ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಭರವಸೆಯೊಂದಿರಲಿ

selective focus photography of woman holding yellow petaled flowers

ಶಾಲಿನಿ ಆರ್.

ಚಿಗುರಿದೆಲಿ ಮ್ಯಾಲೆಲ್ಲ
ಚುಂಬನವಿತ್ತಿದೆ
ಸಾವಿರ ಸೂರ್ಯಕಿರಣ
ಗಾಳ್ಯಾಗ ತೇಲಿಬರುತಿವೆ
ಹೂವ ಪರಿಮಳ
ದುಂಬಿಗದುವೆ ಪ್ರಾಣ,

ಹೊಸ ಆದಿಗೆ ತಳಿರು
ತೂಗಿವೆ ತೋರಣ
ಹೊಸ ಮನ್ವಂತರಕೆ
ರಸದೌತಣವ ಬೀಡಿಗೆ
ಪ್ರಕೃತಿ ಹಾಡಿದೆ ತಾನನ,

ಕೋಗಿಲೆಯ ಗಾನ
ದುಂಬಿಯ ಝೇಂಕಾರ
ಕೇಳುತ ಮೈಮರೆತಿವೆ
ಮರಗಳೆಲ್ಲ ಕೂತು
ಹರಸುತ ನಮ್ಮನ್ನೆಲ್ಲ,

ಬೇವಿನಮರಕದು
ಹೂವಿನ ಸೀರಿ
ಮಾವಿನ ಮರದಲಿ
ಕಾಯಿಗಳ ಮೋಡಿ
ಸುಂದರ ಸೊಬಗಿದು
ಯುಗದ ಆದಿ

ಎದಿಮನವ ಬೆಸೆದಿದೆ
ಸಿರಿ ಸಂಭ್ರಮ ಚೈತ್ರ,
ಬದುಕೆಲ್ಲ ಹಿಂಗಾ ಇರಲಿ
ಸುಖ ದುಃಖಗಳ ಬಾಳ್ವೆ
ಸಮ್ಮಿಳಿತವಾಗಿರಲಿ
ಬೇವುಮಾವುಗಳ
ಉಗಾದಿಯಾಗಿ

ಚೈತ್ರದ ಒಲುಮೆಯಿದು
ಮರಳಿ ಮರಳಿ ಬರಲಿ
ಪ್ರತಿ ವರುಷ ಹೊಸ ಹರುಷ
ಹೊಸ ಭರವಸೆಯೊಂದಿರಲಿ…

*******

About The Author

Leave a Reply

You cannot copy content of this page

Scroll to Top