Category: ಕಾವ್ಯಯಾನ

ಕಾವ್ಯಯಾನ

ವಿನೋದಿ ಗಜಲ್-ಬಾಗೇಪಲ್ಲಿ

ಕಾವ್ಯ ಸಂಗಾತಿ ವಿನೋದಿ ಗಜಲ್ ಬಾಗೇಪಲ್ಲಿ ಭೀಮನ ಅಮವಾಸ್ಯೆ ಇಂದು ಬಯವಾಗುತಿದೆ.ಪತ್ನಿ ವರಲಕ್ಷ್ಮಿ warಲಕ್ಷ್ಮಿ ಆಗವ ಸಂಭವವಿದೆ. ನಿನ್ನೆ ಹುಡುಕಾಡಿದರೆ ಸಿಗದೆ ಹೋಯಿತು ಹೇಗೋಇಂದು ಬೆಳಗಿನಿಂದಲೇ ಏಕೋ ಲಟ್ಟಣಿಗೆ ಉರುಳಾಡುತಿದೆ ನಮ್ಮೂರ ರೈತ ಬರಲಿರುವನಂತೆ ಆಕಸ್ಮಿಕವಾಗಿ ಮನೆಗೆಅದೇಕೋ ಮೈ ಕೊಡವಿ ಹಿಟ್ಟುದೊಣ್ಣೆ ಕುಣಿಯುತಿದೆ. ಚಂದವಿಹುದೆನುತ ಕೊಂಡೆ ಕಟ್ಟಿಗೆಯ ಮೊಗಚೊ ಕೈ ಅಂದುವಿಶ್ವಾಸ ಘಾತಕನಂತೆ ಆಕ್ರಮಣಕೆ ಇಂದು ಸಜ್ಜಾಗುತಿದೆ ಕೃಷ್ಣಾ!ದ್ರೌಪದಿ ಹೆಸರು ರಾಜ್ಯದಿ ವಿಜೃಂಭಿಸಿದೆಹೆಂಡತೀ ನನ್ನ ಪ್ರಾಣ ಹಿಂಡತೀ ನಿಜವಾಗಿಸುತಿದೆ.

ಕಾವ್ಯ ಸಂಗಾತಿ ತೀರವಿರದ ಕಡಲು ಅರುಣಾ ನರೇಂದ್ರ ಆಡದೇ ಉಳಿದ ಮಾತುಗಳು ನಿನ್ನ ನೆನಪಲ್ಲೇಕಳೆದು ಹೋಗುತ್ತೇನೆಸಾಗರವ ಸೇರಿದಹನಿಯಂತೆನಿನ್ನೊಳಗೆಒಂದಾಗಿ ಬಿಡುತ್ತೇನೆ ನನ್ನ ಕಾವ್ಯದಲ್ಲಿಓದುಗರ ಮನಸೂರೆಗೊಂಡುವಿಜೃಂಭಿಸುವಪದಗಳುಅದೇಕೊ ಕಾಣೆಅವನ ಹಿಂದೆ ಹಿಂದೆಅಲೆಯುತ್ತಿವೆನೆಲೆ ಇಲ್ಲವೆಂಬಂತೆ ದಿನ ರಾತ್ರಿ ನಾನುನಿದ್ರಿಸುವುದಿಲ್ಲನಿನ್ನ ಕುರಿತಾಗಿಭಗವಂತನೊಡನೆಮಾತಾಡುತ್ತಿರುತ್ತೇನೆಧ್ಯಾನಸ್ಥ ಸ್ಥಿತಿಯಲ್ಲಿ ಆಡದೆ ಉಳಿದಒಡಲ ಮಾತುಬೋರಾಡಿ ಅಳುತ್ತಿದೆಕಣ್ಣೀರಲ್ಲೇ ಮುಳುಗಿ ಮಿಂದುಹಸಿಯಾಗುವುದರಲ್ಲೇನಾಲಿಗೆ ಖುಷಿ ಕಾಣುತ್ತಿದೆ ಅರುಣಾ ನರೇಂದ್ರ

ನಡೀ….!!-ದೇವರಾಜ್ ಹುಣಸಿಕಟ್ಟಿ ಕವಿತೆ

ಕಾವ್ಯ ಸಂಗಾತಿ ನಡೀ….!!- ದೇವರಾಜ್ ಹುಣಸಿಕಟ್ಟಿ ಕವಿತೆ ನಡೀ ಇಡೀ ಜೀವನವನ್ನೇಅನಾಮತ್ತ ಎತ್ತಿಪ್ರೀತಿಯಾಗಿಸಿ ಬಿಡುವ…!ಬದುಕಿನ ಪ್ರತಿ ತಿರುವಿಗೆಸಿಗುವ ದುಃಖವನ್ನೇಸಿಂಗರಿಸಿ ಬಿಡುವ….!ದಾರಿಯ ಮುಳ್ಳನ್ನೇ ಎತ್ತಿಹೂವಾಗಿಸಿ ಬಿಡುವ….!! ನಡೀ ಶಿಕ್ಷೆಯೋ ವರವೋಅವನ ಭಿಕ್ಷೆಯೆಂದುನಂಬಿ ನಡೆದು ಬಿಡುವ..! ಭೂಮಿ ಮ್ಯಾಲ ಬಿದ್ದಮಳಿ ಹನಿ ಎಲ್ಲಮುತ್ತಾಗಬೇಕಿಲ್ಲ ಗೆಳತಿನಡೀ ಮೊಳೆಯೋ ಬೀಜಕ್ಕಜೀವ ಜಲವಾಗಿ ಬಿಡುವ…!! ನೆರೆತ ಗಡ್ಡ ಮುಪ್ಪಿನಕುರುಹಲ್ಲ ಈಗೀಗ ಫ್ಯಾಷನ್ಅಂತ ಗೊತ್ತಿಲ್ಲ ಮರಳ…..!!ನಡೀ ಬಿಳಿಯ ಕೂದಲಿಗೆ ಡೈಹಾಕಬೇಕಿಲ್ಲ ಹೃದಯದಿಂದಹರೆಯಕ್ಕೆ ಮರಳಿ ಬಿಡುವ…!! ಕರ್ತಾರನ ಕಮ್ಮಟವಂತೆಬದುಕು…!ಏನಾದರೂ ಒಂದುಮಾಡಲಿ ಬಿಡುನಡೀ ಅವ್ಹಾ ಬಯಸಿದಂತೆಇದ್ದು ಬಿಡುವ….!! ನನ್ನನ್ನೇ […]

ದಕ್ಕಿಸಿಕೊಂಡಂತೆ…

ಕಾವ್ಯ ಸಂಗಾತಿ ದಕ್ಕಿಸಿಕೊಂಡಂತೆ… ವಸುಂಧರಾ ಕದಲೂರು ಒಮ್ಮೆ ತಾಕಿಸಿಕೊಂಡ ಮೇಲೆಮುರಳಿ ಕೊರಳಾಗಿ, ವೀಣೆಇಂಪಾಗಿ ಮೃದಂಗ ಮೃದುವಾಗಿಪ್ರತಿ ಚಲನೆಯೂ ನಾದವಾಯಿತು ಒಮ್ಮೆ ಸೋಕಿಸಿಕೊಂಡ ಮೇಲೆಪರಾಗ ಹೂವಾಗಿ; ಹೂ ಹಣ್ಣಾಗಿಮರವಾಗಿ ಬೇರಾಗಿ, ಬೇರು ತಾಆಳದಲಿ ಮರೆಯಾಗಿ ಉಸಿರಾಯಿತು ಒಮ್ಮೆ ನಿನ್ನ ಎದೆಗೆ ಇಳಿಸಿಕೊಂಡಮೇಲೆ ಪ್ರತಿ ಮಿಡಿತ ಹಾಡಾಗಿ,ಸೊಗಸು ಕನಸಾಯಿತು; ಸಾಗದನನಸಾಗದ ಕನಸುಗಳು ನೆನಪಿಗೆಬಂದು ಸುಖಾಸುಮ್ಮನೆ ಬೇಸರಹೊತ್ತು ತಂದಿತು… ದಕ್ಕಿಸಿಕೊಂಡಂತೆ ದಿಕ್ಕುಗಳೂದಕ್ಕುವವು

ಗಜಲ್-ಎ . ಹೇಮಗಂಗಾ

ಕಾವ್ಯಸಂಗಾತಿ ಎ . ಹೇಮಗಂಗಾರಬರ ಗಜಲ್ ಭಾವಬಳ್ಳಿಗೆ ನೇಹದ ಜೀವಜಲ ಹನಿಸಿದ ನೆನಪಿಂದ ನೀ ಮರೆಯಾದೆಬಾಳ ಇರುಳಿಗೆ ನಲ್ಮೆ ಬೆಳಕನು ಹರಿಸಿದ ನೆನಪಿಂದ ನೀ ಮರೆಯಾದೆ ಭೂತದಾ ಭೂತ ಬೇತಾಳದಂತೆ ಹಗಲಿರುಳೂ ಕಾಡುತ್ತಲೇ ಇತ್ತುಕಣ್ಸನ್ನೆಯಲೇ ಕೆಂಪೇರಿಸಿ ನಕ್ಕು ನಗಿಸಿದ ನೆನಪಿಂದ ನೀ ಮರೆಯಾದೆ ನೀನಿಲ್ಲದ ನನ್ನಿರುವಿಕೆಗೆ ಅರ್ಥವೇ ಇಲ್ಲವೆಂಬ ಭ್ರಮೆ ಕಾಡಿತ್ತೇಕೆ ?ಕೊರಗಿ ನಲುಗಿದವಳ ಅಪ್ಪಿ ಸಂತೈಸಿದ ನೆನಪಿಂದ ನೀ ಮರೆಯಾದೆ ಸವೆಸಿದ ಮುಳ್ಳು ಹಾದಿಯ ಇನ್ನೆಂದೂ ಹಿಂತಿರುಗಿ ನೋಡಲಾರೆಸಿಹಿ ಮುತ್ತನಿತ್ತು ಕಹಿಯೆಲ್ಲ ಮರೆಸಿದ ನೆನಪಿಂದ ನೀ […]

Back To Top