Category: ಇತರೆ

ಇತರೆ

ನನ್ನ ಇಷ್ಟದ ಕವಿತೆ

ಮುಂಬೈ ಜಾತಕ ರಚನೆ —– ಜಿ.ಎಸ್.ಶಿವರುದ್ರಪ್ಪ ಹುಟ್ಟಿದ್ದು: ಆಸ್ಪತ್ರೆಯಲ್ಲಿ ಬೆಳೆದದ್ದು: ಬಸ್ಸು ಟ್ರಾಂ ಕಾರು ಟ್ಯಾಕ್ಸಿ ಎಲೆಕ್ಟ್ರಿಕ್ ಟ್ರೇನುಗಳಲ್ಲಿ ಕುಡಿದದ್ದು: ಕಾಣದೆಮ್ಮೆಯ ಕೆಚ್ಚಲು ಕರೆದು ಕಳುಹಿಸಿದ ಬಾಟ್ಲಿ ಹಾಲು, ಗ್ರೈಪ್ ಸಿರಪ್ ಹಾರ್ಲಿಕ್ಸ್ ಇತ್ಯಾದಿ ಕಂಡಿದ್ದು :ಬೆಳಗಿನಿಂದ ಸಂಜೆಯ ತನಕ ಲಕ್ಷ ಚಕ್ರದ ಉರುಳು ಅವಸರದ ಹೆಜ್ಜೆ ಯ ಮೇಲೆ ಸರಿವ ನೂರಾರು ಕೊರಳು ಕಲಿತದ್ದು: ಕ್ಯೂ ನಿಲ್ಲು:ಪುಟ್ಪಾತಿನಲ್ಲೇ ಸಂಚರಿಸು; ರಸ್ತೆವದಾಟುವಾಗೆಚ್ಚರಿಕೆ; ಓಡು, ಎಲ್ಲಿಯೂ ನಿಲ್ಲದಿರು; ಹೇಗೋ ಅವರಿವರ ತಳ್ಳಿ ಮುನ್ನುಗ್ಗು; ಎಲ್ಲಾದರೂ ಸರಿಯೆ, ಬೇರೂರು,ಹೀರು. ತಾಯಿ:  […]

ಕವಿತೆ

ಹಿರಿಯ ಕವಿಗಳ ಹಳೆಯ ಕವಿತೆಗಳು ಹೊಸ ಪೀಳಿಗೆಯ ಓದುಗರಿಗಾಗಿಹಿರಿಯಕವಿಗಳಕವಿತೆಯೊಂದನ್ನು ನಿತ್ಯ ನೀಡಲಾಗುವುದು ಅವ್ವ ನನ್ನವ್ವ ಫಲವತ್ತಾದ ಕಪ್ಪು ನೆಲಅಲ್ಲಿ ಹಸಿರು ಪತ್ರದ ಹರವು, ಬಿಳಿಯ ಹೂ ಹಬ್ಬ;ಸುಟ್ಟಷ್ಟು ಕಸುವು, ನೊಂದಷ್ಟು ಹೂ ಹಣ್ಣುಮಕ್ಕಳೊದ್ದರೆ ಅವಳ ಅಂಗಾಂಗ ಪುಲಕ;ಹೊತ್ತ ಬುಟ್ಟಿಯ ಇಟ್ಟು ನರಳಿ ಎವೆ ಮುಚ್ಚಿದಳು ತೆರೆಯದಂತೆ. ಪಲ್ಲ ಜೋಳವ ಎತ್ತಿ ಅಪ್ಪನ್ನ ಮೆಚ್ಚಿಸಿ ತೋಳಬಂದಿಯ ಗೆದ್ದು,ಹೆಂಟೆಗೊಂದು ಮೊಗೆ ನೀರು ಹಿಗ್ಗಿ;ಮೆಣಸು, ಅವರೆ, ಜೋಳ, ತೊಗರಿಯ ಹೊಲವ ಕೈಯಲ್ಲಿ ಉತ್ತು,ಹೂವಲ್ಲಿ ಹೂವಾಗಿ ಕಾಯಲ್ಲಿ ಕಾಯಾಗಿಹೆಸರು ಗದ್ದೆಯ ನೋಡಿಕೊಂಡು,ಯೌವನವ ಕಳೆದವಳು […]

ವಿದ್ಯಾರ್ಥಿ ಪ್ರತಿಭೆ

ಭರವಸೆಯ ವಿದ್ಯಾರ್ಥಿ ಕವಿ ಪೂಜಾ ನಾಯಕ್ ಪೂಜಾ ನಾಯಕ್ ಮೂಲತ:  ಕುಮಟಾ ತಾಲ್ಲೂಕಿನ ನಾಡುಮಾಸ್ಕೇರಿಯವರಾಗಿದ್ದು ಸದ್ಯ ಬಿಎಸ್ಸಿ ವ್ಯಾಸಂಗ ಮಾಡುತ್ತಿದ್ದಾರೆ.ಕನ್ನಡ ಸಾಹಿತ್ಯದಲ್ಲಿ ಅಪಾರ ಆಸಕ್ತಿಹೊಂದಿರುವ ಇವರು ತಮ್ಮ ಆರಂಭದ ಕೆಲ ಕವಿತೆಗಳಿಂದಲೇ ಭರವಸೆ ಮೂಡಿಸಿದ್ದಾರೆ.  ‘ಸದಾಶಯದೊಡನೆ ಮೂಡಿಬಂದ ಕವಿತೆಗಳು’               ಸಾಹಿತ್ಯ ರಚನೆಗೂ ಓದಿಗೂ ಏನಾದರೂ ಸಂಬಂಧವಿದೆಯೇ? ಸಾಹಿತ್ಯದ ವಿದ್ಯಾರ್ಥಿಗಳಿಗೆ ಮಾತ್ರವೇ ಕಾವ್ಯ ರಚನೆ ಸಿದ್ಧಿಸಿರುತ್ತದೆಯೇ? ಈ ಪ್ರಶ್ನೆಯಲ್ಲೇ ಹುರುಳಿಲ್ಲ. ಏಕೆಂದರೆ ಸಾಹಿತ್ಯೇತರ ಅಭ್ಯಾಸಗಳಲ್ಲಿ ತೊಡಗಿರುವವರಿಂದಲೂ ಹಲವಾರು ಶ್ರೇಷ್ಠ […]

ಕಸಾಪಗೆ ಮಹಿಳಾ ಅದ್ಯಕ್ಷೆ ಬೇಕು

ಚರ್ಚೆ ಅಬ್ಬಾ! ಏನಿದು ವಿಪರ್ಯಾಸ,ಸರಾಸರಿ ನೂರು ವರ್ಷಗಳು ಉರುಳಿದರೂ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷೀಯ ಸ್ಥಾನವನ್ನು ಮಹಿಳೆಯರು ಅಲಂಕರಿಸಲಿಲ್ಲವೇಕೆ?  ಎನ್ನುವುದು ತಿಳಿದ ತಕ್ಷಣ ನನಗೆ ಕಾಡುತ್ತಿರುವ ಒಂದು ಬಹುದೊಡ್ಡ ಪ್ರಶ್ನೆಯೇ ಅದು. ಮಹಿಳೆಯರೇ ತಮಗೆ ಆ ಪದವಿ ಬೇಡವೆಂದು ಸುಮ್ಮನುಳಿದಿದ್ದಾರೋ? ಅಥವಾ ಆ ಸ್ಥಾನಕ್ಕೆ ಹೋಗಲು ಅವರಿಗೆ ಅವಕಾಶವನ್ನೇ ನೀಡಲಿಲ್ಲವೋ? ನಾನರಿಯೆ. ಆದರೆ ಇಲ್ಲಿಯವರೆಗೂ ಅಧ್ಯಕ್ಷೀಯ ಪೀಠವನ್ನು ಹತ್ತಲಿಲ್ಲ ಎಂಬ ಸಂಗತಿಯನ್ನಂತು ತಿಳಿದುಕೊಂಡೆ. ಪುರುಷನ ಜೀವನದ ಪ್ರತಿಯೊಂದು ಹಂತದಲ್ಲೂ ಹೆಣ್ಣಿನ ಪಾತ್ರ ಬಹುಮುಖ್ಯವಾದುದು. ಜನ್ಮಕೊಟ್ಟು ಸಾಕಿ ಸಲಹುವ […]

ಮೂವರು ವೃತ್ತಿ ಕಲಾವಿದರ ಕಣ್ಮರೆ

ಲೇಖನ ಮಲ್ಲಿಕಾರ್ಜುನ ಕಡಕೋಳ ಅಂಜಲಿದೇವಿ ಅವರು ಎಂಟುಮಂದಿ ಅಕ್ಕತಂಗಿಯರು. ಎಂಟೂ ಮಂದಿಯು ವೃತ್ತಿರಂಗಭೂಮಿ ಅಭಿನೇತ್ರಿಯರು. ಆದವಾನಿ ಸುಭದ್ರಮ್ಮ, ಆದವಾನಿ ಸೀತಮ್ಮ, ಆದವಾನಿ ನಾಗರತ್ನಮ್ಮ… ಹೀಗೆ ಗದಗ ಪ್ರಾಂತ್ಯದ ಸಾಂಸ್ಕೃತಿಕ ಲೋಕದಲ್ಲಿ ಆಗ ಆದವಾನಿ ಸೋದರಿಯರದು ಬಲುದೊಡ್ಡ ಐಕಾನ್ ಹವಾ. ಮೊನ್ನೆಯಷ್ಟೇ ಗಂಗಾವತಿಯಲ್ಲಿ ನಿಧನರಾದ ಜಿ.ಎನ್.ಅಂಜಲಿದೇವಿ (೭೨ ) ಆದವಾನಿ ಸೋದರಿಯರ ಬಳಗದ ಕೊನೆಯ ಕೊಂಡಿ. ಇವರ ತಂದೆ ಆ ಕಾಲದ ಸಂಗೀತ ವಿದ್ವಾಂಸ. ಹೆಸರಾಂತ ಮೃದಂಗ ವಾದಕ. ತಂದೆಯಿಂದ ಬಳುವಳಿಯಾಗಿ ಬಂದುದು ಸಂಗೀತ ಮತ್ತು ರಂಗಭೂಮಿ ಅಭಿನಯ […]

ಏಕಾಂತದಿಂದ ಲೋಕಾಂತಕ್ಕೆ

ಏಕಾಂತದಿಂದ ಲೋಕಾಂತಕ್ಕೆ –ಲೇಖಿಕಾ ಸಾಹಿತ್ಯ ವೇದಿಕೆ ಪುಸ್ತಕ ಪರಿಚಯ ಸಾರ್ಥ್ಯಕ್ಯ ಡಿ.ಯಶೋದಾ ವಿಶ್ವಕ್ಕೇ ಕೊರೋನ   ಕಾರ್ಮೋಡ ಕವಿದಿರುವ ಇಂತಹ ಕಾಲದಲ್ಲಿ ಎಲ್ಲರೂ ಒಟ್ಟಿಗೆ ಸೇರಿ ತಾಂತ್ರಿಕತೆಯ ಮೂಲಕ ಒಂದು ಗೂಡುವು ದು ವಿಶೇಷ. ಏಕಾಂತದಿಂದ ಲೋಕಾಂತಕ್ಕೆ ಎಂಬಂತೆ ತಂತ್ರ ಜ್ಞಾನದ ಮೂಲಕ ಸಂವಹನ ಮಾಡುವುದು ಇಂದಿಗೆ ಅತಿ ಮುಖ್ಯ ಎಂಬುದು ಹಿರಿಯ ಪತ್ರಕರ್ತೆ ಡಾ. ಆರ್. ಪೂರ್ಣಿಮಾ ಅಭಿಮತ.ಲೇಖಿಕಾ ಸಾಹಿತ್ಯ ವೇದಿಕೆ ಯ ನನ್ನ ಮೆಚ್ಚಿನ ಪುಸ್ತಕ ಪರಿಚಯದ ಫೇಸ್‌ಬುಕ್ ಲೈವ್ ಸರಣಿ ಕಾರ್ಯಕ್ರಮದ ಅವಲೋಕನದಲ್ಲಿ ಮಾತನಾಡಿದ ಅವರು, […]

ಆಕಾಶಯಾನವೂ ಆಧ್ಯಾತ್ಮಿಕ ಚಿಂತನೆಯೂ

ಲೇಖನ ಚಂದಕಚರ್ಲ ರಮೇಶ ಬಾಬು ತಲೆಬರಹ ನೋಡಿಯೇ ಇದೇನಪ್ಪ ಇವನು ಯಾವುದನ್ನ ಯಾವುದಕ್ಕೋ ಜೋಡಿಸ ತೊಡಗಿದ್ದಾನೆ ಎನ್ನುತ್ತೀರಾ ! ಕರ್ಮಸಿದ್ಧಾಂತಕ್ಕೂ ನಾವು ಕೈಗೊಳ್ಳುವ ವಿಮಾನಯಾನಕ್ಕೂ ಎಲ್ಲಿಯ ಸಾಪತ್ಯ ವೆನ್ನುತ್ತೀರಾ !. ಏನೋ ಹೇಳಲು ಹೋಗಿ ಏನೋ ಹೇಳ್ತಿದೀನಿ ಅಂತ ಅನ್ನಿಸ್ತಿದೆಯಾ ? ಅದೇನೂ ಅಲ್ಲ. ನಾನು ನಿಮಗೆ ಅನುಭವಗಳ ದೃಷ್ಟಾಂತಗಳನ್ನು ಕೊಡುತ್ತಾ ಹೋದಾಗ ನೀವೇ ಒಪ್ತೀರಾ ! ಆದ್ರೆ ಒಂದು. ಇದು ಹೊಂದೋದು ವಿದೇಶೀ ವಿಮಾನಯಾನಕ್ಕೆ ಮಾತ್ರ.  ಈಗ ನಾವು ಇದರ ಚರ್ಚೆಗೆ ಬರೋಣ. ನೀವು ನಮ್ಮ […]

ಕಸಾಪಕ್ಕೆ ಮಹಿಳೆ ಅಧ್ಯಕ್ಷರಾಗಬೇಕು

12ನೇ ಶತಮಾನದಿಂದ ಇಲ್ಲಿಯವರೆಗೂ ಮಹಿಳೆಯರಾದ ನಾವು ಪ್ರತಿಯೊಂದು ವಿಷಯದಲ್ಲೂ ಪ್ರತಿಭಟನೆಯ ಮಾಡಿಯೇ ನಮ್ಮ ಹಕ್ಕುಗಳನ್ನು ಪಡೆದುಕೊಳ್ಳುತ್ತಾ ಬಂದಿದ್ದೇವೆ. ಸಮಾನತೆಯೆಂದು ಎಷ್ಟೇ ಬೊಬ್ಬೆ ಹೊಡೆದರು ಅದರ ಸಂಪೂರ್ಣ ಫಲ ದೊರೆಯುತ್ತಿಲ್ಲ .ಹಾಗಾಗಿ ಮಹಿಳೆಯರು ಒಂದು ಹೆಜ್ಜೆ ಮುಂದೆ ಇಡಬೇಕು .ಇಲ್ಲವೆಂದರೆ ನಮ್ಮನ್ನು ನಾವೇ ಅಂತರ್ಯದಲ್ಲಿ ಅಂಜಿಕೆ ಎಂಬ ಶೋಷಣೆ ಮಾಡಿಕೊಂಡಂತಾಗುತ್ತದೆ . ಡಾಕ್ಟರ್ ಗುರುರಾಜ ಕರ್ಜಗಿ ಅವರು ಹೇಳುವಂತೆ ಚಕ್ರವರ್ತಿ ಆಗಬೇಕೆಂದರೆ ಯಾವುದೇ ಅದೃಷ್ಟದ ಗೆರೆಗಳು ಬೇಕಾಗಿಲ್ಲ .ಆತ್ಮಸ್ಥೈರ್ಯವಿದ್ದರೆ ಸಾಕು . ಆ ಬಲದಿಂದಲೇ ಏನನ್ನು ನಾವು ಗೆಲ್ಲಬಹುದು. […]

ಕಸಾಪಕ್ಕೆ ಮಹಿಳಾ ಅಧ್ಯಕ್ಷರೇ ಸಿಗುತ್ತಿಲ್ಲವೋ, ಬೇಕಿಲ್ಲವೋ ?

ಕಸಾಪಕ್ಕೆ ಮಹಿಳಾ ಅಧ್ಯಕ್ಷರೇ ಸಿಗುತ್ತಿಲ್ಲವೋ, ಬೇಕಿಲ್ಲವೋ ? ಡಾ. ಅಜಿತ್ ಹರೀಶಿ ಕಸಾಪಕ್ಕೆ ಮಹಿಳಾ ಅಧ್ಯಕ್ಷರೇ ಸಿಗುತ್ತಿಲ್ಲವೋ, ಬೇಕಿಲ್ಲವೋ ? ಕಸಾಪಕ್ಕೆ ಮಹಿಳೆಯೋರ್ವರು ಅಧ್ಯಕ್ಷರಾಗಲಿ ಎಂಬುದು ಸೂಕ್ತವೇ ಆಗಿದೆ. ಆದರೆ ಕೆಲವು ಅಂಶಗಳನ್ನು ನಾನು ಇಲ್ಲಿ ಈ ಸಂದರ್ಭದಲ್ಲಿ ಚರ್ಚಿಸಲು ಬಯಸುತ್ತೇನೆ. ತುರ್ತುಪರಿಸ್ಥಿತಿಯೇ ಕೊನೆ. ಆನಂತರ ದೊಡ್ಡ ಹೋರಾಟವೇ ಇಲ್ಲದ ಜಿಡ್ಡುಗಟ್ಟಿದ ವಾತಾವರಣ ರಾಜಕೀಯ ವಲಯದಲ್ಲಿ ಸೃಷ್ಟಿಯಾಯಿತು. ಸಾಹಿತ್ಯದಲ್ಲೂ ಬಂಡಾಯ, ದಲಿತ ಹೋರಾಟಗಳ ನಂತರದ ಸ್ಥಿತಿ ನಿಂತ ನೀರೀಗ! ಯಾವುದೇ ಆಗ್ರಹವನ್ನು ಅನುಮಾನದಿಂದ ನೋಡುವ ಪ್ರವೃತ್ತಿ ಇಂದಿನ […]

Back To Top