ಕಾವ್ಯಯಾನ

ಸ್ವರ್ಗಸ್ತ ಅಜ್ಜಿಯ ಬಯಕೆ

Pin by ABU SUFIAN on BLACK & WITH | Female portrait, Portrait ...

ಸಿ.ಎಚ್.ಮಧುಕುಮಾರ

ನಾನೂ ಸ್ವರ್ಗಕ್ಕೆ ಹೋಗಿದ್ದೆ.
ಅಲ್ಲಿ ನನ್ನಜ್ಜಿ ಮಾತಿಗೆ ಸಿಕ್ಕರು.
ಮೊದಲಿನಂತೆ ದುಂಡನೆಯ ದೇಹವಿಲ್ಲ,
ಸೊರಗಿ ಸಣಕಲಾಗಿದ್ದರು.
ಅದೂ ಸ್ವರ್ಗದ ನಿವಾಸಿಯಾಗಿ!

ಆತುರದಿಂದಲೇ ಪ್ರಶ್ನಿಸಿದೆ: ಯಾಕಜ್ಜಿ?
ಒಂದು ಕಡೆ ಕುಂತ್ರು ಕೂರದ ಜೀವ ನಿನ್ನದು
ಯಾರು ಎಷ್ಟೇ ಗೊಣಗಿದರೂ
ನಿನ್ನಿಷ್ಟದಂತೆಯೇ ಬದುಕಿದವಳು ನೀನು
ಇಲ್ಲಾದರೂ ನೆಮ್ಮದಿ ಕಾಣಬಾರದೆ?

ಅಜ್ಜಿ ಹೇಳಿತು: ನನಗಿಲ್ಲಿ ಏನೂ ಕೊರತೆಯಿಲ್ಲ.
ಮಕ್ಕಳು ಮೊಮ್ಮಕ್ಕಳ ಗಿಜಿಗಿಜಿ ಸದ್ದು
ವಾರಗೆಯವರೊಂದಿಗಿನ ಒಡನಾಟ
ಮನೆಮಂದಿ, ನೆಂಟರಿಷ್ಟರಿಗೆ ಊಟಕ್ಕಿಕ್ಕಿ
ಉಂಡವರು ತೃಪ್ತಿಯಾಗಿ ತೇಗಿದ ಸದ್ದು
ನನಗಿಲ್ಲಿ ಕೇಳುತ್ತಿಲ್ಲ!
ಮತ್ತೆ ನನ್ನನ್ನು ನಿನ್ನೊಡನೆ
ದಿನದ ಮಟ್ಟಿಗಾದರೂ ಕರೆದೊಯ್ಯುವೆಯ?

*************

2 thoughts on “ಕಾವ್ಯಯಾನ

Leave a Reply

Back To Top