ಗಝಲ್
ಗುರಿ ದೂರ ದುರ್ಲಭ ಹಿಡಿಯದಿರು ಕಿರಿ ದಾರಿಗಳ
ತುಳಿದ ಹಾದಿ ಅನುಭವ ದೊಡ್ಡದು ಕೂಡಿಡು ಸಖ
ಗಝಲ್
ನೀ ಮೌನವಾದರೆ ಏನೆಂದು ತಿಳಿಯಲಿ ನಾನು
ಹೇಳಿಬಿಡು ನಿನ್ನ ಮನಸಿಗೆ ಏನಾಯಿತು ಮೈಲಿಗೆ ಸಖಾ
ಪ್ರಶ್ನೆಗಳು
ಪ್ರಶ್ನೆಗಳು ಭಾಗ್ಯ ಸಿ. ಕಾಣದ ವಿಧಿಯು ಸೂತ್ರದಾರನಾಗಿಹಿಡಿದಿಟ್ಟಿರುವನು ಜೀವನವನು ಎನ್ನುವರುಯೋಜನೆ ಮೇಲೊಂದು ಯೋಜನೆ ಮಾಡಿದರೂಅಣತಿಯಂತೆ ಸಾಗಿತ್ತಿಲ್ಲ ಬದುಕು ಕ್ರಮಿಸಬೇಕಾದ ಹಾದಿ ಬಹಳ ದೂರವಿದೆಏಕಾಂಗಿಯಾಗಿ ದಾರಿ ಸವಿಸಬೇಕಿದೆಕಿತ್ತೆಸೆಯಬೇಕಿದೆ ಸುತ್ತಲಿನ ಮುಳ್ಳನುಇರಿಸಬೇಕಿದೆ ಅಂತರಾಳದಲಿ ಕಲ್ಲನುನೊಯದಿರಲಿ ಅಪಹಾಸ್ಯದಿಂದಲಿ ಒಂದು ಹೆಜ್ಜೆ ಗುರಿಯಡೆಗೆಜಗ್ಗುತ್ತಿದೆ ಎರಡೆಜ್ಜೆ ಹಿಂದುಗಡೆಗೆಹಿಡಿದೆಳೆಯುತ್ತಿರುವವರ ನಾ ಅರಿಯೆವಿಧಿಯಾಟವೆನ್ನುತ್ತಿದೆ ಪ್ರಪಂಚಶಿಕ್ಷೆಯಾಗಬೇಕು ತಪ್ಪಿಗೆ ಅರಿವಿದೆತಿಳಿಯದೆ ಪ್ರತಿಕೂಲ ಪರಿಣಾಮವೇಕೆ? ಶಿಸ್ತಿನ ಯೋಜನೆಗೆ ಜಯ ಬೇಕಿದೆಪ್ರಶ್ನೆ ಎದ್ದಿದೆ ಮನಸ್ಸಿನಲಿಕಾಣದ ವಿಧಿಯೇಕೆ ಅಡ್ಡಗಾಲುಭವಿಷ್ಯ ನಿರ್ಮಾಣದಲಿ *********************
ಕಾವ್ಯಯಾನ
ಒಂದು ವೈರಸ್ ಮುಂದಿಟ್ಟು ಕೊಂಡು ನಾಗರಾಜ ಹರಪನಹಳ್ಳಿ ಅಬ್ಬಾ ಮೊನ್ನೆ ಸ್ವಾತಂತ್ರ್ಯ ಆಚರಸಿದೆವುಅದೆಷ್ಟು ಬಿಗಿ, ಅದೆಷ್ಟು ಭಯಗಳನ್ನಿಟ್ಟುಕೊಂಡುಎಲ್ಲಿಯ ಗಾಂಧೀ, ಎಲ್ಲಿಯ ಬ್ರಿಟಿಷರು, ಎಲ್ಲಿಯ ಸುಭಾಷ್ ಚಂದ್ರ …ಯಾರ ಹಂಗು ಇರಲಿಲ್ಲಒಂದು ವೈರಸ್ ಕಾರಣವಾಗಿ ನಗುವಿಲ್ಲ ಮೊಗವಿಲ್ಲ, ಮಕ್ಕಳಿಲ್ಲ, ಘೋಷಣೆಯಿಲ್ಲ, ಪೋಷಣೆಯಿಲ್ಲಎಲ್ಲವೂ ಕಳೆದುಕೊಂಡ ಭೂಮಿಮಕ್ಕಳನು ಕಳೆದು ಕೊಂಡ ತಾಯಿಏನೂ ಉಸಿರೆತ್ತುವಂತಿಲ್ಲವೈರಸ್ ಕಾರಣವಾಗಿ ಏನಿತ್ತು ಅಲ್ಲಿ , ಭಯ ಬಿಟ್ಟುಮುಖ ಗುರುತು ಸಿಗದಂತೆ ಹಾಕಿದ ಬಾಯಿಪಟ್ಟಿಉಸಿರೆತ್ತದಂತೆ ಕಾಡಿದ ವೈರಸ್ಕಾರಣವಾಗಿ ಹೌದು, ಈಗೀಗ ಎಲ್ಲೆಲ್ಲೂ ಫತ್ವಾಗಳ ಹೊರಡಿಸುವುದೇ ಆಗಿದೆ;ಮನುಷ್ಯನಿಂದ ಮನುಷ್ಯನ ಇಬ್ಬಾಗವಾದರೂಕಸಿದ […]
ಗಝಲ್
ಗಝಲ್ ಅಕ್ಷತಾ ಕೃಷ್ಣಮೂರ್ತಿ. ನಿನ್ನ ಮುಂಗೈ ಮೇಲೆ ನನ್ನ ಹೆಸರು ಹೇಗೆ ಬರೆಯಲಿ ನೀನೇ ಹೇಳುನಿನ್ನ ಗಲ್ಲ ಕುಕ್ಕುವ ಮುಂಗುರುಳು ಹೇಗೆ ಮುಟ್ಟಲಿ ನೀನೇ ಹೇಳು. ಆ ಒಂದು ದಿನದ ಸವಿ ನೆನಪು ಕಣ್ಣ ತುಂಬ ಹಾಗೆಯೇ ಉಳಿದಿದೆನಿನ್ನ ಕನಸಿನ ಬಾಗಿಲು ತೆರೆದೆ ಇದೆ ಹೇಗೆ ಮುಚ್ಚಲಿ ನೀನೇ ಹೇಳು. ಮನದ ಅಂಗಳದಲ್ಲಿ ನಿನ್ನ ಹೆಸರಿನ ರಂಗೋಲಿ ಹೂ ನಗುವಿನಂತೆನಿನ್ನ ಮೌನ ಧ್ಯಾನ ಇನ್ನು ಇದೆ ಹೇಗೆ ಎಬ್ಬಿಸಲಿ ನೀನೇ ಹೇಳು. ನೆರಳಿನೊಳಗಿನ ನೆರವಾಗಬೇಕು ನೆನಪಲಿ ನಾನು […]
ಕಾವ್ಯಯಾನ
ಅವನು.. ಸುಜಾತ ಲಕ್ಷ್ಮೀಪುರ. ಅವನು ಸುಳಿಯುತ್ತಿಲ್ಲ.ಈ ನೀರವ ಸಂಜೆಯಲಿ..ಬರೀ ಮಂಕು ಮಗ್ಗುಲಾಗುತ್ತಿದೆಕತ್ತಲಾವರಿಸಿ ಆಗಸವೂ ಬಿಕ್ಕುತ್ತಿದೆ . ಚಿಕ್ಕಿ ಚಂದ್ರಮರೂ ನಾಪತ್ತೆಪಯಣ ಬೆಳೆಸಿರಬೇಕುಅವನ ಊರಿನ ಕಡೆಗೇ..ಕಿಟಕಿಯಾಚೆ ಮಳೆಮೋಡವೂಕಣ್ಣಂಚಲಿ ತೊಟ್ಟಿಕ್ಕಲುಹವಣಿಸುತಿದೆ ಅರೆಗಳಿಗೆ ಅತ್ತುಬಿಡಲು ಅವಸರಿಸಿವೆ ನಯನಗಳುತಂಗಾಳಿಯೂ ತಂಪೀಯದೆಸುಟ್ಟು ಬೂದಿಯೂ ಆಗಿಸದೆಕಿಡಿ ತಾಗಿಸಿ ಮರೆಯಲಿ ಇಣುಕಿದೆ. ನಿಟ್ಟುಸಿರ ಮೈದಡವಿಮುದ್ದು ಮಾತುಗಳಲಿ ಒಲಿಸಿಜೇನು ಸುರಿಸುವ ಕಣ್ಣಂಚಿನ ಪಿಸುಮಾತೂ ಕಾಣೆಯಾಗಿದೆ ಬರಿದೆ ಹಂಬಲಿಕೆ ಚಡಪಡಿಕೆಮುಗಿಯದಾ ಕಾಲದ ಸಂಚುಸುಕ್ಕಾಗುತ್ತಿದೆ ನಿರೀಕ್ಷೆ.ಅವನು ಸುಳಿಯುತ್ತಿಲ್ಲಾ..ಬೆಳಗು ಬೈಗು ನೆನಪಿನ ಗಾಯಒಳಗೊಳಗೇ ಹಸಿರಾಡುತ್ತಿದೆ. ಬೇಸರದಿ ಆಸರೆಗೆಕತ್ತಲಲ್ಲಿ ಕೈಚಾಚಿದ್ದೇನೆಏಕಾಂತವೆಲ್ಲಾ ಲೋಕಾಂತಆಗಿಸುವ ಬಯಕೆ ಅವನುಮಾಯವಾಗಿದ್ದಾನೆ […]
ಕಾವ್ಯಯಾನ
ಸಾಹಿತ್ಯದ ಒಳಸುಳಿಗಳ ಜೊತೆ ಒಂದು ಸುತ್ತು!! ಸುಜಾತಾ ಲಕ್ಮನೆ ಅರೆಚಣವೂಅತ್ತಿತ್ತ ಅಲುಗದೇಮಗ್ಗುಲಲ್ಲೇ ಕೂತು ಕಚಗುಳಿಯಿಟ್ಟು ನಗಿಸುವಮನದನ್ನೆಯಂತೆ ಇದು –“ಸಾಮಾಜಿಕ ಜಾಲತಾಣ” !ನಾವೂ ನೀವೂ ಎಲ್ಲರೂ ಜಾಲಿಯಾಗಿ ಜಾಲಾಡಿಈಜಾಡುವ ಸುಂದರ ತಾಣ!ಮೆರೆಸಬಹುದಿಲ್ಲಿಸ್ವ-ಪ್ರತಿಷ್ಠೆ, ಸ್ವ-ಪ್ರಶಂಸೆ, ಬೊಗಳೆ ಒಂದಷ್ಟು, ವೈಯಕ್ತಿಕ ಬಿನ್ನಾಣ..!ಅಷ್ಟಷ್ಟು ಸಾಧನೆ ಸನ್ಮಾನಗಳ ಲಿಸ್ಟಿನ ಅನಾವರಣ!ಹಾಗೋ ಹೀಗೋ ಗೀಚಿ, ಬೀಗಿ,, ಎದೆ ಸೆಟೆಸಿಮೈ ಮನ ಮ(ಮೆ)ರೆಯಲು ಇದೊಂದು ಚಂದದ ನಿಲ್ದಾಣ!ಬರೆದದು ಜೊಳ್ಳೋ, ಸುಳ್ಳೋ, ಕಾವ್ಯವೋ, ವಾಚ್ಯವೋ,ನಿಯಮಬದ್ಧ ಗಜ಼ಲ್ಲೋ, ಅಪಭ್ರಂಶವೋ,ಸ್ವಂತವೋ, ಸಂಗತವೋ, ಅನೂಹ್ಯವೋಒಟ್ಟಾರೆ–ದೊಪ್ಪೆಂದು ರಾಶಿ ರಾಶಿ ಸುರುವಿಸಾಕಷ್ಟು ಲೈಕ್ ಗಿಟ್ಟಿಸಿದರೆಅಲ್ಲಿಗೆ ಸಾರ್ಥಕ್ಯ […]
ಕಾವ್ಯಯಾನ
ನದಿ ಈಗ ದಿಕ್ಕು ಬದಲಿಸಿದೆ ಸ್ಮಿತಾ ಅಮೃತರಾಜ್.ಸಂಪಾಜೆ. ಜುಳು ಜುಳೆಂದು ಹರಿಯುವನನ್ನೂರಿನ ತಿಳಿನೀರಿನ ನದಿಈಗ ಕೆನ್ನೀರ ಕಡಲು. ತಪ್ಪನ್ನೆಲ್ಲಾ ಒಪ್ಪಿಕೊಂಡಂತೆತೆಪ್ಪಗೆ ಹರಿಯುತ್ತಿದ್ದ ನದಿ.. ಒಣಗಿದೆದೆಯ ಮೇಲೆ ಮೊಗೆದುತಣಿಯುವಷ್ಟು ತೇವವನ್ನುನಮಗಾಗಿಯೇ ಕಾಪಿಡುತ್ತಿದ್ದ ನದಿ.. ಅಂಗಳದ ತುದಿಯವರೆಗೂ ಬಂದುಗಲಗಲಿಸಿ ನಕ್ಕು ನೇವರಿಸಿ ಹರಿಯುತ್ತಿದ್ದ ನದಿ.. ಹೌದು! ಇದುವೇ ನದಿಮೊನ್ನೆ ಹುಚ್ಚೆದ್ದು ಕೆರಳಿದ್ದಕ್ಕೆನೆಲದ ಎದೆಯೊಡೆದು ಸೆಲೆ ಸಿಡಿದುಸಾವಿರ ನದಿಯಾಗಿ ಒಸರಿ ಹರಿದವುರಕ್ತ ಕಣ್ಣೀರ ಕೋಡಿ. ದಿಕ್ಕಾಗಿದ್ದ ನದಿ ತಾನೇದಿಕ್ಕು ಬದಲಿಸಿ ಕೆಂಪಗೆ ಹರಿಯುವಾಗನಾನೋ ದಿಕ್ಕು ಕಾಣದೆ ದಿಕ್ಕೆಟ್ಟುನದಿ ಹರಿಯುವ ದಿಕ್ಕಿಗೆ ಮುಖ […]
ಕಾವ್ಯಯಾನ
ನಂದಿನಿ ಹೆದ್ದುರ್ಗರವರ ಕವಿತೆ ಅವನ ಅದ್ದಿ ಬರೆದ ಪದ್ಯಗಳುಈಗಲೂ ಹೊಸದಾಗಿಯೇ ಇವೆ… ನಾಜೂಕು ಅಕ್ಷರಗಳ ನೇವರಿಸಿಒಳಗೊಳ್ಳುತ್ತೇನೆ ಹೊಸದೆಂಬಂತೆಪ್ರತಿ ಬಾರಿಯೂ… ತೆರೆದ ಬಾಗಿಲಿನ ಪಂಜರದಿಂದಹಾರಿ ಹೋದ ಹಕ್ಕಿಯೊಂದುಇಳಿಸಂಜೆಗೆ ಮರಳಿದಿನದ ಕಥೆ ಹೇಳುತ್ತದೆ. ಕೆಲವು ಹಳತುಗಳುಹೊಸತಾಗಬಹುದೆಂಬ ಪುಳಕಉಳಿದೇಹೋಗಿದೆ ಇಲ್ಲಿ…! ಹೊಳಪು ಮತ್ತು ಬೆಳಕುಬಚ್ಚಿಡುವುದೂ ಎಂಥಹರಸಾಹಸ ಪ್ರಭುವೇ…!!! ****************
ಕಾವ್ಯಯಾನ
ಪ್ರಕೃತಿ ಪಾರ್ವತಿ ಸಪ್ನಾ ಶತಮಾನಗಳ ಲೆಕ್ಕವಿಲ್ಲದೇಇದ್ದಲ್ಲೇ ಇದ್ದು ಸತತವಾಗಿಮಾನವನ ಕೈಯಲ್ಲಿನಾಶವಾಗುತ್ತಿರುವ ಪ್ರಕೃತಿಕೇಳಲಿಲ್ಲನಾನು ಯಾರೆಂದು ! ಕರಿಮೋಡ ಸುತ್ತುತ್ತಲೇ ಇದೆನೀಲಿ ಬಾನು ಇದ್ದಲ್ಲೇ ಇದೆಸೂರ್ಯ ಚಂದ್ರರಿಗೇ ಪುರಸೊತ್ತಿಲ್ಲಆದರೂ ನಮ್ಮನೆಂದು ಕೇಳಲಿಲ್ಲ.ನಾನು ಯಾರೆಂದು ! ಕೋಟಿ ಜೀವ ರಾಶಿಗೆಜಲವೇ ಬೇಕು ಭೂಮಿಗೆದಾಹ ನೀಗಿ ಬದುಕ ಕೊಟ್ಟುಕಡಲ ಸೇರುವ ನೀರಿಗೆಈಗಲೂ ಅರಿವಿಲ್ಲ ನೋಡುನಾನು ಯಾರೆಂದು ! ಏನೇನೂ ಅಲ್ಲದತನ್ನ ಮೂಲ ತಿಳಿಯದಮಾನವೀಯತೆ ಮರೆತುಯಾರೊಂದಿಗೂ ಬೆರೆಯದಮಾನವ ಜನ್ಮವೇಒಮ್ಮೆ ನಿನ್ನನ್ನೇ ಪ್ರಶ್ನೆ ಮಾಡಿಕೋ ನಾನು ಯಾರೆಂದು ! *********************