ದಕ್ಕಿಸಿಕೊಂಡಂತೆ…

ಕಾವ್ಯ ಸಂಗಾತಿ

ದಕ್ಕಿಸಿಕೊಂಡಂತೆ…

ವಸುಂಧರಾ ಕದಲೂರು

ಒಮ್ಮೆ ತಾಕಿಸಿಕೊಂಡ ಮೇಲೆ
ಮುರಳಿ ಕೊರಳಾಗಿ, ವೀಣೆ
ಇಂಪಾಗಿ ಮೃದಂಗ ಮೃದುವಾಗಿ
ಪ್ರತಿ ಚಲನೆಯೂ ನಾದವಾಯಿತು

ಒಮ್ಮೆ ಸೋಕಿಸಿಕೊಂಡ ಮೇಲೆ
ಪರಾಗ ಹೂವಾಗಿ; ಹೂ ಹಣ್ಣಾಗಿ
ಮರವಾಗಿ ಬೇರಾಗಿ, ಬೇರು ತಾ
ಆಳದಲಿ ಮರೆಯಾಗಿ ಉಸಿರಾಯಿತು

ಒಮ್ಮೆ ನಿನ್ನ ಎದೆಗೆ ಇಳಿಸಿಕೊಂಡ
ಮೇಲೆ ಪ್ರತಿ ಮಿಡಿತ ಹಾಡಾಗಿ,
ಸೊಗಸು ಕನಸಾಯಿತು; ಸಾಗದ
ನನಸಾಗದ ಕನಸುಗಳು ನೆನಪಿಗೆ
ಬಂದು ಸುಖಾಸುಮ್ಮನೆ ಬೇಸರ
ಹೊತ್ತು ತಂದಿತು…

ದಕ್ಕಿಸಿಕೊಂಡಂತೆ ದಿಕ್ಕುಗಳೂ
ದಕ್ಕುವವು


Leave a Reply

Back To Top