Category: ಗಝಲ್

ಗಜಲ್

ಗಜಲ್ ಪ್ರಭಾವತಿ ಎಸ್ ದೇಸಾಯಿ ಬಾನಲಿ ಹಾರುವ ಪತಂಗದ ನೂಲು ಕೆಳಗಿಟ್ಟಿರುವೆ ಶಿವಾತೊಗಲು ಗೊಂಬೆಗಳ ಆಡಿಸುವ ಸೂತ್ರ ಮೇಲಿಟ್ಟಿರುವೆ ಶಿವಾ ಕುರುಡು ಕಾಂಚಾಣವು ತಿಪ್ಪೆಯಲಿ ಬಿದ್ದು ಒದ್ದಾಡುತಿದೆಹಸಿವು ಇಂಗಿಸುವ ಆ ಶಕ್ತಿ ನೇಗಿಲಿಗೆ ಕೊಟ್ಟಿರುವೆ ಶಿವಾ ಸಂತೆಯಲಿ ಜೀವಾನಿಲ ಸಿಗದೆ ಪ್ರಾಣಪಕ್ಷಿ ಬಿಕ್ಕುತಿದೆಪ್ರಕೃತಿಯ ಒಡಲಲಿ ಪ್ರಾಣವಾಯು ಮುಚ್ಚಿಟ್ಟಿರುವೆ ಶಿವಾ ಅವನಿಯ ಹುಳು ಹೆಮ್ಮೆಯಲಿ ಶಶಿ ಅಂಗಳದಲಿ ತೆವಳುತಿದೆಇಳೆಯ ನಂದನವನ ನಾಶ ಮಾಡಿ ಮಸಣ ಕಟ್ಟಿರುವೆ ಶಿವಾ ಜಗದ ಸೃಷ್ಟಿಯ ಸೊಬಗು ಕಾಣದೆ “ಪ್ರಭೆ” ಯ ಮನ ನರಳುತಿದೆಮುಗ್ಧ […]

ಗಜಲ್

ಅರಿಷಡ್ವರ್ಗಗಳಿಗೆ ಅಂಕುಶ ಹಾಕಿ ನೀ ವಿಶ್ವ ಮಾನವನಾಗು ಅಬಾಟೇ
ಪಂಚ ಭೂತಗಳ ಮುನಿಸಿನ ಕೈ ವಶವಾಗುತ್ತಿರುವೆ ಇದು ನಿನ್ನ ಕರ್ಮಫಲ

ಗಜಲ್

ತುತ್ತು ಕೂಳಿಗೂ ಪರದಾಡುವ ಪರಿಸ್ಥಿತಿ
ಬೇತಾಳದಂತೆ ಬೆನ್ನುಹತ್ತಿದೆಯಲ್ಲ|
ಮುಳ್ಳುಕಂಟಿಯಲಿ ಸಾವಿನ ಸೋಪಾನವ
ತುಳಿಯುತ್ತಿದೆ ಈ ಬಾಲೆ||

ಗಜಲ್

ಈ ದೇಹಕೆ ಅವಳೇ ಉಸಿರೆಂಬ ಭ್ರಮೆಯಲಿ ಮುಳುಗಿದ್ದೆ
ಒಲವ ರಸಪಾಕ ಉಣಿಸಿದರೂ ಪ್ರೀತಿಸಲಿಲ್ಲ ಅವಳು

ಗಜಲ್

ಗಾಯವಿನ್ನೂ ಹಾಗೇ ಇದೆ ಮತ್ತೇಕೆ ಬರೆ ಎಳೆವೆ
ದಯೆ ತೋರುವ ಒಲುಮೆಯನ್ನೇ ಮರೆಯುತ್ತಿರುವೆಯಾ ದೇವಾ

ಗಜಲ್

ಭೋಜರಾಜ ಕಾಳಿದಾಸನಿಂದ ಶ್ರದ್ದಾಂಜಲಿ ಕೇಳಿ ಖುಷಿ ಪಟ್ಟು ಜೀವ ಬಿಟ್ಟಿದ್ದನಂತೆ ಆಗ
ಬದುಕಿನ ಅವಿಸ್ಮರಣೀಯ ಘಟನೆ ನೆನಪಿಸಿ ಆ ಜೀವಗಳಿಗೆ ಖುಷಿ ಕೊಡಬಹುದು ಈಗ

ಗಜಲ್

ಗಜಲ್ ಎ . ಹೇಮಗಂಗಾ ರೋಗಿಗಳ ಶುಶ್ರೂಷೆಯಲಿ ನಿರತರಾಗಿದ್ದೇವೆ ಪ್ರಾಣವನ್ನು ಪಣಕ್ಕಿಟ್ಟುನಿರೋಗಿಯಾಗಲೆಂದು ಶ್ರಮಿಸುತ್ತಿದ್ದೇವೆ ಪ್ರಾಣವನ್ನು ಪಣಕ್ಕಿಟ್ಟು ನಮಗೂ ಬದುಕಿದೆ ಎಂಬುದನೇ ಮರೆತು ಬದುಕಬೇಕಿದೆ ಇಂದುಹಗಲಿರುಳು ನಿರುತ ದುಡಿಯುತ್ತಿದ್ದೇವೆ ಪ್ರಾಣವನ್ನು ಪಣಕ್ಕಿಟ್ಟು ಕಡುವೈರಿ ವೈರಾಣು ಮಹಾಮಾರಿಯಾಗಿ ಪಂಥಾಹ್ವಾನ ನೀಡಿದೆರಣಕಲಿಯಂತೆ ಹೋರಾಡುತ್ತಿದ್ದೇವೆ ಪ್ರಾಣವನ್ನು ಪಣಕ್ಕಿಟ್ಟು ಸಾವಿನ ಕಬಂಧಬಾಹು ಉಸಿರುಗಟ್ಟಿಸಿದೆ ವಯೋಭೇದವಿಲ್ಲದೇಪಾರಾಗುವ ದಾರಿಯ ಅರಸುತ್ತಿದ್ದೇವೆ ಪ್ರಾಣವನ್ನು ಪಣಕ್ಕಿಟ್ಟು ತೂಗುಗತ್ತಿ ಎಂದು ಬೀಳುವುದೋ ಭಯ ಬೇರೂರಿದೆ ಎದೆಯಲ್ಲಿಜೀವಗಳ ಉಳಿಸಲು ಪಣ ತೊಟ್ಟಿದ್ಧೇವೆ ಪ್ರಾಣವನ್ನು ಪಣಕ್ಕಿಟ್ಟು **************************

ಗಜಲ್

ಗಜಲ್ ಸಿದ್ಧರಾಮ ಹೊನ್ಕಲ್ ಏಳು ದಶಕಗಳೇ ಕಳೆದವು ಹೊಸ ಮಳೆಯು ಸುರಿಯಲಿಲ್ಲ ನೋಡು ಸಾಕಿಭೂತಾಯಿ ಮಕ್ಕಳ ಬಂಜೆತನ ಹಿಂಗಲೇಯಿಲ್ಲ ನೋಡು ಸಾಕಿ ದುಡಿ ದುಡಿದು ನೊಂದ ರೈತನ ಮುಖದಲ್ಲಿ ನಗೆಯು ಅರಳಲಿಲ್ಲಜಗಕೆ ಅನ್ನ ಹಾಕುವವರ ಬಾಯಿಯೇ ಸಿಹಿಯಾಗಲಿಲ್ಲ ನೋಡು ಸಾಕಿ ಗಾಂಧಿ ಕಂಡ ಗ್ರಾಮೀಣ ಭಾರತದ ಕನಸುಗಳೆಲ್ಲ ಜಾರಿ ಕಡಲ ಪಾಲಾದವು ಈ ಮಣ್ಣಲಿಹಳ್ಳಿ ಹಳ್ಳಿಗಳೆಲ್ಲ ಗುಳೇ ಎದ್ದು ಹೋಗಿ ಸುಖವೆಂಬುದೇ ಸುಳಿಯಲಿಲ್ಲ ನೋಡು ಸಾಕಿ ಕುರ್ಚಿಯ ಕನಸಿನಲಿ ಸ್ವಾರ್ಥದ ಸೆಳವಿನಲಿ ದೇಶ ನಮ್ಮ ನಮ್ಮವರಲ್ಲಿಯೇಹರಾಜಾಯಿತುಅಧಿಕಾರದ ಅಮಲಿನಲ್ಲಿ […]

ಗಜಲ್

ಗಜಲ್ ಅರುಣಾ ನರೇಂದ್ರ ಇಲ್ಲಿ ಉಸಿರಿಗಾಗಿ ಒದ್ದಾಡುತ್ತಿದ್ದಾರೆ ಹೇಗೆ ಈದ್ ಆಚರಿಸಲಿಅಲ್ಲಿ ಬದುಕಿಗಾಗಿ ಹುಡುಕಾಡುತ್ತಿದ್ದಾರೆ ಹೇಗೆ ಈದ್ ಆಚರಿಸಲಿ ಚಂದ್ರಮನ ಮುಖ ನೋಡಿ ತಿಂಗಳ ಪೂರ್ತಿ ರೋಜಾ ಮಾಡಿರುವೆಇವರು ನೋಟುಗಳ ಮುದ್ದಾಡುತ್ತಿದ್ದಾರೆ ಹೇಗೆ ಈದ್ ಆಚರಿಸಲಿ ಶಹರಿ ಹೊತ್ತಲ್ಲಿ ಸತ್ತವರು ನೆನಪಾಗಿ ಕಣ್ಣು ತುಂಬಿಕೊಳ್ಳುತ್ತವೆಇಫ್ತಾರ್ ಮಾಡುತ್ತ ಮಿಡುಕಾಡುತ್ತಿದ್ದಾರೆ ಹೇಗೆ ಈದ್ ಆಚರಿಸಲಿ ಹಗಲೆನ್ನದೆ ಇರುಳೆನ್ನದೆ ನಮಾಜು ಮಾಡಿ ದುವಾ ಬೇಡಿದ್ದೇನೆದೇಶದ ದಳ್ಳುರಿ ತಣ್ಣಗಾಗದೆ ತಡಕಾಡುತ್ತಿದ್ದಾರೆ ಹೇಗೆ ಈದ್ ಆಚರಿಸಲಿ ಕೆಂಪಾದ ಮೆಹಂದಿಯ ರಂಗು ಕಣ್ಣ ಸುರುಮಾವನ್ನೇ ಇರಿಯುತ್ತಿದೆಕಾಣದ […]

Back To Top