
ಕಾವ್ಯ ಸಂಗಾತಿ
ತೀರವಿರದ ಕಡಲು
ಅರುಣಾ ನರೇಂದ್ರ
ಆಡದೇ ಉಳಿದ ಮಾತುಗಳು

ನಿನ್ನ ನೆನಪಲ್ಲೇ
ಕಳೆದು ಹೋಗುತ್ತೇನೆ
ಸಾಗರವ ಸೇರಿದ
ಹನಿಯಂತೆ
ನಿನ್ನೊಳಗೆ
ಒಂದಾಗಿ ಬಿಡುತ್ತೇನೆ

ನನ್ನ ಕಾವ್ಯದಲ್ಲಿ
ಓದುಗರ ಮನ
ಸೂರೆಗೊಂಡು
ವಿಜೃಂಭಿಸುವ
ಪದಗಳು
ಅದೇಕೊ ಕಾಣೆ
ಅವನ ಹಿಂದೆ ಹಿಂದೆ
ಅಲೆಯುತ್ತಿವೆ
ನೆಲೆ ಇಲ್ಲವೆಂಬಂತೆ

ದಿನ ರಾತ್ರಿ ನಾನು
ನಿದ್ರಿಸುವುದಿಲ್ಲ
ನಿನ್ನ ಕುರಿತಾಗಿ
ಭಗವಂತನೊಡನೆ
ಮಾತಾಡುತ್ತಿರುತ್ತೇನೆ
ಧ್ಯಾನಸ್ಥ ಸ್ಥಿತಿಯಲ್ಲಿ

ಆಡದೆ ಉಳಿದ
ಒಡಲ ಮಾತು
ಬೋರಾಡಿ ಅಳುತ್ತಿದೆ
ಕಣ್ಣೀರಲ್ಲೇ ಮುಳುಗಿ ಮಿಂದು
ಹಸಿಯಾಗುವುದರಲ್ಲೇ
ನಾಲಿಗೆ ಖುಷಿ ಕಾಣುತ್ತಿದೆ

ಅರುಣಾ ನರೇಂದ್ರ
