ದಾರಾವಾಹಿ ಆವರ್ತನ ಅದ್ಯಾಯ-18 ಶಂಕರನ ಭಾಗೀವನದಲ್ಲಿ ಗೋಪಾಲನ ಮನೆಯನ್ನು ಸೇರಿಸಿ ಒಟ್ಟು ಮೂವತ್ತೊಂದು ಮನೆಗಳಿವೆ. ಮುಸ್ಲೀಮರು ಮತ್ತು ಕ್ರೈಸ್ತರನ್ನು ಹೊರತುಪಡಿಸಿ ಉಳಿದ ಬಹುತೇಕ ಜಾತಿಯವರು ಭಾಗಿವನದಲ್ಲಿ ಐದು, ಆರು, ಏಳು, ಹತ್ತು ಮತ್ತು ಇಪ್ಪತ್ತು ಸೆಂಟ್ಸ್ಗಳ ಜಾಗದ ಮಾಲಕರಾಗಿ ಹೊಸ ಮನೆಗಳ ಒಡೆಯರಾಗಿ ನೆಮ್ಮದಿಯಿಂದ ಬಾಳುತ್ತಿದ್ದಾರೆ. ಗೋಪಾಲನ ಮನೆಯ ಪಕ್ಕದ ಮನೆ ಬ್ಯಾಂಕರ್ ನಾರಾಯಣರದ್ದು. ಅವರ ಒತ್ತಿನಲ್ಲಿ ಮರದ ವ್ಯಾಪಾರಿ ಸುಂದರಯ್ಯನವರಿದ್ದಾರೆ. ಅವರಾಚೆಗಿನದ್ದು ಜೀವವಿಮಾ ಕಂಪನಿಯ ನಿವೃತ್ತ ಉದ್ಯೋಗಿ ಲಕ್ಷ್ಮಣಯ್ಯ, ಸುಮಿತ್ರಮ್ಮ ದಂಪತಿಯದ್ದು. ಅವರ ಬಳಿಕದ್ದು ಉಮೇಶಯ್ಯನದ್ದು […]
ದಾರಾವಾಹಿ ಆವರ್ತನ ಅಧ್ಯಾಯ: 17 ಏಕನಾಥರು, ಶಂಕರನ ಜಮೀನು ನೋಡಲು ಅವನೊಂದಿಗೆ ಹೊರಟಿದ್ದರು. ಶಂಕರ ತನ್ನ ಜಾಗದಲ್ಲಿ ಉದ್ಭವಿಸಿದ ನಾಗನ ಸಮಸ್ಯೆಗೆ ಪರಿಹಾರ ಮಾರ್ಗೋಪಾಯದ ಕುರಿತು ದಾರಿಯುದ್ದಕ್ಕೂ ಏಕನಾಥರೊಡನೆ ಕೆದಕಿ ಕೆದಕಿ ಪ್ರಶ್ನಿಸುತ್ತ ತನ್ನ ಭಯವನ್ನು ನಿವಾರಿಸಿಕೊಳ್ಳಲು ಹೆಣಗುತ್ತ ಕಾರು ಚಲಾಯಿಸುತ್ತಿದ್ದ. ಆದರೆ ಏಕನಾಥರು ಅತೀವ ಚಾಣಾಕ್ಷರು. ಅವರು, ಅವನ ಒಂದೊಂದು ಪ್ರಶ್ನೆಗೂ ಬಹಳವೇ ಯೋಚಿಸಿ ಪರಿಹಾರ ಸೂತ್ರವನ್ನು ಮರೆಮಾಚಿಯೇ ಉತ್ತರಿಸುತ್ತ, ಏನನ್ನೋ ಗಂಭೀರವಾಗಿ ಯೋಚಿಸುತ್ತ ಸಾಗುತ್ತಿದ್ದರು. ಕಾರಣ, ಅವರ ತಲೆಯೊಳಗೆ ಹೊಸ ಯೋಜನೆಯೊಂದು ರೂಪಗೊಳ್ಳುತ್ತಿತ್ತು. […]
ದಾರಾವಾಹಿ ಆವರ್ತನ ಅದ್ಯಾಯ-16 ಈಶ್ವರಪುರ ಪೇಟೆಯ ಸಿಟಿ ಕೋ-ಆಪರೇಟಿವ್ ಬ್ಯಾಂಕಿನಲ್ಲಿ ಚಿನ್ನವನ್ನು ಅಡವಿಟ್ಟು ಹಣ ಪಡೆದ ಗೋಪಾಲ ಸೀದಾ ಶಂಕರನ ಸೈಟಿಗೆ ಬಂದು ನಿಂತ. ಶಂಕರ ತನ್ನ ಮೇಸ್ತ್ರಿ ಸುಬ್ರಾಯನೊಡನೆ ಕಟ್ಟಡ ಕಾಮಗಾರಿಯ ಮಾತುಕತೆಯಲ್ಲಿದ್ದ. ಸ್ವಲ್ಪಹೊತ್ತಿನಲ್ಲಿ ಮೇಸ್ತ್ರಿಯನ್ನೂ ಕೂಲಿಯಾಳುಗಳನ್ನೂ ಕೆಲಸಕ್ಕೆ ತೊಡಗಿಸಿ ಗೋಪಾಲನತ್ತ ಬಂದ. ಗೋಪಾಲ, ಶಂಕರ ಹೇಳಿದ್ದಷ್ಟು ಹಣವನ್ನು ಕೊಟ್ಟು ಗುಜಿರಿಯನ್ನು ಕೊಂಡ. ಬಳಿಕ ತಾನು ಹೇಳಿದ ಜಾಗದ ವಿಷಯವಾಗಿ ಅವನೇನಾದರೂ ಮಾತಾಡುತ್ತಾನೋ ಎಂದು ಕಾದ. ಆದರೆ ಶಂಕರ ಬೇಕೆಂದೇ ಆ ವಿಷಯವನ್ನು ಮರೆತಂತೆ ನಟಿಸಿದ. […]
ದಾರಾವಾಹಿ ಅದ್ಯಾಯ-15 ಏಕನಾಥರ ಪತ್ನಿ ನೀಡಿದ ಬೆಲ್ಲದ ಕಾಫಿ ಕುಡಿದ ಶಂಕರನಿಗೆ ಕಥೆ ಹೇಳುವ ಹುಮ್ಮಸ್ಸು ಇನ್ನಷ್ಟು ಹೆಚ್ಚಿದ್ದರಿಂದ ಮತ್ತೇನೋ ನೆನಪಾಯಿತು. ‘ಅಂದಹಾಗೆ ಗುರೂಜೀ, ಪುರಂದರಣ್ಣನಿಗೆ ಆ ಕಾಡು ಜನರು ಎಲ್ಲಿ ಸಿಕ್ಕಿದರು ಅಂತ ಕೇಳಿದಿರಿಲ್ಲಾ, ಹೇಳುತ್ತೇನೆ ಕೇಳಿ. ಇಲ್ಲೆ ಸಮೀಪದ ನೆರ್ಗಿಹಿತ್ತಲು ಗ್ರಾಮದ ತಮ್ಮ ಮೂಲದ ಮನೆಯಲ್ಲಿ ಪುರಂದರಣ್ಣನಿಗೆ ಎಕರೆಗಟ್ಟಲೆ ಪಿತ್ರಾರ್ಜಿತ ಆಸ್ತಿ ಉಂಟಲ್ಲವಾ. ಆ ಹೊಲಗದ್ದೆಗಳಲ್ಲಿ ಅವರೇ ನಿಂತು ಬೇಸಾಯ ಮಾಡಿಸುತ್ತಾರೆ. ಆ ಭೂಮಿಯ ಸುತ್ತಮುತ್ತ ದಟ್ಟ ಹಾಡಿಗಳಿವೆ. ಅವುಗಳಲ್ಲಿರುವ ನೂರಾರು ಕಾಡುಹಂದಿಗಳು ಯಾವಾಗಲೂ […]
ದಾರಾವಾಹಿ ಅಧ್ಯಾಯ: 14 ಶಂಕರನ ರೋಚಕ ಪ್ರಹಸನವನ್ನು ಏಕನಾಥರು ತಮ್ಮ ಕಣ್ಣು ಕಿವಿಗಳೆರಡನ್ನೂ ಒಂದು ಮಾಡಿ ಅರೆಬಾಯಿ ಬಿಟ್ಟುಕೊಂಡು ಕೇಳುತ್ತಿದ್ದರೆ ಅತ್ತ ದೇವಕಿ ಒಳಕೋಣೆಯ ದಾರಂದಕ್ಕೊರಗಿ ಕುತೂಹಲದಿಂದ ಆಲಿಸುತ್ತಿದ್ದಳು. ಆದರೆ ಅವಳನ್ನು ಗಮನಿಸಿದ ಮೇಲೆಯೇ ಶಂಕರನ ಕಥೆಯಲ್ಲಿ ದುಪ್ಪಟ್ಟು ನವರಸಗಳು ತುಂಬಿ ತುಳುಕತೊಡಗಿದವು ಎಂಬುದು ಏಕನಾಥರಿಗೆ ತಿಳಿಯಲಿಲ್ಲ. ಆದ್ದರಿಂದ ಕಥೆ ಕೇಳುವ ಆತುರದಲ್ಲಿದ್ದ ಅವರು, ‘ಮತ್ತೇನಾಯಿತು ಮಾರಾಯಾ…? ಆ ಹಂದಿ ನಿನ್ನ ಪುರಂದರಣ್ಣನ ಕುಂಡೆಗೆ ತಿವಿದೇ ಬಿಟ್ಟಿತಾ ಹೇಗೇ…!’ ಎಂದು ಹಾಸ್ಯ ಮಾಡಿ ನಕ್ಕರು. ಆಗ ಶಂಕರ […]
‘ಅಲ್ಲಾ ಗುರೂಜಿ, ಇದೇನಿದು..? ಇಷ್ಟು ವರ್ಷಗಳ ಕಾಲ ಬೊಂಬೈಯಲ್ಲಿದ್ದು ಬಂದವರು ನೀವು ಏನೂ ಮಾಡಲಿಲ್ಲವಾ!?’ ಎಂದು ಬಾಯಿ ತಪ್ಪಿ ಅಂದವನು ತಕ್ಷಣ ನಾಲಗೆ ಕಚ್ಚಿಕೊಂಡ. ಆದರೆ ಬಳಿಕ ಅದನ್ನೇ ಸಮರ್ಥಿಸಿಕೊಂಡಂತೆ ಅವರನ್ನು ದಿಟ್ಟಿಸಿದ. ಅಷ್ಟು ಕೇಳಿದ ಏಕನಾಥರಿಗೆ ಅಲ್ಲೇ ಸತ್ತವಷ್ಟು ಹಿಂಸೆಯಾಯಿತು.
ದಾರಾವಾಹಿ- ಅದ್ಯಾಯ-12 ತನ್ನ ಕುತಂತ್ರಕ್ಕೆ ಬಲಿಯಾಗಿ ಬೀದಿ ಬಿಕಾರಿಯಾದ ಸಂತಾನಪ್ಪ, ಇಂದಲ್ಲ ನಾಳೆ ರಾತ್ರೋರಾತ್ರಿ ಊರು ಬಿಟ್ಟೇ ಓಡಿ ಹೋಗುತ್ತಾನೆ ಅಥವಾ ಮುಂಚಿನಂತೆಯೇ ಬಾಲ ಮುದುರಿ ಕೂಲಿನಾಲಿ ಮಾಡಿಕೊಂಡು ಬದುಕುತ್ತಾನೆ ಎಂದು ಭಾವಿಸಿದ್ದ ಶಂಕರನ ಯೋಚನೆಯು ಪರಮೇಶನ ಬಿಸಿಬಿಸಿ ಸುದ್ದಿಯಿಂದ ಪೂರ್ತಿ ತಲೆಕೆಳಗಾಗಿಬಿಟ್ಟಿತು. ಬಯಲುಸೀಮೆಯ ಒಣಹವೆಯನ್ನೂ ಖಡಕ್ ಜೋಳದ ರೊಟ್ಟಿಯೊಂದಿಗೆ ಈರುಳ್ಳಿ ಮತ್ತು ಹಸಿ ಮೆಣಸಿನಕಾಯಿಯಂಥ ವ್ಯಂಜನವನ್ನು ಜಜ್ಜಿ ಜಗಿದುಣ್ಣುತ್ತ ಒರಟು ಮಂದಿಯ ನಡುವೆ ಹುಟ್ಟಿ ಬೆಳೆದ, ಆರಡಿ ಎತ್ತರದ ಆಜಾನುಬಾಹು ಸಂತಾನಪ್ಪ ಬಡತನದ ಬೇಗೆಯಿಂದ ಮುಗ್ಧ […]
ದಾರಾವಾಹಿ- ಅದ್ಯಾಯ-11 ಅದೃಷ್ಟದಿಂದಲೋ, ದೈವಕೃಪೆಯಿಂದಲೋ ಮನುಷ್ಯನಿಗೆ ದೊರಕುವ ಸುಖ ಸಂಪತ್ತು ಕೆಲವೊಮ್ಮೆ ಅವನನ್ನು ಎಂಥ ಕಾರ್ಯಕ್ಕಾದರೂ ಪ್ರೇರೇಪಿಸಬಲ್ಲದು ಎಂಬುದಕ್ಕೆ ಸಂತಾನಪ್ಪ ಕಿಲ್ಲೆಯೇ ಸಾಕ್ಷಿಯಾಗುತ್ತಾನೆ. ಅವನು ತನ್ನ ದಿಢೀರ್ ಶ್ರೀಮಂತಿಕೆಯಿಂದಲೂ, ಗಂಡಸುತನದ ಕೊಬ್ಬಿನಿಂದಲೂ ಮಸಣದ ಗುಡ್ಡೆಯ, ತನಗಿಂತ ಇಪ್ಪತ್ತು ವರ್ಷ ಕಿರಿಯಳಾದ ದ್ಯಾವಮ್ಮ ಎಂಬ ಹುಡುಗಿಯನ್ನು ಒಲಿಸಿ ತನ್ನವಳನ್ನಾಗಿಸಿಕೊಂಡ ವಿಷಯವು ಅವಳ ಪ್ರಿಯಕರ ಪರಮೇಶನಿಗೆ ತಿಳಿದುಬಿಟ್ಟಿತು. ಪರಮೇಶ ದ್ಯಾವಮ್ಮಳನ್ನು ಪ್ರಾಣಕ್ಕಿಂತ ಮಿಗಿಲಾಗಿ ಪ್ರೀತಿಸುತ್ತಿದ್ದವನು ಕಂಗಾಲಾಗಿಬಿಟ್ಟ. ಸಂತಾನಪ್ಪ ತನ್ನ ಹುಡುಗಿಯನ್ನು ಯಾವತ್ತು ಮರುಳು ಮಾಡಿ ಬಗಲಿಗೆಳೆದುಕೊಂಡನೋ ಆವತ್ತಿನಿಂದ ಪರಮೇಶನಿಗೆ ಜೀವನದಲ್ಲಿ […]
ದಾರಾವಾಹಿ ಅದ್ಯಾಯ-10 ಸಂತಾನಪ್ಪನ ಶ್ರೀಮಂತಿಕೆಯನ್ನು ಕಂಡು ಶಂಕರ ಬೆಕ್ಕಸ ಬೆರಗಾಗಿದ್ದ! ಹಿಂದೊಮ್ಮೆ ತನ್ನೊಂದಿಗೆ ಮೂರುಕಾಸಿಗೆ ದುಡಿಯುತ್ತಿದ್ದಂಥ ಆ ಗಂಡ, ಹೆಂಡತಿ ಒಮ್ಮೆ ಹೇಳದೆ ಕೇಳದೆ ಓಡಿ ಹೋಗಿದ್ದು ಮಾತ್ರವಲ್ಲದೇ ತನ್ನ ಬದ್ಧ ವೈರಿ ರಘುಪತಿಯೊಂದಿಗೆ ಸೇರಿಕೊಂಡಿದ್ದನ್ನು ತಿಳಿದು ಅವರ ಮೇಲೆ ವಿಪರೀತ ಕುಪಿತನಾಗಿದ್ದ. ಆದರೆ ರಘುಪತಿಯೊಂದಿಗೆ ಮರಳಿ ಜಗಳವಾಡಲು ಅವನಿಗೆ ಧೈರ್ಯವಿರಲಿಲ್ಲ. ಆದ್ದರಿಂದ ತಾನು ಮನಸ್ಸು ಮಾಡಿದರೆ ಸಂತಾನಪ್ಪನಂಥ ಸಾವಿರ ಕೂಲಿಯಾಳುಗಳನ್ನು ಉತ್ತರ ಕರ್ನಾಟಕದಿಂದಲ್ಲದೇ ಉತ್ತರ ಭಾರತದಿಂದಲೂ ತರಿಸಿಕೊಳ್ಳಬಲ್ಲೆ! ಎಂದು ತನ್ನನ್ನು ತಾನೇ ಸಮಾಧಾನಿಸಿಕೊಂಡವನು ತನ್ನನ್ನು ತೊರೆದು […]
ಹಾಗಾಗಿ ತನ್ನ ಹೆಸರಿಗೆ ತಕ್ಕಂತೆ ಮಸಣದಗುಡ್ಡೆಯ ಕೂಲಿ ಕಾರ್ಮಿಕರ ಕಾಲೋನಿಯ, ತನ್ನದೇ ಜಾತಿಯ ಹರೆಯದ ಹುಡುಗಿಯೊಬ್ಬಳನ್ನು ಮೋಹಿಸಿ ಬಲೆಗೆ ಬೀಳಿಸಿಕೊಂಡು, ‘ಮೇಲ್ಸಂಸಾರ’ ಹೂಡಲು ಮನಸ್ಸು ಮಾಡಿದ