ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಶಾವ೯ರಿ ಯುಗಾದಿ

Clover on Green Surface

ರೇಖಾ ವಿ.ಕಂಪ್ಲಿ

ಯುಗಾದಿ ನಿನ್ನ ಸ್ವಾಗತಿಸುವ
ಸಂಭ್ರಮ ಸಡಗರ ಮಡುಗಟ್ಟಿದೇ
ವಿಕಾರಿ ಸಂವತ್ಸರದ ಕೊನೆಯಲಿ
ವಿಷಕಾರಿತು ಕರೋನಾ
ಜಗವ ತಲ್ಲಣಗೊಳಿಸಿದೇ
ಉಸಿರಿಸಲು ಬೇವರಿಳಿಸುವಂತೆ ಮಾಡಿದೆ
ಎಲ್ಲರನ್ನು ಮನೆಯೊಕ್ಕಿಸಿ ಬಿಟ್ಟಿದೆ
ಮಹಾಮಾರಿ ರೋಗಕ್ಕೆ ಬೆದರಿದೇ
ಜಗದೆದೆಯನು ಜಲ್ಲ ಎನ್ನಿಸಿದೆ
ಯುಗಾದಿ ನಿನ್ನ ಸ್ವಾಗತಿಸುವ
ಸಂಭ್ರಮ ಸಡಗರ ಮಡುಗಟ್ಟಿದೇ
ಮುಡಿಗಟ್ಟಿ ಅದರುಟ್ಟಡಿಗಿಸಲು
ಬಾ ಯುಗಾದಿ ಬಾ ಯುಗಾದಿ ಬಾ ………….

ಯುಗಾದಿ ಯುಗ ಯುಗಾಂತರ
ಕಳೆದರು ಹೊಸತು ತರುವ
ನಿನ್ನ ಹಚ್ಚ ತೋರಣದಿ ಆಹ್ವಾನಿಸಲು
ಶಾವ೯ರಿಯು ಕಾಯುತಿರುವಳು
ಬಾ ಯುಗಾದಿ ಬಾ ಯುಗಾದಿ ಬಾ
ಮೆಲ್ಲ ಮುದುಡಿದ ಮನಗಳ
ಮೆಲ್ಲ ಮೇಲೆತ್ತಲು ನೀ ಮೆದುವಾಗಿ ಬಾ
ಶಾವ೯ರಿಯ ಶಾಖಕ್ಕೆ ಸರಿದು ಹೋಗಲಿ
ಜಗವ ಆವರಿಸಿದ ಮಹಾಮಾರಿಗಳೆಲ್ಲಾ
ಮಯಾವಾಗಲಿ ಮತ್ತೆ ಬಾರದಾಗಲಿ
ಬಾ ಯುಗಾದಿ ಬಾ ಯುಗಾದಿ ಬಾ………….

*******

About The Author

Leave a Reply

You cannot copy content of this page

Scroll to Top