ಮನದ ಮಾಮರ
ಸುವರ್ಣ ವೆಂಕಟೇಶ್
ಮನದ ಮಾಮರಕ್ಕೆ
ಮದ ಮತ್ಸರದ ಕಟ್ಟೆ ಕಟ್ಟಿ
ಸ್ವಾರ್ಥದ ಜಲವ ಹರಿಸಿ
ಬೇರು ಪಸರಿಸಿ ನೇರಳಾಗಿ
ನಿಲ್ಲು ಎಂದೊಡನೆ ಎಂತಯ್ಯಾ!!
ಮೋಹದ ಕಿರಣವ ತಾಡಿಸಿ
ಬೆಂಕಿಯ ಮಳೆ ಸುರಿಸಿ
ಮರಳುಗಾಡಿನಲ್ಲಿ ನೆಡಸಿ
ಹಚ್ಚ ಹಸಿರಿನ ತರು ಲತೆ ಹೊತ್ತು
ಎದ್ದು ನಿಲ್ಲಂದರೆ ಎಂತಯ್ಯಾ!!
ಭಾವ ಇಲ್ಲದ ಭಕುತಿ ತೋರಿಸಿ
ಅಹಂಕಾರದ ತೊಗಟೆ ಊಡಿಸಿ
ಬಿಸಿಲಿನಿಂದ ಬಲೆಯ ಹೆಣೆದು
ವಿಷ ಬೀಜವ ಬಿತ್ತಿ ಅಮೃತದ ಸಿಹಿ
ಬಯಸಿದೋಡನೆ ಎಂತಯ್ಯಾ!!
*********
ತುಂಬಾ ಚೆನ್ನಾಗಿದೆ ಪದಗಳ ಬಳಕೆ ಅದ್ಬುತವಾಗಿವೆ