ಕಾವ್ಯಯಾನ
ಗಝಲ್ ರತ್ನರಾಯಮಲ್ಲ ಬಾಳಲ್ಲಿ ಎಡರು ತೊಡರುಗಳು ಬಂದಾಗ ನಿನ್ನ ಸಹಾಯ ಬೇಕು ಸಾಮಾಜಿಕ ವ್ಯವಸ್ಥೆಯು ಎದುರಾದಾಗ ನಿನ್ನ ಸಹಾಯ ಬೇಕು ಈ ಜೀವನದಲ್ಲಿ ನಿನ್ನನ್ನು ಹೊರತುಪಡಿಸಿ ಬೇರೆ ಯಾರೂ ಇಲ್ಲ ಅನುದಿನವು ನಾನು ಹೊಸ್ತಿಲು ದಾಟುವಾಗ ನಿನ್ನ ಸಹಾಯ ಬೇಕು ರಜನಿಗೆ ರಜನೀಚರ ಬೆಂಗಾವಲಾಗಿರುವನು ರವಿ ಮೂಡೊವರೆಗೆ ಕರಾಳ ಅಂಧಕಾರವು ನನಗೆ ಅಪ್ಪಿದಾಗ ನಿನ್ನ ಸಹಾಯ ಬೇಕು ಅನುರಾಗದ ನಿಷ್ಠೆಯಿಂದ ನಾನು ನಿನ್ನನ್ನು ಹಿಂಬಾಲಿಸುತಿದ್ದೇನೆ ಜೀವನದಲ್ಲಿ ಉಸಿರಿನೊಂದಿಗೆ ಆಡುವಾಗ ನಿನ್ನ ಸಹಾಯ ಬೇಕು ನಾವು ಮೊದಲೇ ಭೇಟಿಯಾಗಿದ್ದೆವೆಂದು […]
ಕಾವ್ಯಯಾನ
ಮೌನ ಭಾಷೆ ಸರೋಜಾ ಶ್ರೀಕಾಂತ್ ಅದಾವುದೋ ದೂರದ ಭಾವಗಳೂರಿಗೆ ಬರಸೆಳೆದ ಗಳಿಗೆಯಲ್ಲೇ..! ಮತ್ತಾವುದೂ ನೆನಪಾಗದಂತೆ ಮರೆಸಿ ಕಾಡಿದವನು ಕ್ಷಣದಲ್ಲೇ..!! ತಣ್ಣನೆಯ ತಂಗಾಳಿಯಲ್ಲೂ ನುಸುಳಿ ನಸು ನಾಚಿಸಿದವನಿವನೆ..! ಹೊಂಬಿಸಿಲಿನ ಹೊನ್ನ ರಶ್ಮಿಯಲ್ಲೂ ತುಸು ಸಂಚರಿಸಿದವನಿವನೇ..!! ಹಸಿರಸಿರಿನ ತುಂತುರು ಹನಿ ಹನಿಯಲ್ಲೂ ನಿನ್ನಿರುವಿನ ರೋಮಾಂಚನ..! ಅರಳಿದ ಸುಮದೊಳಗಿನ ಘಮವೂ ನಿನ್ನರಿವಿನ ಅನಾವರಣ..!! ಸ್ಪರ್ಶದುಸಿರಿಗೆ ಸಂಪ್ರೀತಿಯ ಹೂಬಾಣ ಬಿಟ್ಟು ಪ್ರೇಮದ ಹೆಸರಿಟ್ಟವ ನೀನೆ..! ಮೊದಲೊಲವಿನ ಮೌನ ಭಾಷೆಗೆ ಮರುಧ್ವನಿಯ ಮಾತು ಶುರು ನಿನ್ನಿಂದಲೇ..!! *********
ಕಾವ್ಯಯಾನ
ಇಂದಿನ ಕವಿತೆ ಡಾ.ವೈ.ಎಂ.ಯಾಕೊಳ್ಳಿ ಬೇಡ ಗೆಳೆಯ ನನ್ನ ಕವಿತೆಗಳಲ್ಲಿ ನನ್ನ ಹುಡುಕಬೇಡ ಬರೀ ನನ್ನ ಬಗ್ಗೆ ನಾನು ಬರೆದರೆ ಕವಿಯಾಗಲಾರೆ ಕೂಡ ಪಕ್ಕದಮನೆಯಲಿ ಹಸಿದವರ ಅರೆಹೊಟ್ಟೆಯ ಬಗ್ಗೆ ಬರೆಯದಿರೆ ನನ್ನ ಕವಿತೆ ಆಗಬಹುದು ಬರೀ ಪದಗಳ ಸಂತೆ ಸುತ್ತಲಿನ ಜಗದಲಿ ನೋವಿಂದ ನಲುಗಿರಲು ನನ್ನ ಮಂದಿ ಚಂದ್ರ ತಾರೆಗಳ ಬಗ್ಗೆ ಹಾಡು ಕಟ್ಟಿದರೆ ನಾ ಎಂಥ ಕವಿಯು ಅಂದಿ ನನ್ನ ಹಾಡು ಜೊತೆಯಾಗಬೇಕು ಗೆಳೆಯ ನನ್ನೂರ ರೈತ ಗೆಳೆಯನ ನೇಗಿಲ ಕುಳಕೆ ರಾಟಿಯ ಎತ್ತುಗಳ ನೊಗದಿ ಬಾವಿಯಾಳವ […]
ಕಾವ್ಯಯಾನ
ನೆನಪ ತಿಜೋರಿ ಶಾಲಿನಿ ಆರ್. ನೆನಪಿಗೊಂದು ಮೊಳೆ ಹೊಡೆಯುತಿದ್ದೇನೆ, ಯಾರಿರದ ಇರುಳಲಿ ಚಂದಿರನ ಬೆಳಕಲಿ, ಮೆಲ್ಲನೆ ಅರಳಿದ ನೈದಿಲೆಗು ಸಂಕೋಚ, ಸದ್ದು ಕೇಳಿಸಿತೇ ಅವನಂಗಳಕು! ಸುದ್ದಿಯಾಗದಿರಲಿದು ಹೊಸ್ತಿಲಾಚೆ, ಮರಳಿ ಮನದ ಮೂಲೆಗೆ ನೆನಪುಗಳ ಜೇಡ ಬಲೆ ಸುಮ್ಮನೆ ಜಿನುಗಿದ ಕಣ್ಣಹನಿಗೂ ದಿಗಿಲು, ನಗುವ ಕತ್ತಲಿಗೂ ಬಿಕ್ಕು ಕೇಳಿಸಿತೇ? ಮತ್ತೆ ನೋಡುತ್ತೇನೆ ಗೋಡೆಯ ಕ್ಯಾಲೆಂಡರ್ ದಿನದ ಅಂಕ, ನಗೆಯ ಅನುರಣಿತ ಬೇಡದೆ ಉಳಿದ ಮಾವಿನ ಚೂರುಗಳು ಮರುಗುವಾಗ ಮನದಾಚೆಯ ಹೆದ್ದಾರಿಲಿ ಭಾರಿ ಮಳೆಯ ಸದ್ದು ತೊಯ್ದರು ತೋಯದ ನಿರ್ಲಿಪ್ತ […]
ಕಾವ್ಯಯಾನ
ಒಡೆದ ಕನ್ನಡಿ ವಿಭಾ ಪುರೋಹಿತ ಒಡೆದ ಕನ್ನಡಿ ಬಿಂಬದಲಿ ಬದುಕು ಹುಡುಕುವ ಹುಚ್ಚು ಎಂದೋ ಬಸವಳಿಯಬೇಕಿತ್ತು ನಿಂತನೀರಿಗೆ ಬಿದ್ದ ತುಂತುರು ಹನಿಗಳ ಪ್ರೇಮ ಮತ್ತೆ ನಗಿಸಿತ್ತು. ಎಷ್ಟು ತುಂಡಾದರೂ ಇಡಿಯಾಗಿ ಬೆಳೆವ ಮಣ್ಣು ಹುಳುವಿನ ಹಟವು ಬೆರಗು ಕಂಡಿತ್ತು ಕಣಕಣದ ಉಸಿರು ಜೀವಂತವಾಗಿ ಬೆಳೆದು ಪ್ರೀತಿ ಹಬ್ಬಿತ್ತು. ಬುಡಕಡಿದ ಮರಗಳಿಗೆ ಚಿಗುರುಣಿಸುವ ಪ್ರಕೃತಿ ವಾತ್ಸಲ್ಯ ವು ದಂಗುಬಡಿಸಿತ್ತು, ನರನಾಡಿಗಳ ನೆಲದ ಮೋಹ ಆಳಕ್ಕಿಳಿದ ಛಲವು ತುಂಬಾ ಕಾಡಿತ್ತು. ಕಡಲಲೆಗಳಾ ಸದ್ದಿನಲ್ಲಿ ವಾಸ್ತವದ ಕೊನೆಯಿರದ ಸಂಕೋಲೆಯಲಿ ಗೆದ್ದು ಬದುಕಿದೆ, […]
ಕಾವ್ಯಯಾನ
ಸ್ವರ್ಗಸ್ತ ಅಜ್ಜಿಯ ಬಯಕೆ ಸಿ.ಎಚ್.ಮಧುಕುಮಾರ ನಾನೂ ಸ್ವರ್ಗಕ್ಕೆ ಹೋಗಿದ್ದೆ. ಅಲ್ಲಿ ನನ್ನಜ್ಜಿ ಮಾತಿಗೆ ಸಿಕ್ಕರು. ಮೊದಲಿನಂತೆ ದುಂಡನೆಯ ದೇಹವಿಲ್ಲ, ಸೊರಗಿ ಸಣಕಲಾಗಿದ್ದರು. ಅದೂ ಸ್ವರ್ಗದ ನಿವಾಸಿಯಾಗಿ! ಆತುರದಿಂದಲೇ ಪ್ರಶ್ನಿಸಿದೆ: ಯಾಕಜ್ಜಿ? ಒಂದು ಕಡೆ ಕುಂತ್ರು ಕೂರದ ಜೀವ ನಿನ್ನದು ಯಾರು ಎಷ್ಟೇ ಗೊಣಗಿದರೂ ನಿನ್ನಿಷ್ಟದಂತೆಯೇ ಬದುಕಿದವಳು ನೀನು ಇಲ್ಲಾದರೂ ನೆಮ್ಮದಿ ಕಾಣಬಾರದೆ? ಅಜ್ಜಿ ಹೇಳಿತು: ನನಗಿಲ್ಲಿ ಏನೂ ಕೊರತೆಯಿಲ್ಲ. ಮಕ್ಕಳು ಮೊಮ್ಮಕ್ಕಳ ಗಿಜಿಗಿಜಿ ಸದ್ದು ವಾರಗೆಯವರೊಂದಿಗಿನ ಒಡನಾಟ ಮನೆಮಂದಿ, ನೆಂಟರಿಷ್ಟರಿಗೆ ಊಟಕ್ಕಿಕ್ಕಿ ಉಂಡವರು ತೃಪ್ತಿಯಾಗಿ ತೇಗಿದ ಸದ್ದು […]
ಕಾವ್ಯಯಾನ
ಸಿಗಲಾರದ ಅಳತೆ ವಸುಂದರಾ ಕದಲೂರು ನೀನು, ನಿನ್ನ ಕಣ್ಣು ಕೈ ಮನಸ್ಸು ನಾಲಗೆಗಳಲ್ಲಿ ಅಂದಾಜು ಪಟ್ಟಿ ಹಿಡಿದು ಅಳೆದೆ ಅಳೆದೆ ಅಳೆದೆ ಅಳೆಯುತ್ತಲೇ ಇದ್ದೀಯೆ.. ಸರಿ, ಅಳೆದುಕೋ ಹಾಗೆ ಅಳತೆಗೆ ದಕ್ಕುವುದಾದರೆ ನೀ ಅಳೆಯುವುದಾದರೂ ಏನನ್ನು! ಒಂದಷ್ಟು ಅಂದಾಜು ಸಿಗುವ ಗಾತ್ರ- ಗೋತ್ರ; ಉಬ್ಬುತಗ್ಗು ಅವಯವ- ಅವ್ವವ್ವಾ !! ಅಷ್ಟೇ. ಅಷ್ಟಕ್ಕೇ ನಿನಗೆ ದಕ್ಕಿಬಿಟ್ಟರೆ, ರೇ… ಅರೇ ಹೋಗು, ಅಳೆದುಕೋ ನಿನ್ನಾ ಅಳತೆಗೋಲು ಅಂದಾಜು ಶತಮಾನ ಹಳತು ಅದರ ಗೋಲು. ಮಾಡಿಕೊಂಡು ಬಂದದ್ದು ಬರೀ ರೋಲುಕಾಲು. ಅಳೆದೂ […]
ಕಾವ್ಯಯಾನ
ಮನದ ಮಾಮರ ಸುವರ್ಣ ವೆಂಕಟೇಶ್ ಮನದ ಮಾಮರಕ್ಕೆ ಮದ ಮತ್ಸರದ ಕಟ್ಟೆ ಕಟ್ಟಿ ಸ್ವಾರ್ಥದ ಜಲವ ಹರಿಸಿ ಬೇರು ಪಸರಿಸಿ ನೇರಳಾಗಿ ನಿಲ್ಲು ಎಂದೊಡನೆ ಎಂತಯ್ಯಾ!! ಮೋಹದ ಕಿರಣವ ತಾಡಿಸಿ ಬೆಂಕಿಯ ಮಳೆ ಸುರಿಸಿ ಮರಳುಗಾಡಿನಲ್ಲಿ ನೆಡಸಿ ಹಚ್ಚ ಹಸಿರಿನ ತರು ಲತೆ ಹೊತ್ತು ಎದ್ದು ನಿಲ್ಲಂದರೆ ಎಂತಯ್ಯಾ!! ಭಾವ ಇಲ್ಲದ ಭಕುತಿ ತೋರಿಸಿ ಅಹಂಕಾರದ ತೊಗಟೆ ಊಡಿಸಿ ಬಿಸಿಲಿನಿಂದ ಬಲೆಯ ಹೆಣೆದು ವಿಷ ಬೀಜವ ಬಿತ್ತಿ ಅಮೃತದ ಸಿಹಿ ಬಯಸಿದೋಡನೆ ಎಂತಯ್ಯಾ!! *********
ಕಾವ್ಯಯಾನ
ಟಂಕಾ ರೇಖಾ ವಿ.ಕಂಪ್ಲಿ ೧ . ಲಲಿತ ರಾಗ ಕಲಿತೆನು ಈಗ ನಿನ್ನ ಜೊತೆಗೆ ಭಾವ ತುಂಬಿ ಕೊಡುವ ಪ್ರೇಮ ಸುಧೆಯೊಳಗೆ…… ೨. ನಿನಗೆ ಬೊಜ್ಜು ಮೂರ್ನಾಲ್ಕು ಗೊಜ್ಜನು ತಿಂದೆ ಏತಕೆ ಆ್ಯಸಿಡಿಟಿ ಕಾರಣ ಹಾಳಾಯಿತು ಹೊಟ್ಟೆ……. ೩. ಯಾಕೆ ಹುಡುಗ ತಂಟೆ ಮಾಡುತಿಯಾ ಒಂಟಿತನಕೆ ಭಂಗ ಮಾಡಬೇಡ ಬಿಟ್ಟು ಹೋಗ ಬೇಡ……… ೪. ನೀ ಕೊಟ್ಟ ಪೆಟ್ಟು ಮರಿಲಿಲ್ಲ ಗುರು ಆಧಾರವಾದೆ ನನ್ನ ಜೀವನದ ಬಂಡಿ ಸಾಗಿಸಲು….. ********* ರೇಖಾ ವಿ ಕಂಪ್ಲಿ
ಕಾವ್ಯಯಾನ
ತಿಪ್ಪೆಗುಂಡಿಯಲ್ಲಿ ಮಗು ಫಾಲ್ಗುಣ ಗೌಡ ಅಚವೆ ಅಲ್ಲಿ ಮುರ್ಕಿಯಲ್ಲಿರುವತಿಪ್ಪೆಗುಂಡಿಯಲ್ಲಿ ಎಸೆದು ಹೋಗಿದ್ದಾಳೆಇದೀಗ ಎಂಬಂತೆ ಒಂದು ಮಗು. ನವೆಂಬರ್ ಬೆಳಗಿನ ಚುಮು ಚುಮುಚಳಿಯಲ್ಲಿ ಅಮ್ಮನ ಮಡಿಲಲ್ಲಿರಬೇಕಾದಂತೆಅಲ್ಲೇ ಗುಲ್ ಮೋಹರ್ ಮರಗಳಲ್ಲಿಹೊಡೆದು ಕೂಡ್ರಿಸಿದಂತೆಬೆಳ್ಳಕ್ಕಿಗಳು ಸಣ್ಣಗೆ ಮುಸುಗುತ್ತಿವೆ. ಗಸ್ತು ತಿರುಗುವ ಇರುವೆಗಳುಯಾರನ್ನೋ ಕರೆತರಲು ಹೊರಟಂತೆಎಲ್ಲಿಗೋ ಪಯಣ ಹೊರಟಿವೆ. ತುಸು ತಡವಾಗಿ ವಾಕಿಂಗ್ ಹೊರಟವರುಮಂಕಿ ಕ್ಯಾಪ್ ಬಿಟ್ಟು ಬಂದವರಂತೆತಡವರಿಸುತ್ತ ಎದೆಗೆ ಕೈ ಕಟ್ಟಿಕೊಂಡುಹೊರಡುವ ಸನ್ನಾಹದಲ್ಲಿಅವರದೇ ರಾತ್ರಿಯಹಳಸಿದ ಕನಸುಗಳ ಜೊತೆಗೆ. ಹಾಸಿಗೆ ಮಡಚಿಟ್ಟು ಆಗಸಮುಖ ತೊಳೆದು ಕೊಳ್ಳುತ್ತಿದೆಮೋಡಗಳ ಮರೆಯಲ್ಲಿಬೆಳಗಿನ ಕೆಲಸಕ್ಕೆ ತಡವಾಯಿತೆಂಬರಾತ್ರಿ ನರಳಿಕೆಯ ಮುಖ […]