Category: ಕಥಾಗುಚ್ಛ

ಕಥಾಗುಚ್ಛ

ಕಥಾಯಾನ

ಜುಗ್ಗ ರಾಮಣ್ಣ ಕು.ಸ.ಮಧುಸೂದನ ಜುಗ್ಗ ರಾಮಣ್ಣ ಊರಲ್ಲಿ ಎಲ್ಲರೂ ರಾಮಣ್ಣನನ್ನು ಕರೆಯುತ್ತಿದ್ದುದು ಜುಗ್ಗ ರಾಮಣ್ಣ ಅಂತಲೆ. ಅವನ ಮನೆ ಇದ್ದ ಬೀದಿಯ ಉಳಿದ ಮನೆಗಳವರು ತಮ್ಮ ನೆಂಟರಿಗಾಗಲಿ, ಪರಿಚಯದವರಿಗಾಗಲಿ ಮನೆಯ ವಿಳಾಸ ಕೊಡಬೇಕಾದರೆ ಬಸ್ ಸ್ಟ್ಯಾಂಡಿನಿಂದ ದಾವಣಗೆರೆ ರಸ್ತೆಯ ಕಡೆ ನಾಲ್ಕು ಹೆಜ್ಜೆ ಬಂದು ಜುಗ್ಗ ರಾಮಣ್ಣನ ಬೀದಿ ಎಲ್ಲಿ ಬರುತ್ತೆ ಅಂತ ಯಾರನ್ನೇ ಕೇಳಿದರೂ ಸಾಕು ನಾವಿರುವ ಬೀದಿ ತೋರಿಸ್ತಾರೆ ಅಂತ. ಅಷ್ಟರಮಟ್ಟಿಗೆ ಆ ಊರಿನವರು ಆ ಹೆಸರಿಗೆ ಹೊಂದಿಕೊಂಡು ಬಿಟ್ಟಿದ್ದರು. ಇದು ರಾಮಣ್ಣನ ಮನೆಯವರಿಗಷ್ಟೆ […]

ಕಥಾಯಾನ

ಕನಸು ತಾರಾ ಸತ್ಯನಾರಾಯಣ್ ದಿನಾ ಐದುವರೆಗೆ ಏಳುತ್ತಿದ್ದ ಸುಶೀಲಮ್ಮ, ಇಂದು ಬೆಳಿಗ್ಗೆ ಕಣ್ಣುಬಿಟ್ಟಾಗ ಘಂಟೆ ಆರುವರೆ ಆಗಿತ್ತು.ಅಯ್ಯೋ!ಇವತ್ತುಎದ್ದಿದ್ದು ತಡವಾಯ್ತು ,ಇನ್ನಮಕ್ಕಳೆಲ್ಲ  ಆಫೀಸಿಗೆ ಹೊರಟುಬಿಡ್ತಾರೆ .ಬೇಗ ತಿಂಡಿ ಮಾಡ್ಬೇಕು ಅಂದುಕೊಂಡ ಅವರಿಗೆ ಒಂದುಕ್ಷಣ ಬೆಳಗಿನ ಜಾವದ ಕನಸು ನೆನಪಿಗೆ ಬಂದು ಮೈಯಲ್ಲಾ ಜುಂ ಅಂದು,ದೇವರೆ ಆ ಕನಸು ನನಸಾಗದಿರಲಿ ಅಂತ ದೇವರಿಗೆ ಕೈ ಮುಗಿದು ಸ್ನಾನ ಮಡಲು ಬಾತ್ ರೂಂಗೆಹೋದರು. ನಂತರ ಕಾಫಿಡಿಕಾಕ್ಷನ್ ಹಾಕಿ ಒಲೆಮೇಲೆ ಹಾಲು ಕಾಯಲು ಇಟ್ಟಾಗಲೂ..‌‌‌‌‌..ಸುಶೀಲಮ್ಮನಿಗೆ ಬೆಳಗಿನ ಜಾವ ಬಿದ್ದ ಕನಸಿನದ್ದೇ ಯೋಚನೆ. ಹಾಗೂ […]

ಕಥಾಯಾನ

ಗೂಡು ಕು.ಸ.ಮ. ಗೂಡು ಅದೊಂದು ಸಾದಾರಣವಾದ ಕೆಂಪು ಹೆಂಚಿನ ಮನೆ. ಇತ್ತ ದೊಡ್ಡದೂ ಅಲ್ಲ,ಅತ್ತ ಚಿಕ್ಕದೂ ಅಲ್ಲ,ಅಂತಹುದು. ಮನೆಯ ಮುಂದೆ ಒಂದಷ್ಟು ದಾಸವಾಳ,ಕಣಗಿಲೆ.ನೀಲಿ ಗೊರಟೆ ಹೂವಿನ ಗಿಡಗಳು. ಪುಟ್ಟ ಕಾಂಪೋಂಡ್,ಹಿತ್ತಲಲಿ ಬಟ್ಟೆ ತೊಳೆಯುವ ಕಲ್ಲು,ಒಂದು ನುಗ್ಗೆ ಮರ,ಬಚ್ಚಲು ನೀರು ಹೋಗುವ ಚರಂಡಿಗೆ ಹೊಂದಿಕೊಂಡಂತೆ ಹರಡಿಕೊಂಡ ಬಸಳೆ ಬಳ್ಳಿ. ಆ ಮನೆಯಲ್ಲಿ ಇದ್ದವರು ಇಬ್ಬರೆ,ಅವನು-ಅವಳು. ಅವರ ಮದುವೆಯಾಗಿ ಎರಡು ವರ್ಷವಾಗಿತ್ತು.ಪ್ರಶಾಂತವಾಗಿ ಹರಿಯುವ ನದಿಯಂತೆ ಬದುಕು ಸಾಗುತ್ತಿತ್ತು.ಅವನು ಬೆಳಿಗ್ಗೆ ಬೇಗಗ ಏಳುತ್ತಿದ್ದ.ತಣ್ಣೀರ ಸ್ನಾನ ಮಾಡಿ ಅಂಗಳದ ಗಿಡಗಳಿಂದ ಹೂ ಬಿಡಿಸಿ […]

ವ್ಯಾಲಂಟೈನ್ಸ್ ಡೇ ವಿಶೇಷ

ವಿಶ್ ಯೂ ಹ್ಯಾಪಿ ವ್ಯಾಲೆಂಟೈನ್ಸ್ ಡೇ. ಪ್ರಮಿಳಾ ಎಸ್.ಪಿ. ಈಗ್ಗೆ ಹನ್ನೆರೆಡು ವರ್ಷಗಳ ಕೆಳಗೆ ಕಾಲೇಜಿನ ಗೆಳತಿಯರೆಲ್ಲ ಗುಂಪು ಸೇರಿ ಒಂದು ತೀರ್ಮಾನ ಕ್ಕೆ ಬಂದರು.ಯಾರಿಗೆಲ್ಲಾ ಪ್ರೇಮಿ ಇದ್ದಾನೋ ಅವರು ಹಸಿರು ಬಟ್ಟೆ ತೊಡುವುದು…ಯಾರಿಗೆ ಪ್ರಿಯತಮ ಇಲ್ಲವೋ ಅವರು ಕೆಂಪು ಬಟ್ಟೆ ಧರಿಸಿ ಕಾಲೇಜಿಗೆ ಬರುವುದು ಎಂದು.ನಾಳೆ ಪ್ರೇಮಿಗಳ ದಿನ ಹೀಗೆ ಆಚರಿಸೋಣ ಎಂದರು.ಹಳ್ಳಿ ಹುಡುಗಿ ನಾನು.ಅದರ ಕಲ್ಪನೆ ಇಲ್ಲದ ನಾನು ಕೆಂಪು ಬಟ್ಟೆ ಧರಿಸಿ ಕಾಲೇಜಿಗೆ ಬಂದೆ.ಇಡೀ ದಿನ ಹಾಡು ಆಟ ಪಾಠ ಮುಗಿಸಿ ಹೊರ […]

ಮಕ್ಕಳ ಕಥೆ

ಬೆಳ್ಳಿಬೆಕ್ಕು ಮತ್ತು ಸಿ.ಸಿ ಕ್ಯಾಮರಾ. ವಿಜಯಶ್ರೀ ಹಾಲಾಡಿ ಬೆಳ್ಳಿಬೆಕ್ಕು ಮತ್ತು ಸಿ.ಸಿ ಕ್ಯಾಮರಾ……(ಮಕ್ಕಳ ಕತೆ) ಅವತ್ತು ಬೆಳಗ್ಗೆ ಚಳಿ. ಇಬ್ಬನಿ ಹನಿ ಕೂತ ನಾಚಿಕೆ ಮುಳ್ಳಿನ ಗಿಡ ಮತ್ತಷ್ಟು ನಾಚಿ ಮಣ್ಣ ಹೆಗಲಿಗೆ ತಲೆ ಇಟ್ಟಿತ್ತು. ಸುತ್ತ ಕಣ್ಣರಳಿಸಿ ನೋಡಿದ ಬೆಳ್ಳಿಬೆಕ್ಕು ಬಾಳೆಗಿಡದ ಬುಡದಲ್ಲಿ ಶ್ರದ್ಧೆಯಿಂದ ಗುಂಡಿ ತೋಡತೊಡಗಿತ್ತು. ನಿನ್ನೆ ಪುಟ್ಟ ಹೇಳುತ್ತಿದ್ದ ‘ಬೆಳ್ಳಿಯ ಬಾಲ ಟಿಶ್ಯೂ ಪೇಪರ್, ಸುಸ್ಸು ಮಾಡಿ ಅದರಲ್ಲೇ ಒರೆಸಿಕೊಳ್ಳೋದು.’ ಅಂತ! ಬೆಳ್ಳಿಗೆ ನಗು ಬಂತು. ಹಾಗೆ ಒಂದು ಹಾಡು ಗುನುಗತೊಡಗಿತು. ‘ಅದ್ಸರಿ […]

ಕಥಾಯಾನ

ಎಲ್ಲೆಲ್ಲೋ ಹಾರಾಡುತ್ತಿದ್ದ ಕತೆ ಟಿ. ಎಸ್.‌ ಶ್ರವಣ ಕುಮಾರಿ ಎಲ್ಲೆಲ್ಲೋ ಹಾರಾಡುತ್ತಿದ್ದ ಕತೆ ಕಾಗಕ್ಕ ಇನ್ನೂ ಬೆಳಗಾಗ ಗೂಡಿನ ಬಾಗಿಲು ತೆರೆಯುತ್ತಿರುವಾಗಲೇ ತನ್ನ ಗೂಡಿನ ಮುಂದೆ ಆಗಲೇ ರಂಗೋಲಿ ಇಡುತ್ತಿದ್ದ ಗುಬ್ಬಕ್ಕ ಇವಳನ್ನೇ ಕಾಯುತ್ತಿದ್ದವವಂತೆ ಶಬ್ದ ಮಾಡಿ ಗಮನ ಸೆಳೆದಳು.  ಬಲಗೈಲಿದ್ದ ಪೊರಕೆಯನ್ನು ಎಡಗೈಗೆ ಬದಲಾಯಿಸಿಕೊಂಡ ಕಾಗಕ್ಕ ಏನು ಎನ್ನುವಂತೆ ಸನ್ನೆ ಮಾಡಿದಳು. “ತುಂಬಾ ವಿಷಯ ಇದೆ ಮಾತಾಡಕ್ಕೆ; ಗಂಡ ಮಕ್ಕಳು ಹೊರಟ ಮೇಲೆ ಬರ್ತೀನಿ” ಎನ್ನುವಂತೆ ಸಂಜ್ಞೆ ಮಾಡಿ ಕಾಗಕ್ಕನೊಂದಿಗೆ ಅಪಾಯಿಂಟ್ಮೆಂಟ್ ಫಿಕ್ಸ್ ಮಾಡಿಕೊಂಡು ರಂಗೋಲಿ […]

ಕಥಾಯಾನ

ಮೇರಿಯ ಮಕರಸಂಕ್ರಮಣ ವೇಣುಗೋಪಾಲ್ ಸ್ನಾನ ಮುಗಿಸಿ ಉದ್ದ ಕೂದಲಿಗೆ ಟವಲ್ ಸುತ್ತುಕಟ್ಟಿ ಕನ್ನಡಿಯ ಎದುರು ಬೆತ್ತಲೆ ನಿಂತವಳಿಗೆ ನವಯೌವನದ ಉಮ್ಮಸ್ಸೊಂದು ದೇಹದ ಪ್ರತಿ ಅಂಗಗಳಲ್ಲೂ ಹೊಮ್ಮಿದಂತೆ ಕಾಣುತಿತ್ತು. ಆ ಅನಿರೀಕ್ಷಿತ ಮಿಲನದ ಘಳಿಗೆಯನ್ನು ಮೆಲುಕು ಹಾಕುತ್ತ ನಿಂತುಬಿಟ್ಟಳು, ಕೆಲವು ವರ್ಷಗಳೇ ಕಳೆದಿದ್ದೋ ಗಂಡನ ಅಗಲಿಕೆಯ ನಂತರ ದೇಹ ಸುಖ ಕಂಡು.! ಅನಿರೀಕ್ಷಿತವೆಂಬಂತೆ ವಾರಪೂರ್ತಿ ಸುರಿದ ಇಳೆ ಮಳೆಯಾಟದೊಳಗೆ ಅವರಿಬ್ಬರ ರತಿಕಾಮದಾಟವೂ ಮುಗಿದಿತ್ತು..! ಅವನು ಎಂದಿನಂತೆ ಸಂಜೆಯ ನಾಲ್ಕು ಘಂಟೆಗೆ ಬರುತ್ತಿದ್ದವನು ಸ್ವಲ್ಪತಡವಾಗಿ ಬಂದಿದ್ದ..! ಮೊಗವೇಕೋ ಬಾಡಿದಂತಿತ್ತು.! ಹೊರಗೆ […]

ಕಥಾಯಾನ

ರಾಮರಾಯರು ಜಿ. ಹರೀಶ್ ಬೇದ್ರೆ  ರಾಮರಾಯರು ರಾಮರಾವ್ ಹಾಗೂ ಸುಲೋಚನ ರವರಿಗೆ ಮೂರು ಹೆಣ್ಣು, ಒಂದು ಗಂಡು ಮಗು. ಹೆಣ್ಣುಮಕ್ಕಳೇ ಹಿರಿಯರು, ಮಗ ಕೊನೆಯವನು. ರಾಯರು ಅತ್ಯಂತ ನೇರ ನುಡಿಯ ವ್ಯಕ್ತಿ. ಸರಿ ಇದ್ದರೆ ಸರಿ, ತಪ್ಪಾಗಿದ್ದರೆ ಅವರು ಎಷ್ಟೇ ದೊಡ್ಡ ವ್ಯಕ್ತಿ ಆಗಿದ್ದರು ಮುಲಾಜು ನೋಡದೆ ತಪ್ಪನ್ನು ಹೇಳಿ ನೀರಿಳಿಸುತ್ತಿದ್ದರು. ರಾಯರದು ಖಾಸಗಿಯವರ ಬಳಿ ಕೆಲಸ, ಆದಾಯ ಕಡಿಮೆ. ಆದರೂ ನಾಲ್ಕು ಮಕ್ಕಳನ್ನು ಚೆನ್ನಾಗಿಯೇ ಓದಿಸಿದ್ದರು.  ಮೂರನೆಯವಳ  ಮದುವೆಯಾಗಲಿಕ್ಕೂ  ಇವರ ಆರೋಗ್ಯ ಕೈಕೊಟ್ಟು ಮನೆಯಲ್ಲೇ ಉಳಿದರು. ಮಗನ […]

ಕಥಾಗುಚ್ಛ

ಒಂದು ಸಾವಿನ ಸುತ್ತಾ ವೇಣುಗೋಪಾಲ್ ಕೆಲಸ ಮುಗಿದು ಮನೆಗೆ ಬರುವ ಹೊತ್ತಿಗೆ ರಾತ್ರಿ ಎಂಟು ಗಂಟೆಯಾಗಿತ್ತು. ಬಟ್ಟೆ ಬದಲಿಸಿ ಮುಖ ತೊಳೆದು, ಫ್ರಿಡ್ಜ್ನಲ್ಲಿದ್ದ ಎರಡು ಮೊಟ್ಟೆಗಳನ್ನ ತೆಗೆದುಕೊಂಡು ಬೆಳಗ್ಗಿನ ತಂಗಳಿಗೆ ಎಗ್ರೈಸ್ ಮಾಡಲು ಈರುಳ್ಳಿ ಕತ್ತರಿಸುತ್ತಿದ್ದೆ ಫೋನ್ ರಿಂಗಣಿಸಿತು ಅಪ್ಪನ ಫೋನ್ ಹಲೋ ಹೇಳಣ್ಣ.? ಎಲ್ಲಿದ್ದಿಲಾ.? ಇವಾಗ ಬಂದೆ ಮನೆಗೆ ಏನು ಹೇಳು.? ಮಾಗಡಿ ನಿಮ್ಮತ್ತೆ ಮಗ ಕೆರೆಗೆ ಬಿದ್ದನಂತೆ.. ಪೊಲೀಸೆರೆಲ್ಲ ಬಂದು ಹುಡುಕಿದರೂ ಸಿಕ್ಕಿಲ್ಲವಂತೆ ಅಲ್ಲಿ ಯಾರು ಇರೋದು ಕಾಣೆ..!? ಹೋಗು ಅದೇನ್ ವಿಚಾರಿಸು ಒಂದೇ […]

ಕಥಾಗುಚ್ಛ

ನನ್ನ ಅಪ್ಪ ಹೇಡಿಯಾಗಿಬಿಟ್ಟಿದ್ದ..! ವೇಣುಗೋಪಾಲ್ ನನ್ನ ಅಪ್ಪ ಹೇಡಿಯಾಗಿಬಿಟ್ಟಿದ್ದ..! ಬಡತನವನ್ನೇ ಬುನಾದಿಯಾಗಿ ಮೆಟ್ಟಿ ಸಿರಿತನದ  ಒಂದೊಂದು ಇಟ್ಟಿಗೆಯನ್ನು ಹೆಕ್ಕಿತಂದು ಬೆವರರಿಸಿ ನೆಮ್ಮದಿಯ ಬದುಕನ್ನು ಕಟ್ಟಿಕೊಡುತ್ತಿದ್ದ ಅಪ್ಪ ಹೇಡಿಯಾಗಿಬಿಟ್ಟಿದ್ದ..! ನಾ ಕಂಡ ಅಪ್ಪ ಹೀಗಿರಲಿಲ್ಲ.! ಉರಿಯುವ ಸೂರ್ಯನಂತೆ ಎಂತಹ ಕಷ್ಟಗಳ ಮೋಡಗಳನ್ನ ಕರಗಿಸಿ ಬಿಡುತ್ತಿದ್ದ.. ಅವನ ಪ್ರೀತಿಯು ಅಷ್ಟೇ ಆಗತಾನೆ ಕರೆದ ಹಾಲಿನಂತಹ ಸಿಹಿ ನಿಷ್ಕಲ್ಮಶವಾದ ತ್ಯಾಗವೆತ್ತ ಸಾಕಾರಮೂರ್ತಿ.. ಅಮ್ಮನ ಪ್ರಿತೆಯೇ ಕಾಣದ ನನಗೆ ಅವನ ಬೆಚ್ಚನೆಯ ತೋಳುಗಳೇ ಎಲ್ಲವೂ ಆಗಿತ್ತು ಮರಿಗುಬ್ಬಿಗೆ ಗೂಡಿನಂತೆ..! ಅವನಿಗೂ ಅಷ್ಟೇ ನಾನೆಂದರೆ […]

Back To Top