ಕಾವ್ಯ ಸಂಗಾತಿ
ವಿನೋದಿ ಗಜಲ್
ಬಾಗೇಪಲ್ಲಿ
ಭೀಮನ ಅಮವಾಸ್ಯೆ ಇಂದು ಬಯವಾಗುತಿದೆ.
ಪತ್ನಿ ವರಲಕ್ಷ್ಮಿ warಲಕ್ಷ್ಮಿ ಆಗವ ಸಂಭವವಿದೆ.
ನಿನ್ನೆ ಹುಡುಕಾಡಿದರೆ ಸಿಗದೆ ಹೋಯಿತು ಹೇಗೋ
ಇಂದು ಬೆಳಗಿನಿಂದಲೇ ಏಕೋ ಲಟ್ಟಣಿಗೆ ಉರುಳಾಡುತಿದೆ
ನಮ್ಮೂರ ರೈತ ಬರಲಿರುವನಂತೆ ಆಕಸ್ಮಿಕವಾಗಿ ಮನೆಗೆ
ಅದೇಕೋ ಮೈ ಕೊಡವಿ ಹಿಟ್ಟುದೊಣ್ಣೆ ಕುಣಿಯುತಿದೆ.
ಚಂದವಿಹುದೆನುತ ಕೊಂಡೆ ಕಟ್ಟಿಗೆಯ ಮೊಗಚೊ ಕೈ ಅಂದು
ವಿಶ್ವಾಸ ಘಾತಕನಂತೆ ಆಕ್ರಮಣಕೆ ಇಂದು ಸಜ್ಜಾಗುತಿದೆ
ಕೃಷ್ಣಾ!ದ್ರೌಪದಿ ಹೆಸರು ರಾಜ್ಯದಿ ವಿಜೃಂಭಿಸಿದೆ
ಹೆಂಡತೀ ನನ್ನ ಪ್ರಾಣ ಹಿಂಡತೀ ನಿಜವಾಗಿಸುತಿದೆ.