ಭಾವಲಹರಿ
ಲಹರಿ ಭಾವಲಹರಿ ರಶ್ಮಿ.ಎಸ್. ಸೌಹಾರ್ದ, ಸಹಬಾಳ್ವೆ ಮುಂತಾದ ಪದಗಳನ್ನು ನಾವೆಲ್ಲಿಯೂ ಓದಲಿಲ್ಲ. ವಿಶ್ಲೇಷಿಸಲಿಲ್ಲ. ಆದರೆ ಬಾಳಿದೆವು. ಆ ಬದುಕಿನ ಜೀವದ್ರವ್ಯ ಮೊಮ್ಮಾ.. ಜಿಯಾ ಸುಲ್ತಾನಾ. ಅವರ ನೆನಪಿನಲ್ಲಿ ಬರೆದ ಬರಹವಿದು.. ನಿಮ್ಮ ಉಡಿಗೆ.. ನೀವಷ್ಟು ಅವರ ಪ್ರೀತಿ ಉಣ್ಣಲಿ ಎಂದು… …………………………….. ಗಾಬರಿಯಾಗ್ತದ. ನಾವೆಲ್ಲ ಮೊಮ್ಮ ಇಲ್ಲದೇ ಬದುಕುತ್ತ್ದಿದೇವೆ. ಇನಿದನಿಯ, ವಾತ್ಸಲ್ಯ ತುಂಬಿ ಕರೆಯುವ ಮೊಮ್ಮ . ಸಾಯಿರಾಬಾನುವಿನ ಅಕ್ಕನಂತೆ ಕಾಣಿಸುತ್ತ್ದಿದ್ದ… ನಡೆದರೆ ದೇಹವೇ ಭಾರವೆಂದೆನಿಸುತ್ತ್ದಿದ ದೀರ್ಘದೇಹಿ. ಮುಟ್ಟಿದರೆಲ್ಲಿ ಕೊಳೆಯಗುವರೋ ಎಂಬ ದಂತವರ್ಣದವರು. ಮೊಮ್ಮ ಇಲ್ಲ..! ನಮ್ಮ […]
ಪಾಠವಷ್ಟೇ ಅಲ್ಲ, ಆಟವೂ ಬದಲಾಗಿದೆ
ಲೇಖನ ಪಾಠವಷ್ಟೇ ಅಲ್ಲ, ಆಟವೂ ಬದಲಾಗಿದೆ ಅಕ್ಷತಾ ರಾಜ್ ಪೆರ್ಲ “ಆಂಟೀ ಸ್ವಲ್ಪ ನಿಲ್ಲಿ” ಗೇಟಿನ ಬಳಿಯೇ ಪುಟಾಣಿಯೊಬ್ಬಳು ನಿಲ್ಲಿಸಿದಾಗ “ಯಾಕೆ?” ಕೇಳಿದೆ. “ನಿಮ್ದು ಬಿಸಿ ನೋಡ್ಲಿಕ್ಕಿದೆ” ಮುದ್ದಾಗಿ ಹೇಳುತ್ತಾ ಪಟಾಕಿ ಸಿಡಿಸುವ ಪಿಸ್ತೂಲೊಂದನ್ನು ನನ್ನ ಹಣೆಗೆ ತೋರಿಸಿದಳು. “ಬಿಸಿ ಇದ್ರೆ ಏನ್ಮಾಡ್ತೀಯಾ?” ಮತ್ತೆ ಕೇಳಿದೆ. “ಅಲ್ಲಿಗೆ ಹಾಕ್ತೇನೆ” ಅವಳು ತೋರಿಸಿದ ದಿಕ್ಕಿನತ್ತ ನೋಡಿದೆ, ಆಗಷ್ಟೇ ತನ್ನ ಮರಿಗಳೊಡನೆ ಸೇರಿಕೊಂಡ ಕೋಳಿಗೂಡು ಕಂಡಿತು. ಮನದಲ್ಲೇ ನಗುತ್ತಾ “ಅದ್ಯಾಕೆ ಹಾಗೆ?ನನ್ನ ಅಲ್ಲೇ ಯಾಕೆ ಹಾಕ್ಬೇಕು?” ಗಲ್ಲ ಚಿವುಟಿ […]
ಕನಕದಾಸ ಸಾಹಿತ್ಯದಲ್ಲಿ ಜಾತಿ ಪ್ರಶ್ನೆಯ ಆಯಾಮಗಳು
ಕನಕ ಜಯಂತಿಯ ವಿಶೇಷ ಲೇಖನ ಕನಕದಾಸ ಸಾಹಿತ್ಯದಲ್ಲಿ ಜಾತಿ ಪ್ರಶ್ನೆಯ ಆಯಾಮಗಳು ಡಾ.ಸುಜಾತಾ ಸಿ. ವಿಜಯಪುರ ಕನ್ನಡ ನಾಡು ಕಂಡ ಶ್ರೇಷ್ಠ ಭಕ್ತ ಕವಿ ದಾರ್ಶನಿಕ ಸಮಾಜ ಸುಧಾರಕ ಮಹಾಮಾನವತಾವಾದಿ ಕನಕದಾಸರು. ವರ್ಗ ವರ್ಣಗಳ ಸಂಘರ್ಷದಲ್ಲಿ ನಲುಗುತ್ತಿದ್ದ ಸಮಾಜವನ್ನು ತೆರೆದ ಹೃದಯ ಮತ್ತು ಮನಸ್ಸುಗಳಿಂದ ಕಂಡು ವರ್ಗ ವರ್ಣರಹಿತ ತಳಹದಿಯ ಮೇಲೆ ನಿರ್ಮಿಸಬೇಕೆಂಬ ಅವರ ಆಶಯವಾಗಿತ್ತು. ಇಹಲೋಕದ ಜಂಜಾಟಗಳಿಂದ ತತ್ತರಿಸಿದ ಮನುಕುಲಕ್ಕೆ, ವಿಶ್ವಮಾನವ ಸಮತಾವಾದದ ಸಿದ್ಧಾಂತವನ್ನು ಕೀರ್ತನೆಗಳ ಮೂಲಕ ಬೋಧಿಸಿದರು. ಆ ಕಾಲದ ಸಾಮಾಜಿಕ ವ್ಯವಸ್ಥೆಗೆ ಚಾತುರ್ವರ್ಣ […]
ಪ್ರವಾಸ ಕಥನ
ಜಾರಕಬಂಡೆಕಾವಲ್ ವೃಕ್ಷ ಉದ್ಯಾನ ಚಂದ್ರಮತಿ ಪುರುಷೋತ್ತಮ್ ಭಟ್ ಮಲೆನಾಡಲ್ಲಿ ಬೆಳೆದವರಿಗೆ ಮರಗಳೇ ಸ್ನೇಹಿತರು . ಹಾಗೂ ತಮ್ಮ ಊರಿನ ಕಂಪು, ಸಂಸ್ಕೃತಿ ರೀತಿ ರಿವಾಜು ಮರೆತು ಬಾಳುವವರು ಇಲ್ಲವೇ ಇಲ್ಲ ಎಂದರೂ ತಪ್ಪಾಗಲಾರದು. ಎಲ್ಲಾ ಕಾಲದಲ್ಲೂ ಮರಗಿಡಗಳು ಹಸಿರಾಗಿ ಪರೋಪಕಾರಿಯಾಗಿಯೇ ಮೌನವಾಗಿ ತನ್ನತನವನ್ನು ಎತ್ತಿ ತೋರಿಸುವಂತಹ ಪ್ರಕೃತಿಯನ್ನು ಮೈದುಂಬಿಸಿಕೊಂಡಿರುತ್ತದೆ. ಬೆಟ್ಟಗುಡ್ಡಗಳು ನಿತ್ಯ ಜನರನ್ನು ಕೈಬೀಸಿ ಕರೆಯುತ್ತಿರುತ್ತದೆ.ಆಗಲೂ ಈಗಲೂ ಅರಣ್ಯಗಳಲ್ಲಿ ಸಿಗುವಂತಹ ಹಣ್ಣುಹಂಪಲುಗಳೇ ಅಲ್ಲಿಯ ಎಷ್ಟೋ ಜನರ ಆಹಾರವಾಗಿರುತ್ತದೆ. ಬದುಕು ಕಟ್ಟಿಕೊಳ್ಳಲು ಬೆಂಗಳೂರಿಗೆ ಬಂದ ನಮ್ಮಂತಹ ಎಷ್ಟೋ ನಿಸರ್ಗಾರಾಧಕರಿಗೆ […]
ಬಸ್ ಪಯಣ
ಬಸ್ ಪಯಣ ಬಸ್ ಪಯಣ ಎಂ. ಆರ್. ಅನಸೂಯ ನನಗೆ ಬಸ್ ಪ್ರಯಣ ಅಂದ್ರೆ ಇಷ್ಟವೇ ಆಗುತ್ತದೆ . ಅಲ್ಲಿ ನಮಗೆದುರಾಗುವ ವೈವಿಧ್ಯಮಯ ಪ್ರಸಂಗಗಳು ಬಹು ಸ್ವಾರಸ್ಯಕರವಾಗಿದ್ದು ಒಂಥರಾ ನಮ್ಮ ಲೋಕಾನುಭವ ಹೆಚ್ಚಿಸುತ್ತವೆ.ಕಾರಣ ವಿವಿಧ ರೀತಿಯ ಜನರೊಡನಾಟ ! ಬಹುಶಃ ವೈವಿಧ್ಯತೆ ಕೊಡುವಷ್ಟು ಅನುಭವವನ್ನು ಬೇರೆ ಯಾವುದೂ ಕೊಡಲಾರದು. ಆದ್ದರಿಂದಲೆ ನಾವು ಅಂದ್ರೆ ಭಾರತೀಯರಿಗೆ ಸಿಗುವಷ್ಟು ಅನುಭವ ಇನ್ಯಾವ ದೇಶದ ಪ್ರಜೆಗಳಿಗೆ ಸಿಕ್ಕಲಾರದು. ಬಸ್ ಪಯಣವೆಂದರೆ ಒಂಥರ ಜನ ಧ್ವನಿಯೇ ಸರಿ. ಜನರ ನಾಡಿ ಮಿಡಿತ ! […]
ಯುವ ಗಜಲ್ ಕವಿ ಅಕ್ಷತಾ ಕೃಷ್ಣಮೂರ್ತಿ ಅಕ್ಷತಾ ಕೃಷ್ಣಮೂರ್ತಿವಯಸ್ಸು : ೩೯ವೃತ್ತಿ: ಶಿಕ್ಷಕಿಶಿಕ್ಷಣ: ಕನ್ನಡ ಸ್ನಾತಕೋತ್ತರ ಪದವಿ ಕೃತಿಗಳು: ಹನ್ನೆರಡು ದಡೆ ಬೆಲ್ಲಹಾಲಕ್ಕಿ ಒಕ್ಕಲಿಗರುಮಧುರಚನ್ನಕೋಳ್ಗಂಬಹಾಲಕ್ಕಿ ಕೋಗಿಲೆಕೇದಿಗೆಯ ಕಂಪುನಾನು ದೀಪ ಹಚ್ಚಬೇಕೆಂದಿದ್ದೆ ಅಕ್ಷತಾ ಕೃಷ್ಣಮೂರ್ತಿಯವರ ಒಂದು ಗಜಲ್ ತಮ್ಮ ಓದಿಗಾಗಿ ಒಂದೆಒಂದು ಸಾರಿ ಪ್ರೀತಿಸುವೆ ಎಂದ್ಹೇಳಿ ಬಿಡು ಮಳೆಯಾಗಿ ಸುರಿದುಬಿಡುವೆಒಲವ ಪರಿಮಳವಾಗಿ ಬೀರಿ ಬಿಡು ತಂಗಾಳಿಯಾಗಿ ನಿನ್ನ ಸುತ್ತುವರಿಯುವೆ ಒಂದೆರಡು ಪದಗಳಿಗೆ ನೀ ಪ್ರೀತಿತುಂಬಿದರೆ ನಾ ಮಾತಾಡಿಬಿಡುವೆಉಸಿರು ಬಿಗಿಹಿಡಿದು ನಿನಗಾಗಿ ಕಾಯುವುದೇ ಪುಣ್ಯವೆಂದುಜೀವಿಸುವೆ ಒಂದೆಒಂದು ನೋಟಕೊನೆಯ ಬಾರಿಎಂಬಂತಾದರೂ ನೋಡಿಬಿಡುವೆನೀನು […]
ಫಕೀರ್ ಸೂಫಿ ಸಂತ ಸೈಯದ್ ಹಜರತಶಾ ಕಾದರಿ..!
ಲೇಖನ ಫಕೀರ್ ಸೂಫಿ ಸಂತ ಸೈಯದ್ ಹಜರತಶಾ ಕಾದರಿ..! ಸೈಯದ್ ಹಜರತಶಾ ಕಾದರಿಯವರು ಸೂಫಿ ಸಂತರಲ್ಲೊಬ್ಬರು. ಇವರು ಆಗಿನ ಧಾರವಾಡ ಜಿಲ್ಲೆಯ ಈಗಿನ ಹಾವೇರಿ ಜಿಲ್ಲೆಯ ಸವಣೂರು ತಾಲ್ಲೂಕಿನ ಹುಲಗೂರಲ್ಲಿ ನೆಲೆ ಕಂಡುಕೊಂಡವರು. ಇವರ ಜನನ, ಬಾಲ್ಯ, ಬದುಕು ಹಾಗೂ ಈ ಸಂತರ ಮರಣಗಳೆಲ್ಲವೂ ಪೂರ್ಣ ವಿಶಿಷ್ಠವಾದವುಗಳು ಆಗಿದ್ದವು… ಸೈಯದ್ ಹಜರತಶಾ ಕಾದರಿಯವರು ಹಾವೇರಿ ಜಿಲ್ಲೆಯ ಸವಣೂರು ತಾಲ್ಲೂಕಿನ ಬಂಕಾಪುರದಲ್ಲಿ ಜನಿಸಿದವರು. ಇವರ ತಂದೆಯ ಹೆಸರು ಸೈಯದ್ ಖಾದರಬಾಶಾ ಕಾದರಿ ಬಿಜಾಪೂರ. ತಾಯಿಯ ಹೆಸರು ಸೈಯದಾ ವಲಿಮಾಬೀಬಿ. […]
ಯುವ ಗಜಲ್ ಕವಿ ರೇಖಾ ಭಟ್ ಹೆಸರು: ರೇಖಾ ಭಟ್ ಹೊನ್ನಗದ್ದೆಪ್ರಕಟಿತ ಕೃತಿ : ‘ಮಡಿಲ ನಕ್ಷತ್ರ’ ಗಜಲ್ ಸಂಕಲನವೃತ್ತಿ : ಪ್ರಾಥಮಿಕ ಶಾಲಾ ಶಿಕ್ಷಕಿಊರು: ಬಾಳೆಗದ್ದೆ. ಶಿರಸಿ ಆಯ್ಕೆಗಳ ಅರಿವಿದ್ದರೆ ಕಸಗಳು ಬೊಗಸೆ ಸೇರುವುದಿಲ್ಲಇಷ್ಟಗಳು ನಿರ್ದಿಷ್ಟವಿದ್ದರೆ ಕಷ್ಟಗಳು ಮೀಸೆ ತಿರುವುದಿಲ್ಲ ಎಲ್ಲ ಕಡೆ ಸುಳಿವ ಗಾಳಿ ಗಂಧ ದುರ್ಗಂಧಗಳ ಉಡಲೇಬೇಕುಬದುಕು ಹಗುರಾಗಿ ತೇಲಿದರೆ ಯಾವುದೂ ಅಂಟಿಕೊಳ್ಳುವುದಿಲ್ಲ ಕುಂದುಕೊರತೆಗಳು ದಾರಿಯ ನಡುವಿನ ಕೊರಕಲಿನಂತಲ್ಲವೇಗಮ್ಯದತ್ತಣ ಸಲೀಸು ನಡಿಗೆ ಎಂದಿಗೂ ಖುಷಿ ನೀಡುವುದಿಲ್ಲ ಎಲ್ಲೋ ಬೇರೂರಿದ ಬಳ್ಳಿ ಹಬ್ಬಿ ಹರಡಿ […]
ಕಾಗೆ…
ಲೇಖನ ಕಾಗೆ… ಡಾ. ಅರಕಲಗೂಡು ನೀಲಕಂಠ ಮೂರ್ತಿ ನಾನೊಂದು ಕಾಗೆ, ನಿಜ. ಅಪ್ಪಟ ಕಪ್ಪು, ನಿಜ. ನನ್ನ ‘ಮಧುರ’ ಧ್ವನಿ ನಿಮಗೆ ಕರ್ಕಷ! ಬಹುಶಃ ಅದೂ ಕೂಡ ನಿಜ! (ನಿಮ್ಮದೇ ಕಣ್ಣು ಕಾಣುವ ಕೋನದಿಂದ ಮಾತ್ರ). ನಿಮ್ಮ ಹಾಗೆ ನಮ್ಮ ಪಕ್ಷಿ ಲೋಕದ ಲ್ಲಿ, ಕಪ್ಪು ಅಂದಾಕ್ಷಣ ಅಸಹ್ಯವಿಲ್ಲ. ನಿಮ್ಮಲ್ಲೋ ಎಂಥೆಂತಹ ಅಸಹ್ಯ ಭಾವನೆಗಳಿಲ್ಲ ಹೇಳಿ – ಒಬ್ಬನನ್ನೊಬ್ಬ ಕಂಡಾಗ ನಿಮ್ಮ ನಿಮ್ಮ ನಡುವೆ! ನಾವು ವೈವಿಧ್ಯಮಯ ಜಗತ್ತನ್ನು ನಮ್ಮ ಉಗಮದಿಂದಲೇ ಗೌರವದಿಂದ ಭಾವಿಸಿಕೊಂಡು ಬಂದವರು; ಇಂದಿಗೂ […]
ಯುವ ಗಜಲ್ ಕವಿ ಶಿವಪ್ರಕಾಶ ರು ಕುಂಬಾರ ಹೆಸರು: ಶಿವಪ್ರಕಾಶ ರು ಕುಂಬಾರ(ನಂರುಶಿ ಕಡೂರು) ವಯಸ್ಸು: ೩೨ ಶಿಕ್ಷಣ: ಐಟಿಐ ,ಡಿಪ್ಲೋಮಾ ವೃತ್ತಿ: ಬೆಂಗಳೂರು ಮೆಟ್ರೋ ರೈಲ್ವೆನಲ್ಲಿ ಕಿರಿಯ ಅಭಿಯಂತರ ಪ್ರಕಟಿತ ಕೃತಿಗಳು : ೧) ಅಮೃತ ಸಿಂಚನವು ನಿಮಗಾಗಿ ( ಕವನ ಸಂಕಲನ) ೨) ಕಾಮನ ಬಿಲ್ಲು ಬಣ್ಣ ಬೇಡುತಿದೆ (ಗಜಲ್ ಸಂಕಲನ) ೩) ನೇರಿಶಾ (ಗಜಲ್ ಸಂಕಲನ) ಸಂಗಾತಿಓದುಗರಿಗೆ ಇವರದೊಂದು ಗಜಲ್ ಸತ್ತವನ ಮನೆಯ ಗೋಳು ನನಗೂ ಕೇಳುತಿದೆ ಗಾಲಿಬ್ಯಮ ಕಿಂಕರರ ನರ್ತನ ಎಲ್ಲೇ […]