ಗಾಂಧಿ ಜಯಂತಿ ವಿಶೇಷ ಮಗುವಾಗಿ ಬಿಟ್ಟ ಗಾಂಧಿ ಅಜ್ಜನ ಫೋಟೋ ಅಲ್ಲಿಇಟ್ಟಿದ್ರಪ್ಪ ಹಾಗೆಹೂಗಳ ಮಾಲೆ ಎಲ್ಲ ತಂದುತುಂಬಿದ್ರಪ್ಪ ಹೀಗೆ ಹಣ್ಣು ಬೆಲ್ಲ ಇಟ್ಟಿದ್ರಲ್ಲಿಘಮ ಘಮ ಕಡ್ಡಿಯ ಕಂಪುಪುಟ್ಟ ಹಾಗೇ ನೋಡ್ತಾ ಇದ್ದಹತ್ತಿತು ಅವನಿಗೆ ಜೊಂಪು ಹಣ್ಣು ಹೂವು ಯಾವುದು ಮುಟ್ಟದೆಗಾಂಧಿ ತಾತ ಬಂದಪುಟ್ಟನ ಹತ್ತಿರ ಏನೋ ಹೇಳುತಬಾರೋ ಜೊತೆಯಲಿ ಎಂದ ತಾತನ ನಡಿಗೆ ಎಷ್ಟು ಜೋರುಪುಟ್ಟುಗೆ ಓಡುವ ಆಟಅನಾತ ಅಜ್ಜಿಯ ಜೋಪಡಿ ಹೊಕ್ಕುಕುಡಿದನು ನೀರಿನ ಲೋಟ ಅಲ್ಲಿಂದಿಲ್ಲಿಗು ಕೇಳುತ ಬಂದಗಿಡಗಳ ಬೆಳೆಸಿಲ್ಲೇನುಹೀಗೇ ಗಿಡಗಳ ಕಡಿಯುತ ಉಳಿದರೆನರಕವ ಕಟ್ಟುವ […]
ಇರುಳೆಲ್ಲಾ ಮೋಜು ಮಸ್ತಿಮಾಡಿ ನಶೆಯಲಿ ಹೊರಳಾಡುವರು
ಹಗಲು ಉಪವಾಸ ಸತ್ಯಾಗ್ರಹದಲ್ಲಿ ಪಾಲುಗೊಂಡರು ನೋಡು
ಭಾಷಾ ಕಲಿಕೆ
ಲೇಖನ ಭಾಷಾ ಕಲಿಕೆ ಗಣಪತಿ ಹೆಗಡೆ ಗುಡಿಯಾ ಖಾನಾ ಖಾಯಾ?’, ಸಾಯಂಕಾಲ ನಾಲ್ಕೂವರೆಗೆ ಮೊಮ್ಮಗಳನ್ನು ಟ್ರೋಲಿಯಲ್ಲಿ ಕೂಡ್ರಿಸಿ ಕೊಂಡು ಅಪಾರ್ಟ್ ಮೆಂಟಿನ ಸುತ್ತಲೂ ತಿರುಗಾಡಲು ತೆಗೆದುಕೊಂಡು ಹೋದಾಗ ಗೇಟಿನ ಬಾಗಿಲಿನಲ್ಲಿ ಕಾಯುತ್ತಿರುವ ಕಾವಲುಗಾರ ಮೊದಲು ನನ್ನ ಮೊಮ್ಮಗಳಲ್ಲಿ ಕೇಳುವುದು ಈ ವಾಕ್ಯ. ಪಾಪ ಅವಳೇನು ಹೇಳಿಯಾಳು. ಹತ್ತು ತಿಂಗಳ ಎಳಗೂಸು ಅವಳು. ‘ತಿಂದಾತಾ’? ಅವನು ಕೇಳಿದ ಪ್ರಶ್ನೆ ಅವಳಿಗೆ ಅರ್ಥವಾಗಲಿ ಅಂತ ನಾನು ಅದನ್ನೇ ಕನ್ನಡದಲ್ಲಿ ಕೇಳುತ್ತಿದ್ದೆ. ಆಗ ‘ಹೂಂ’ ಎನ್ನುತ್ತಿದ್ದಳು. ಕಾವಲುಗಾರನಿಗೂ ತಾನು ಕೇಳಿದ ಪ್ರಶ್ನೆಗೆ […]
ಹಿರಿಯರು ಹೊರೆಗಳಾಗದಿರಲಿ
ಲೇಖನ ಹಿರಿಯರು ಹೊರೆಗಳಾಗದಿರಲಿ ವಿಶ್ವನಾಥ ಎನ್ ನೇರಳಕಟ್ಟೆ [6:36 am, 26/09/2021] ಸಂಗಾತಿ ಸಾಹಿತ್ಯ ಪತ್ರಿಕೆ: ಸುರಕ್ಷಾ ವೃದ್ಧಾಶ್ರಮ’ ಹೀಗೆಂದು ಕೆಂಪು ಅಕ್ಷರಗಳಲ್ಲಿ ಬರೆದಿದ್ದ ಬೋರ್ಡನ್ನು ನೆತ್ತಿ ಮೇಲೆ ಹೊತ್ತುಕೊಂಡಂತೆ ಕುಳಿತಿದ್ದ ನಾರಾಯಣರಾಯರ ಕಣ್ಣಿನ ತುಂಬ ಅಸಹಾಯಕತೆಯಿತ್ತು. ‘ಎರಡು ದಿನಗಳ ಇಲ್ಲಿಯ ಬದುಕೇ ಸಾಕಾಗಿಹೋದಂತಿದೆ ನಿಮಗೆ’, ಪಕ್ಕದಲ್ಲಿ ಕುಳಿತಿದ್ದ ವೃದ್ಧರು ಪ್ರಶ್ನಿಸಿದರು. ಉತ್ತರಿಸಬೇಕೆಂದು ಇವರಿಗೆ ಅನಿಸಲಿಲ್ಲ. ಮಗ ತನ್ನನ್ನು ಇಲ್ಲಿ ಬಿಟ್ಟುಹೋದ ಸನ್ನಿವೇಶ ಅವರ ಕಣ್ಣೆದುರು ತಾಂಡವವಾಡತೊಡಗಿತ್ತು. “ಅಪ್ಪಾ, ನಿಧಾನಕ್ಕೆ ಬನ್ನಿ. ಅಲ್ಲಿ ಮೆಟ್ಟಿಲು ಇದೆ ನೋಡಿ. […]
ಮಿಸ್ ಯೂ ಡ್ಯಾಡಿ
ನೆನಪು ಮಿಸ್ ಯೂ ಡ್ಯಾಡಿ ಮೌಲ್ಯಗಳ ಸಂಪುಟ ನನ್ನಪ್ಪ ಎಪ್ರಿಲ್ ತಿಂಗಳ ಸಮಯ ಬೆಂಗಳೂರಿನ ಸೆಂಟ್ರಲ್ ಸ್ಕೂಲಲ್ಲಿ ಇಂಗ್ಲಿಷ್ ಮೌಲ್ಯಮಾಪನ ನಡೆದಿತ್ತು.ನನ್ನ ತಂದೆ ಮಲ್ಲಣ್ಣ ಭರಮಪ್ಪ ತಿರ್ಲಾಪುರ ಇಂಗ್ಲಿಷ್ ಪ್ರಾಧ್ಯಾಪಕರು, ಮಾಮಲೆ ದೇಸಾಯಿ ಹೈಸ್ಕೂಲ್ ಶಿಗ್ಗಾವಿ, ಮೌಲ್ಯಮಾಪನಕ್ಕೆ ಅಲ್ಲಿ ಹಾಜರಿದ್ದರು. ಬೆಂಗಳೂರಿಗೆ ಬರುವಾಗ ತುಂಬು ಗರ್ಭಿಣಿಯಾದ ಕಿರಿ ವಯಸ್ಸಿನ ಹೆಂಡತಿಯನ್ನು ಅರೆಮನಸ್ಸಿನಿಂದಲೇ ಬಿಟ್ಟು ಬಂದಿದ್ದರು. ಬೆಂಗಳೂರಿಗೆ ಬಂದು ಒಂದು ವಾರಕ್ಕೆ ಅವರಿಗೆ ಒಂದು ಪತ್ರ ಬರುತ್ತದೆ. ಅದು ಮೊದಲ ಮಗುವಿನ ಜನನದ ಕುರಿತಾದ ಪತ್ರ. ಅಕಸ್ಮಾತಾಗಿ ಆ […]
ಧಾರಾವಾಹಿ ಆವರ್ತನ ಅದ್ಯಾಯ-35 ಗುರೂಜಿಯವರು ರೋಹಿತ್ ನ ನಿರುತ್ಸಾಹವನ್ನು ಗಮನಿಸಿದರಾದರೂ ಅದನ್ನು ಗಣನೆಗೆ ತೆಗೆದುಕೊಳ್ಳದೆ, ‘ದಾರಿ ಬಹಳ ಸುಲಭದ್ದೇ ರೋಹಿತರೇ. ನಮ್ಮ ಜನಸಾಮಾನ್ಯರಲ್ಲಿ ಯಾವೊಂದು ಹೊಸ ಬದಲಾವಣೆ ತರಬೇಕಿದ್ದರೂ ಅಥವಾ ಅವರು ತಮ್ಮ ಜೀವನದಲ್ಲಿ ಯಾವುದೇ ಲಾಭ, ಯಶಸ್ಸು ಗಳಿಸಬೇಕಿದ್ದರೂ ಅಂಥವರೊಳಗೆ ಯಾವುದಾದರೊಂದು ವಿಷಯದಲ್ಲಿ ಅತಿಯಾದ ಭಯವಿರಬೇಕು. ಆಗಲೇ ಅವರು, ನಮ್ಮ ದೇವರು ದಿಂಡರುಗಳ ಮೊರೆ ಹೋಗಲು ಸಾಧ್ಯ ಎಂಬುವುದನ್ನು ನಾವು ಅನುಭವದಿಂದಲೇ ಕಂಡಿದ್ದೇವೆ. ಹೀಗಾಗಿ ಅವರಲ್ಲಿ ಅಂಥ ಸಾತ್ವಿಕ ಭಯವೊಂದನ್ನು ನಾವು ಸೃಷ್ಟಿಸಬೇಕು. ಅದು ಹೇಗೆ? […]
ಮಾತಾಗುವ ಮೌನ ಮತ್ತು ಮೌನದೊಳಗಣ ಮಾತು
ವೇದಿಕೆಯಲ್ಲಿದ್ದ ಮತ್ತೊಬ್ಬ ಮುಖಂಡ ಮೌನವಾಗಿ ಗಲ್ಲದ ಮೇಲೆ ಕೈಯ್ಯಿಟ್ಟು ಕುಳಿತಿದ್ದ. ತನ್ನ ವಿರುದ್ಧ ಬಂದ ಅಭಿಪ್ರಾಯಗಳನ್ನು ಆತ ಮನಸ್ಸಿಗೆ ಹಚ್ಚಿಕೊಂಡಂತೆ ಕಾಣಿಸಲೇ ಇಲ್ಲ. ಆತನ ಮೌನಪರ್ವತವನ್ನು ಮೀರುವುದು ತಮ್ಮಿಂದಾಗದ ಕೆಲಸ ಎಂದುಕೊಂಡ ಭಿನ್ನಾಭಿಪ್ರಾಯಿಗಳು ಆತನನ್ನು ಕೆಣಕುವುದಕ್ಕೆ ಹೋಗಲೇ ಇಲ್ಲ.
ಧಾರಾವಾಹಿ ಆವರ್ತನ ಅದ್ಯಾಯ-34 ಆವರ್ತನ ಅಧ್ಯಾಯ: 34 ಗುರೂಜಿಯವರು ತಾವು ಮಸಣದ ಗುಡ್ಡೆಯ ನಾಗಬನವನ್ನು ಜೀರ್ಣೋದ್ಧಾರಗೊಳಿಸಲು ಇಚ್ಛಿಸಿದ ಕಾರ್ಯಕ್ಕೆ ಸಂಬಂಧ ಪಟ್ಟ ಹೊಸ ವಿಚಾರವೊಂದನ್ನು ಇತ್ಯಾರ್ಥಗೊಳಿಸಲು ಮನಸ್ಸು ಮಾಡಿ ಫೋನೆತ್ತಿಕೊಂಡವರು, ‘ಓಂ ನಾಗಾಯ ನಮಃ…!’ ಎಂದು ಭಾವಪೂರ್ಣವಾಗಿ ಅಂದು, ‘ನಮಸ್ಕಾರ ರೋಹಿತ್ ಅವರೇ… ನಾವು ಏಕನಾಥ ಗುರೂಜಿಯವರು ಮಾತಾಡ್ತಿರೋದು ಹೇಗಿದ್ದೀರೀ ತಾವು…?’ ಎಂದು ವಿಚಾರಿಸಿದರು. ರೋಹಿತ್ ಈಶ್ವರಪುರದ ಒಬ್ಬ ಪ್ರಸಿದ್ಧ ಉರಗಪ್ರೇಮಿ. ಅವನು ತನ್ನ ನಾಡಿನ ಅಪೂರ್ವ ಉರಗಸಂತತಿಯನ್ನು ಸಂರಕ್ಷಣೆ ಮಾಡುತ್ತ ಬಂದವನಲ್ಲದೇ ಆ ಸರೀಸೃಪ […]
ಹಿಂದಿ ಹೇರಿಕೆ ಹಿಂದಿರುವ ಭಾಷಾ ರಾಜಕಾರಣ
ಹಿಂದಿ ಹೇರಿಕೆಯ ಹಿಂದೆ ಭಾಷಾ ರಾಜಕಾರಣದ ನಂಟಿದೆ. ಒಟ್ಟಾರೆಯಾಗಿ ಒಂದೇ ಏಟಿಗೆ ಭಾರತದ ಮೂಲ ಭಾಷೆಗಳಾದ ಕನ್ನಡ, ತಮಿಳು, ತೆಲುಗು, ಮಲೆಯಾಳಿ ಹಾಗೂ ಮರಾಠಿ ಸೇರಿದಂತೆ ಅನೇಕ ಪ್ರಾದೇಶಿಕ ತಾಯ್ತನದ ಭಾಷೆಗಳನ್ನು ಮುಗಿಸುವ ಹುನ್ನಾರವಿದೆ.
ಸವಾಲ್
ಸವಾಲ್ ದಾರನು ಹಣವನ್ನು ಪಡೆದು ಜರಿ ಸೀರೆಯನ್ನು ಕುತೂಹಲ ನಿರೀಕ್ಷಿಯಲ್ಲಿರುವ, ಐದನೇ ಸೀಟಿನಲ್ಲಿರುವವನ ಪತ್ನಿಗೇ ನೇರವಾಗಿ ಕೊಟ್ಟನು. ಅವಳು ಆ ಸೀರೆಯನ್ನು ಮತ್ತೊಮ್ಮೆ ಬಿಚ್ಚಿ ಕೈಯಾಡಿಸಿ ನೋಡಿ ಸಂತಸಬಟ್ಟು ಮಡಚಿ ಪಕ್ಕದಲ್ಲಿಟ್ಟು ಕೊಂಡಳು.