ಕಾವ್ಯಯಾನ
ಸಗ್ಗದ ಬಾಗಿಲು ನಿರ್ಮಲ ಆರ್. ವಸಂತಕೆ ಹೊಸ ಚಿಗುರು,ಹೊಸ ಯೌವ್ವನ ನಿಸರ್ಗ ಸೌಂದರ್ಯಕೆ ಮನ ತಾಳಿತು ಮೌನ ನಭದಲಿ ನಗುತಿಹನು ರವಿ ಹಸಿರಿನಿಂದ ಕಂಗೊಳಿಸುತಿಹುದು ಭುವಿ ಅಲ್ಲಲ್ಲಿ ಹಕ್ಕಿಗಳ ಇಂಚರ ಸೃಷ್ಟಿಯೊಂದು ಬನದೇವಿಯ ಭವ್ಯ ಮಂದಿರ ಇರುಳಲಿ ಉಲ್ಲಸಿತನಾದ ಚಂದಿರ ತಾಯ ಕಂಕುಳಲಿರುವ ಕಂದನಿಗವನೇ ಸುಂದರ ಕಪ್ಪು ಮೋಡವ ಹೊತ್ತುತರುವ ಮಳೆರಾಯ ದುಯ್ ಎನ್ನುತ ತೊಳೆವ ಇಳೆಯ ಮೇಲಿನ ಕೊಳೆಯ ಮಳೆಯ ಜಿನುಗಿಗೆ ನವಿಲ ನರ್ತನ ಕಂಡೆಯ ಮನ ಅಚ್ಚರಿಗೊಂಡಿತು ಕಂಡು ಬನಸಿರಿಯ ಪ್ರಕೃತಿ ಸೌಂದರ್ಯ ನೋಡುತಿರೆ […]
Read More
ಆ ಗುಡಿಗಳಲ್ಲಿ ಜ್ಯೋತಿ ಡಿ.ಬೊಮ್ಮಾ. ಆ ಗುಡಿಗಳಲ್ಲಿ.. ಪರದೆ ಹಾಕಿದ ಗರ್ಭಗುಡಿಯೊಳಗೆ ಅರ್ಚಕರು ದೇವಿಯ ಮೈ ಮುಟ್ಟಿ ಬಟ್ಟೆ ಬದಲಾಯಿಸಿ ,ಬೊಟ್ಟಿಟ್ಟು,ಸಿಂಗರಿಸಿ ಹೊರಗೆ ದರ್ಶನಕ್ಕೆ ನಿಂತ ಸ್ತ್ರೀಯರನ್ನೂ ಮುಟ್ಟಿಸಿಕೊಳ್ಳದೆ ಮೆಲಿಂದಲೆ ಎಸೆದ ಪ್ರಸಾದವನ್ನೂ ಭಕ್ತಿಯಿಂದ ಸ್ವೀಕರಿಸಿ,ಕಣ್ಣಿಗೊತ್ತಿಕೊಂಡು ಪರವಶರಾಗಿ ದೇವಿಯೆಡೆ ನೋಡಿದಾಗ.. ಮೂಕಳಾಗಿ ನಿಂತ ದೇವಿಯೂ ನಿಟ್ಟುಸಿರು ಹಾಕುತಿದ್ದಳು ಒಳಗೊಳಗೆ ಬೇಯುತ್ತ ಕೇಳುವಂತಿತ್ತು ನೋಟ ನಿಮ್ಮೊಳಗಿರದ ಅದಾವ ಶಕ್ತಿ ದೇವಾಲಯದಲ್ಲಿದೆ. ಮುಟ್ಟಾದವರೂ ದೇವರನ್ನೂ ಮುಟ್ಟಬಾರದು ಎಂಬ ಸಂಪ್ರದಾಯದಿಂದ ದೇವಿಯೂ ನಡುಗುವಳು ತನ್ನೊಳಗೂ ಸ್ರವಿಸುವ ಸ್ರಾವ ಕಾಣದಂತೆ ತಡೆಗಟ್ಟುವದು ಹೇಗೆಂದು […]
Read More
ಕೆಂಚಬೆಕ್ಕಿಗೆ ಏನಾಯ್ತು ವಿಜಯಶ್ರೀ ಹಾಲಾಡಿ ಕೆಂಚಬೆಕ್ಕಿಗೆ ಏನಾಯ್ತು ಕೆಂಚಬೆಕ್ಕಿಗೆ ಏನಾಯ್ತು ಬಾಲವು ಪೂರಾ ಮಣ್ಣಾಯ್ತು ಗಡಗಡ ಚಳಿಗೆ ಬಿಸಿ ಬಿಸಿ ಬೋಂಡಾ ಪಾಕಂಪಪ್ಪನು ತಿಂದಾಯ್ತು ಕೆಂಚಬೆಕ್ಕಿಗೆ ಏನಾಯ್ತು ಬಾಲವು ಪೂರಾ ಮಣ್ಣಾಯ್ತು ಇರುವೆ ಸಾಲನು ಹಾ….ರಿ ನೆಗೆದು ಪುಟ್ಟಿಯ ಮನೆಗೆ ಬಂದಾಯ್ತು ಕೆಂಚಬೆಕ್ಕಿಗೆ ಏನಾಯ್ತು ಬಾಲವು ಪೂರಾ ಮಣ್ಣಾಯ್ತು ಮೀನಿನ ಮುಳ್ಳು ದೊಂಡೆಗೆ ಸಿಕ್ಕಿ ಕೆಮ್ಮಿ ಕೆಮ್ಮಿ ಸುಸ್ತಾಯ್ತು ಕೆಂಚಬೆಕ್ಕಿಗೆ ಏನಾಯ್ತು ಬಾಲವು ಪೂರಾ ಮಣ್ಣಾಯ್ತು ಗಡವ ಬೆಕ್ಕು ಹೊಯ್ ಕಯ್ ಮಾಡಿ ಕಾಲಿನ ಮೂಳೆ ಮುರಿದಾಯ್ತು […]
Read More
ನೆನಪಾಗಿಸು.. ಲೋಕೇಶ್ ಮನ್ವಿತ್ ನೆನಪಾಗಿಸು…. ಮುಲಾಮು ಹಚ್ಚಲಾಗದ ಜಾಗದಲ್ಲಿ ಗಾಯ. ಕಾರಣ ಹೊಸದೇನಲ್ಲ ಅರಚುತ್ತೇನೆ ಚೀರುತ್ತೇನೆ ನರಳುತ್ತೇನೆ ಕಾಣಿಸುವುದಿಲ್ಲ ಜಗದ ಕಣ್ಣುಗಳಿಗೆ ಕೇಳಿಸುವುದಿಲ್ಲ ಜಗದ ಕಿವಿಗಳಿಗೆ ನಗುವಿನ ಮುಖವಾಡ ಬದುಕು ಸಾಗಿದೆ ಕೊನೆಯ ಬಿನ್ನಹವಿಷ್ಟೇ ಗಾಯಕ್ಕಿಷ್ಟು ಮುಲಾಮು ಬೇಡ ನಂಜನ್ನಿಟ್ಟು ನೆನಪಾಗಿಸು ನನ್ನವರ ಹೃದಯದಲ್ಲಿ. **********
Read More
ಚಲಿಸುವ ಮುಳ್ಳು ಚಂದ್ರಪ್ರಭ ಬಿ. ಚಲಿಸುವ ಮುಳ್ಳು ಆಗಲೇ ನಿನಗೆ ಐವತ್ತಾತs ! ಅವ ತಮಾಷೆಗಿಳಿದ.. ಹ್ಞೂಂ.. ನಿನಗ ಅರವತ್ತಾಗುವಾಗ ನನಗಿನ್ನೆಷ್ಟಾಗಬೇಕು? ಹೆಚ್ಚುತ್ತಿದ್ದ ಈರುಳ್ಳಿ ಕಣ್ಣ ತೋಯಿಸಿತು ‘ಹೆರಳಿಗೆ ಹೂ ಮುಡದರೆ ನೀ ಅದೆಷ್ಟ ಚಂದ ಕಾಣತೀ ಈಗಲೂ’ ಅವ ಹೇಳಿದ ಹೆರಳೆಲ್ಲಿದೆ.. ಈಗಿರವುದು ಒಂದು ಮೋಟು ಜಡೆ ಅಷ್ಟೇ.. ಒಗ್ಗರಣೆ ಹೊತ್ತಕೊಂಡೀತೆಂದು ಉರಿ ಸಣ್ಣ ಮಾಡುತ್ತ ಹೇಳಿದೆ ‘ಆ ಲೇಖಕರು ಮುನ್ನುಡಿ ಬರೆದು ಕೊಟ್ಟರೇನು ನಿನಗೆ.. ಮತ್ತ ನಿನ್ನ ಪುಸ್ತಕ ಬಿಡುಗಡೆ ಯಾವಾಗ?’ ಮುತುವರ್ಜಿಯಿಂದ ಅವ […]
Read More
ಕಣ್ಣ ಕನ್ನಡಿ ಶಾಂತಾ ಜೆ ಅಳದಂಗಡಿ ಕಣ್ಣಕನ್ನಡಿ ಹಸಿರ ಉಸಿರು ಅದುಮಿ ಹಿಡಿದು ತಂಪು ತಂಗಾಳಿ ಏಕಿಲ್ಲ ವೆಂದರೆ ಏನಹೇಳಲಿ ಉತ್ತರ? ಗೈದತಪ್ಪಿಗೆ ಬದುಕಾಗಿದೆ ತತ್ತರ ಕೊಳಕ ಕೊಳಗವ ಚೆಲ್ಲಬಿಟ್ಟು ಶುದ್ಧಪರಿಮಳ ಇಲ್ಲವೆಂದರೆ ಯಾರು ಕೊಡುವರು ಉತ್ತರ? ಪಡೆಯಬೇಕಿದೆ ಕೆಟ್ಟ ವಾಸನೆ ನಿರಂತರ ಬದಿಗೆಕರೆದು ಕಳ್ಳತನದಲಿ ಲಂಚನೀಡಿ ಕೆಲಸ ಮಾಡಿಸಿ ದುಡ್ಡಿನಾಸೆಯ ತೋರಿ ಕೆಡಿಸಿ ರಾಜಕಾರ್ಯವ ನಿಂದಿಸಿದರೆ ಯಾರು ಕೊಡುವರು ಉತ್ತರ ಸರದಿಸಾಲಿನ ಮಧ್ಯೆತೂರಿ ಬಾಯಬಡಿದು ಬಣ್ಣಗೆಟ್ಟರೆ ಮಾನ್ಯ ನೆಂಬ ಪದವಿ ಸಿಗುವುದೆ? ಅರ್ಥವಿಲ್ಲದ ಪ್ರಶ್ನೆಗೆ ಸುಮ್ಮನಿರುವುದೆ […]
Read More
ತಾಮ್ರದ ಕೊಡ ಸಂಜಯ ಮಹಾಜನ ತಾಮ್ರದ ಕೊಡ ಭಾರವಾದವೋ ತಾಮ್ರದ ಕೊಡ ತಲೆಯ ಮೇಲೆ ಭಾರದಾದವೋ ತಾಮ್ರದಕೊಡ ಕಾಣದಾದವೋ ನುರು ವರುಷ ಹೊಳಪು ತಾಳಿತಾದರೂ ತಲೆಯಮೇಲೆ ಹೊತ್ತು ಭಾರ ತಾಳದಾದವೋ ತಾಮ್ರದಕೊಡ ಕಾಣದಾದವೋ ಆರೋಗ್ಯ ವೃದ್ಧಿಸಿದರೂ ತಾಂಮ್ರದ ಕೊಡ ವೃದ್ಧಿಯಾಗಲಾರವೋ ತಾಮ್ರದಕೊಡ ಕಾಣದಾದವೋ ತೂತುಬಿದ್ದ ಕರಳುಗಳಿಗೆ ಅಮೃತ ಬಿಂದು ನೀಡಿತಾದರೂ ಕೊಡದ ತಳಕೆ ಬಿದ್ದ ತೂತು ತುಂಬದಾದವೋ ತಾಮ್ರದಕೊಡ ಕಾಣದಾದವೋ ಹಳೆಯ ಕೊಡ ಅಟ್ಟದಲಿ ಉಳಿಯಿತಾದರೂ ಹೊಳಪು ಕಳೆದುಕೊಂಡು ಕಪ್ಪಾಗಿ ಮಾತನಾಡದಾದವೋ ತಾಮ್ರದಕೊಡ ಕಾಣದಾದವೋ ತವರಿನಿಂದ ಉಡುಗೊರೆಯಾಗಿ […]
Read More
ಗಝಲ್ ಎ.ಹೇಮಗಂಗಾ ಪ್ರೇಮಿಗಳ ದಿನವೇಕೆ ? ನಾವಿಬ್ಬರೂ ಪ್ರೇಮಿಸದ ದಿನವೇ ಇಲ್ಲ ಪ್ರೀತಿಯ ಅಭಿವ್ಯಕ್ತಿಯೇಕೆ ? ಉತ್ಕಟವಾಗಿ ಪ್ರೀತಿಸದ ದಿನವೇ ಇಲ್ಲ ಸಪ್ತಪದಿಯಲಿ ಒಂದಾದ ನಮಗೆ ಬಾಳು ದೈವ ನೀಡಿದ ಕೊಡುಗೆ ಬೇರೆ ಉಡುಗೊರೆಯೇಕೆ? ಮುತ್ತಿನ ವಿನಿಮಯವಿರದ ದಿನವೇ ಇಲ್ಲ ನಿನ್ನೊಲವ ಸಾಗರದಿ ಎಲ್ಲ ಮರೆತು ಮುಳುಗಿಹೋಗಿರುವೆ ಹೊನ್ನಿನ ತೋಳಬಂದಿಯೇಕೆ? ತೋಳ್ಸೆರೆಯಿರದ ದಿನವೇ ಇಲ್ಲ ಮಧುಶಾಲೆಯ ಬಾಗಿಲು ಕರೆದರೂ ನೀನತ್ತ ಇನ್ನು ಸುಳಿಯಲಾರೆ ಮಧುಪಾನದ ಅಮಲೇಕೆ? ಪ್ರೀತಿ ನಶೆಯಿರದ ದಿನವೇ ಇಲ್ಲ ಪವಿತ್ರ ಬಂಧನದಿ ಬೆಸೆದುಹೋಗಿರೆ ಅಂತರವೆಲ್ಲಿ […]
Read More
ಅಧರಂ-ಮಧುರಂ ತುಟಿ ಜೇನು, ಮೊಗ ಜೇನು, ಸಕಲವೂ ಸವಿ ಜೇನು! (ವಲ್ಲಭಾಚಾರ್ಯರ “ಅಧರಂ ಮಧುರಂ” ಕನ್ನಡ ಭಾವಾನುವಾದದ ಪ್ರಯತ್ನ. ಪರಂಪರೆ ಕೂಡ ಹೇಗೆ ಪ್ರಿಯತಮನನ್ನು ಆರಾಧಿಸಿ ಭಜಿಸುತ್ತಿತ್ತು ಎನ್ನುವುದಕ್ಕೊಂದು ಪುರಾವೆ. ) ರಾಮಸ್ವಾಮಿ ಡಿ.ಎಸ್. ತುಟಿ ಜೇನು ಮೊಗ ಜೇನುಕಣ್ಣ ನೋಟವೆ ಜೇನು, ನಗೆ ಜೇನುಎದೆಯೊಳಗೆ ಸುರಿವ ಜೇನು, ನಡಿಗೆಗೆ ಸೋತೆಸವಿಯರಸನೇ ನೀನು, ಸಕಲವೂ ಸಿಹಿ ಜೇನು. ಮಾತಲ್ಲಿ ಜೇನು,ಚರಿತೆ ಚಪ್ಪರಿಸಿದರೆ ಜೇನು,(ಉಟ್ಟ) ಬಟ್ಟೆ ಸವಿ ಜೇನು, ಸಂಕೇತದೊಳಗೆ ಜೇನುನೀನಿತ್ತ ಬರುವುದು ನನ್ನ ಸುತ್ತುವುದಂತೂ ತಿಳಿಜೇನುಸವಿಯರಸನೇ ನೀನು, […]
Read More
ಪ್ರೇಮದ ಹನಿಗಳು ಎ.ಹೇಮಗಂಗಾ ಯಾವ ಆಚರಣೆಯೂ ನಮ್ಮ ಪ್ರೇಮಕ್ಕೆ ಬೇಕಿಲ್ಲ ಕಾರಣ, ನಾನೂ ನೀನೂ ಪ್ರೇಮಿಸದ ದಿನವೇ ಇಲ್ಲ ! ಆದ ನನ್ನ ಇನಿಯ ನೊಂದ ಬಾಳಿಗೆ ಒತ್ತಾಸೆ ನನಗೋ ಅವನ ಕೆನ್ನೆಗೆ ಕೆನ್ನೆ ಒತ್ತುವ ಆಸೆ ! ಸ್ವಭಾವದಲ್ಲಿ ನನ್ನ ನಲ್ಲ ನಿಜಕ್ಕೂ ವಾಚಾಳಿ ಬಿಡುವುದಿಲ್ಲ ಪರಿಪರಿಯಾಗಿ ನನ್ನ ಕಾಡಿಸುವ ಚಾಳಿ ಹೆದರುವುದಿಲ್ಲ ನಾನು ದಿನವೂ ಬರುವ ಇರುಳಿಗೆ ಇದೆಯಲ್ಲಾ ಪ್ರಿಯಸಖನ ಕಣ್ಬೆಳಕಿನ ದೀವಿಗೆ ! ಬೇಕಿಲ್ಲ ನನಗೆಂದಿಗೂ ಮಧುಶಾಲೆಯ ಮಧುಪಾತ್ರೆ ನೀಡು ಕೊನೆತನಕ ನಿನ್ನಧರದ […]
Read More| Powered by WordPress | Theme by TheBootstrapThemes