ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಬಾರೆ ಶಾರ್ವರಿ

green leafed plant

ಡಾ.ಗೋವಿಂದ ಹೆಗಡೆ

ಬಂದೆಯಾ ಬಾ ಬಾರೆ ಶಾರ್ವರಿ
ನಲವಿನೂಟೆ ತಾರೆ |
ಕಾಲನ ಕಾಲಲಿ ಕುಸಿದಿದೆ ಜನಪದ
ಬದುಕನುಣಿಸು ಬಾರೆ||

ಕಿರೀಟಿ ಕ್ರಿಮಿಯ ಬಾಧೆಯ ಬೇಗೆಗೆ
ನಲುಗಿದೆಯೇ ಜೀವ |
ನೆಲೆಗಾಣದೆ ಗೋಳಿಟ್ಟಿದೆ ಮನುಕುಲ
ತಾರೆ ಕರುಣೆ ತೇವ ||

ನಿನ್ನಯ ಹೆಸರೇ ಇರುಳೆಂದರಿತೆ
ಶಕ್ತಿಯೂ ಹೌದು ನೀನು |
ಕತ್ತಲ ಮಣ್ಣಲಿ ಬೆಳಕನು ಬೆಳೆವ
ವರವನು ನೀ ತಾರೆ ||

ಬಾಳಲಿ ಶ್ರದ್ಧೆಯ ನೀ ಮರುಕಳಿಸು
ಬೆಳೆಯಲಿ ನಿನ್ನೊಲುಮೆ |
ದುರಿತವ ದೂರಾಗಿಸಿ ನೀ ಹರಸು
ಎರೆ ನೆಮ್ಮದಿ ನಲುಮೆ ||

********

About The Author

Leave a Reply

You cannot copy content of this page

Scroll to Top