ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
Image result for whitebutterfly on flowers

ಮೂಲ:ವೇನ್ ಕೌಮೌಲಿ ವೆಸ್ಟ್ ಲೇಕ್(ಹವಾಯಿ ಕವಿ)

Image may contain: 1 person, smiling, sitting

ಕನ್ನಡಕ್ಕೆ: ಕಮಲಾಕರ ಕಡವೆ

ಸಿರಿವಂತ ಮಹಿಳೆ ಬಸ್ಸಿನ ಮೇಲೆ
ಮಾತು ಮಾತು ಮಾತು
ಕೊನೆಯೇ ಇಲ್ಲ

ನಾನೊಂದು ಕಮ್ಯುನಿಸ್ಟ ಸಿಗರೆಟ್ಟು ಹಚ್ಚಿ
ಭಯಾನಕ ಹೊಗೆ ಉಗುಳಿದೆ
ಹಾ !

ನೀರು ಕುಡಿಯಿತು ಒಂದು ಆಕಳು
ಹಾಲಾಗಿ ಮರುನೀಡಿ
ನೀರು ಕುಡಿಯಿತು ಒಂದು ಹಾವು
ಹಾಲಾಹಲವ ಮರುನೀಡಿ

ಬಿಳಿ ಚಿಟ್ಟೆ ಅಟ್ಟಿ ಓಡುವ
ಬೆಕ್ಕಿಗೆ ಲೆಕ್ಕಕ್ಕಿಲ್ಲ
ಕಾಲಡಿಗಾದ ಹೂಗಳು

ಮುಂಜಾನೆ ಮೌನ ಹಿತ ಕೊಡುತ್ತಿತ್ತು
ಅಷ್ಟರಲ್ಲಿ ಹೊರಗಡೆ ಯಾರೋ
ಕಿರುಚತೊಡಗಿದರು
ದೇವರೇ ! ದೇವರೇ ! ದೇವರೇ !

ಎಷ್ಟು ವಿಭಿನ್ನ ವಿಚಾರಗಳು
ನನಗೆ ಮತ್ತು ಬೆಕ್ಕಿಗೆ
ಹಕ್ಕಿಮರಿಯೊಂದ ನೋಡುತ್ತ

ಅರಳಿದ್ದ ಗುಲಾಬಿ ನೋಡುತ್ತ ನೋಡುತ್ತ
ನಾನು ಕಾಲಿಟ್ಟೆ
ಸಗಣಿಯ ಮೇಲೆ

ಶಾಲೆಯಲ್ಲಿ ಎರಡನೆಯ ದಿನ
ನಾನು ಅಂದು ಕೊಳ್ಳುತ್ತೇನೆ –
ಪುಸ್ತಕಗಳನ್ನಲ್ಲ
ಮೋಡಗಳನ್ನು ನೋಡ ಬಯಸುತ್ತೇನೆ

ಈ ಅಕ್ಷರ, ಈ ಅಂಕಿ, ನೂರು ನೂರು !!
ಆಹಹ, ಎಂಥ ನೆಮ್ಮದಿ
ಒಂದು ಮರವ ನೋಡುವುದು

ನನ್ನ ಕವನಗಳು ಅರ್ಥಹೀನವೆಂದು
ಹೀಯಾಳಿಸಿದರು ಅವರು
ನಾನು ನಕ್ಕೆನಷ್ಟೆ,
ಎಲ್ಲರಿಗೂ ಗೋಚರಿಸುವುದಿಲ್ಲ
ಬಣ್ಣಗಳ ನಡುವೆ ರಕ್ತದ ಗೆರೆಗಳು

ಚಳಿ ಕೊರೆಯುವ ಈ ಗುಡ್ಡದನೆತ್ತಿಯಲ್ಲಿ
ಪುಟ್ಟ ಹಕ್ಕಿಯೇ ಏನು ಮಾಡುತ್ತಿರುವೆ ಏಕಾಕಿ

ಕವಿಯಾದವ ಕವನ ಖರೀದಿಸಲಾರ
ಹಾಗೆ ಖರೀದಿಸಿದರೆ ಕವಿಯಾದಾನು ಹೇಗೆ?

*******

About The Author

Leave a Reply

You cannot copy content of this page

Scroll to Top