ಕಾವ್ಯಯಾನ

ಒಲವೂ ಯುದ್ಧದ ಹಾಗೆ

Season, Pattern, Beautiful, Beauty In Nature, Vibrant Color, ...

ನಂದಿನಿ ವಿಶ್ವನಾಥ ಹೆದ್ದುರ್ಗ

ಒಲವೂ ಯುದ್ಧದ ಹಾಗೆ
ಸಿದ್ದ ಸಿದ್ಧಾಂತವಿಲ್ಲ

ಮೀರದೆ ಮೀಸಲು
ಚಹರೆ ಪಹರೆ ಅರಿತು
ನಿಖರ‌ ನಿಕಷದ ನಿಮಿತ್ತ
ಕೊಡಬೇಕು ನಿರ್ವಾತ

ಮೊಳೆಯುವ ಬೆಳೆಯುವ
ಅರಳುವ ಹೊರಳುವ
ಉರುಳುವ ಮರಳುವ
ಆಕಾಶದ ಅವಕಾಶ.

ತೆಗೆದ ಕದವೇ ಹದ.
ಹೋಗಗೊಡಬೇಕು..
ನಂಬುಗೆಗೆ ಕಳೆದ ಛಾವಿಯ
ಗೊಡವೆ ಮರೆಯಬೇಕು

ಸರಳರೇಖೆ ಹೃದಯವಾಗಲು
ಕಾಯಬೇಕು,ಬೇಯಬೇಕು
ಗಾಯಗಳ ಮಾಯಿಸಬೇಕು.
ಅರಳಿದರೆ ಬಿಳಿ..ಮಳೆಬಿಲ್ಲು

ಸಿದ್ದ ಸಿದ್ದಾಂತವಿಲ್ಲ
ಗೆದ್ದರದು ಗೆಲುವಲ್ಲ

ಒಡೆದ ಹೃದಯ ಛಿದ್ರ ಬದುಕು.
ಹೊಲೆದು ಮಡಿಸಿಟ್ಟ ಕನಸು
ಕಾಲ ನುಂಗಿ ಕಣ್ಮರೆಯಾದ ಬಣ್ಣ
ಯುದ್ಧ ಮುಗಿದ ಊರು

************8

__

One thought on “ಕಾವ್ಯಯಾನ

Leave a Reply

Back To Top