ಪ್ರಶ್ನೆಗಳು

ಪ್ರಶ್ನೆಗಳು

ಭಾಗ್ಯ ಸಿ.

ಕಾಣದ ವಿಧಿಯು ಸೂತ್ರದಾರನಾಗಿ
ಹಿಡಿದಿಟ್ಟಿರುವನು ಜೀವನವನು ಎನ್ನುವರು
ಯೋಜನೆ ಮೇಲೊಂದು ಯೋಜನೆ ಮಾಡಿದರೂ
ಅಣತಿಯಂತೆ ಸಾಗಿತ್ತಿಲ್ಲ ಬದುಕು

ಕ್ರಮಿಸಬೇಕಾದ ಹಾದಿ ಬಹಳ ದೂರವಿದೆ
ಏಕಾಂಗಿಯಾಗಿ ದಾರಿ ಸವಿಸಬೇಕಿದೆ
ಕಿತ್ತೆಸೆಯಬೇಕಿದೆ ಸುತ್ತಲಿನ ಮುಳ್ಳನು
ಇರಿಸಬೇಕಿದೆ ಅಂತರಾಳದಲಿ ಕಲ್ಲನು
ನೊಯದಿರಲಿ ಅಪಹಾಸ್ಯದಿಂದಲಿ

ಒಂದು ಹೆಜ್ಜೆ ಗುರಿಯಡೆಗೆ
ಜಗ್ಗುತ್ತಿದೆ ಎರಡೆಜ್ಜೆ ಹಿಂದುಗಡೆಗೆ
ಹಿಡಿದೆಳೆಯುತ್ತಿರುವವರ ನಾ ಅರಿಯೆ
ವಿಧಿಯಾಟವೆನ್ನುತ್ತಿದೆ ಪ್ರಪಂಚ
ಶಿಕ್ಷೆಯಾಗಬೇಕು ತಪ್ಪಿಗೆ ಅರಿವಿದೆ
ತಿಳಿಯದೆ ಪ್ರತಿಕೂಲ ಪರಿಣಾಮವೇಕೆ?

ಶಿಸ್ತಿನ ಯೋಜನೆಗೆ ಜಯ ಬೇಕಿದೆ
ಪ್ರಶ್ನೆ ಎದ್ದಿದೆ ಮನಸ್ಸಿನಲಿ
ಕಾಣದ ವಿಧಿಯೇಕೆ ಅಡ್ಡಗಾಲು
ಭವಿಷ್ಯ ನಿರ್ಮಾಣದಲಿ

*********************

19 thoughts on “ಪ್ರಶ್ನೆಗಳು

  1. ತುಂಬಾ ಚೆನ್ನಾಗಿ ಮೂಡಿ ಬಂದಿದೆ. ಪ್ರತಿಯೊಬ್ಬರ ಜೀವನದಲ್ಲಿ ವಿಧಿ ಎಂಬ ಕಾಲಚಕ್ರವು ಹೇಗೆ ಪಾತ್ರವಹಿಸುತ್ತದೆ ಎಂಬುದರ ಬಗ್ಗೆ ಮೂಡಿಬಂದಿರುವ ಕವನ ಅದ್ಭುತವಾಗಿದೆ.

  2. ಜೀವನದ ಅನುಭವ ಕವನದ ರೂಪದಲ್ಲಿ Abivykta Adante ಇದೆ. ಕವನದ ಸಾಲುಗಳಲ್ಲಿ ಅನುಭವದ ತೀವ್ರತೆಯ arivagutide. Its good development. God bless you.

  3. ಚಂದದ ಕವಿತೆ ಭಾಗ್ಯ ಮೇಡಮ್..ಶುಭಾಶಯಗಳು.. ಹೀಗೆ‌ ಮೂಡುತ್ತಿರಲಿ‌ ಕವನಗಳು

  4. Bhagya tumba chennagi arthisidira nimmali enta obba kavi edare anta gottagidu e akyavanna odi good luck enu olle thoughts nimminda horahommali nice yàar

  5. ತುಂಬಾ ಸುಂದರವಾಗಿ ಮೂಡಿ ಬಂದಿದೆ ಭಾಗ್ಯ , very proud of you

  6. ಭಯದ ಇನ್ನೊಂದು ಅರ್ಥ ಭವಿಷ್ಯ. ಆ ಭವಿಷ್ಯವನ್ನು ಚಿಂತಿಸದೇ ಬದುಕ ನೂಕಬೇಕೆನುವ ಹಂಬಲ ನಿಮ್ಮ ಕವನದ ಸ್ಪೂರ್ತಿ. ನೀವು ಕವನಕ್ಕೆ ಬಳಸಿಕೊಂಡ ವಸ್ತು ವಾಸ್ತವಿಕ ಬದುಕಿಗೆ ಹಿಡಿದ ಕನ್ನಡಿ. ನಿಮ್ಮ ಕವನದಿಂದ ಓದುಗನ ಮನದಲ್ಲಿ ನೂರಾರು ಪ್ರಶ್ನೆಗಳು ಪುಟಿದೇಳುತ್ತವೆ.ಆ ಎಲ್ಲ ಪ್ರಶ್ನೆಗಳು ಶೇಷ ಪ್ರಶ್ನೆಗಳಾಗಿಯೇ ಉಳಿಯಬಹುದೇ ಎಂಬ ಆತಂಕ ಕಾಡುತ್ತದೆ. ಸುಂದರ ಪ್ರಯತ್ನ. ಇನ್ನೂ ಅನೇಕ ಕವನಗಳು ನಿಮ್ಮಿಂದ ಮೂಡಿಬರಲಿ.

Leave a Reply

Back To Top