆಯೊಳಗೆ ರೆಡಿಯಾಗಿ ಲಾಂಜ್ ಗೆ ಬನ್ನಿ ಎನ್ನುವುದು ಕೇಳಿಸಿತು. ಹೂಂ ಎನ್ನುವುದರೊಳಗೆ ಫೋನ್ ಇಟ್ಟಾಯ್ತು. ಯಾವ ಮೇಡಮ್? ಯಾವ […]

ಗುರುತು

ಬೇಡ ಬೇರಾವ ಪುರಾವೆ ನನಗೆ ಹೆಣ್ಣೆಂಬುದಕ್ಕೆ
ಬೇಡ ನನಗೆ ನಿಮ್ಮ ಗುರುತಿನ ಚೀಟಿ
ಇರಲಿ ನಿಮ್ಮ ಬಳಿಯೇ…

ಹೊಸವರುಷದ ಸಂಜೆ

ಕವಿತೆ ಹೊಸವರುಷದ ಸಂಜೆ ವೈ.ಎಂ.ಯಾಕೊಳ್ಳಿ ಆಡಿ ಬೆಳೆದ ಹೊಲತಿಂದ ಮುಟಿಗೆ ಉಂಡಿಕಾದ ದನ,ಹಿಂಡಿ ಕಾಸದೆ ಕುಡಿದ ಹಾಲುಕಳೆದ ಏಸೋ ಕಂಟಿ ಮರೆಯ ನೆನಪುಗಳುಆಗಾಗ ಕಾಡಿಅಣಕಿಸುತ್ತವೆ ಈ ಕೃತ್ರಿಮದ ಬದುಕನ್ನು ಜೋಳದ ಸಿಹಿತೆನಿ ತಿಂದ ಗಿಡಗಡಲೆಸುಟ್ಟ ಸೆಂಗಾ…ಒಂದೇ ಎರಡೇನೆನಪುಗಳ ಬೋರ್ಗರೆತಕಾಟಮಳ್ಳೇ ಕಪಾಟಮಳ್ಳೆಗುರ್ಜಿ ಆಟಗಳ ಗುಂಗುಕಿವಿಯಲ್ಲಿ ಗುಣುಗುಣಿಸಿ ಈಗಯಾವ ಚಾನಲ್ಕಿನ ಬಟನ್ನು ಒತ್ತಿದರೂಅದೇ ಅರೆಬರೆ ನಗ್ನತೆಯ ದರ್ಶನ ಬೇಸರವಾಗಿಆಗುತ್ತದೆ ಇಡಿ ಬದುಕಿನ ಬಟನ್ನೇ ಆಫ್ ಆದಂತೆ ಓಡುತ್ತಿದ್ದ ಬಂಡಿಯ ಬೆನ್ನು ಹತ್ತಿಹಿಡಿಯಲೆಳಸಿದ ಆದ ಮಂಡಿಗಾಯಕ್ಕೆಯಾವುದೊ ರಸದ ಎಲೆಯ ಹಿಂಡಿದ್ದುಪಕ್ಕದ ಬದುವಿನ […]

ಕಾವ್ಯವೆಂಬ ಕಾವು ಆರದ ಮಗ್ಗಲು

ಪುಸ್ತಕ ಸಂಗಾತಿ ಕಾವ್ಯವೆಂಬ ಕಾವು ಆರದ ಮಗ್ಗಲು ಕಾವ್ಯವೆಂಬುದು ಕಾಣುವ ಜಗತ್ತಿನೊಳಗಿನ ಕಾಣದ ಅನುಭೂತಿಯನ್ನು ಹುಡುಕುವ ಪಯಣ. ಈ ವ್ಯಕ್ತದೊಳಗಿನ ಅವ್ಯಕ್ತವನ್ನು ಹುಡುಕುವ ತಳಮಳವು ಅಲ್ಲಮನಾದಿಯಾಗಿ ನಮ್ಮ ಪರಂಪರೆಯಲ್ಲೇ ಹರಿದುಬಂದಿದೆ. ಇದಕ್ಕೆ ಆಕಾರಕೊಡುವ ಹೊಸ ಬಗೆ, ಹೊಸ ಬನಿಯಿಂದಾಗಿ ತೇಜಾವತಿಯವರ ಕವಿತೆಗಳು ನಮ್ಮೊಳಗೆ ನಿಚ್ಚಳ ಬಿಂಬವೊಂದನ್ನು ಮೂಡಿಸುತ್ತವೆ. ಕವಿತೆಯೆಂದರೆ ಮಣ್ಣಿನೊಳಗೆ ಬೀಜ ಬೆರೆತು ಮೊಳೆತು ಎಸಳೊಡೆದು ದಳಗಳಾಗಿ ಅರಳಿ ಮಿಡಿಯಾಗಿ ಕಾಯಾಗಿ ಮಾಗಿದ ಹಣ್ಣಿನಂತೆ…. (ಕವಿತೆ) ಕವಿತೆ ಅವ್ಯಕ್ತದ ದಾಹವಾಗಿದ್ದರೂ ಅದು ಅನುಭವಗಳ ಮೈಯೊಳಗೇ ಅರಳುವ ವಿದ್ಯಮಾನ. […]

Back To Top