ಕಾವ್ಯ ಸಂಗಾತಿ
ಗಜಲ್
ದೇವರಾಜ್ ಹುಣಸಿಕಟ್ಟಿ
ಅದೆಷ್ಟು ಸಂಕಟದಲ್ಲಿ ಬೇಯುತ್ತಾರೆ ಕೆಲವರು
ಮತ್ತೆ ಮತ್ತೆ ಈರ್ಷೆಯಲ್ಲಿ ನರಳುತ್ತಾರೆ ಕೆಲವರು
ಮದ್ದಿಲ್ಲದ ಕಿಚ್ಚಲಿ ಸುಟ್ಟು ಕೊಳ್ಳುವುದು ತರವೇ..?
ಹಣೆಬರಹಕ್ಕಿಂತ ಹೆಚ್ಚು ಪಡೆದವರಿಲ್ಲ ಮರೆಯುತ್ತಾರೆ ಕೆಲವರು
ನೆರಳೇ ಕಾಣದ ಹೊತ್ತು ಕೊಡೆ ಹಿಡಿದರೂ ಸರಿ
ಹೊತ್ತಿಲ್ಲದ ಹೊತ್ತಲಿ ಕೊಡೆ ಹಿಡಿಯುವುದನ್ನೇ ಮಾಡುತ್ತಾರೆ ಕೆಲವರು
ಇದ್ದಾಗ ನೆಂಟಸ್ಥಿಕೆಗೇನು ಕೊರತೆಯೆ ಗೆಳೆಯ
ಸಂಪತ್ತು ಕರಗಿಸಿ ದೂರ ಸರಿಯುತ್ತಾರೆ ಕೆಲವರು
ದೇವಾ ಮೋಸಕ್ಕೇನು ಮನುಷ್ಯನೀಡೆ..?
ಪ್ರೀತಿಯಲಿ ಹುಳಿ ಹಿಂಡುತ್ತಾರೆ ಕೆಲವರು