ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಪ್ರೀತಿ ತೇರು

ಕಸ್ತೂರಿ ಡಿ ಪತ್ತಾರ

ಒಂದು ಸುಂದರ ಸಂಜೆ
ನಿನಗಾಗಿ ನಾನು ಕಾದಿದ್ದೆ/

ನೋಡು ನೋಡುತಲೆ
ಕಾರ್ಮೊಡ ಕರಗಿ ಚಂದಿರ
ಹೊಳೆದಂತೆ ನಿನ್ನ ಕಂಡೆ/

ಒಬ್ಬರನ್ನೊಬ್ಬರು ಕಣ್ದಣಿವತನಕ
ನೋಡಿದೆವು, ಹಿಗ್ಗಿನಲಿ ಹಿಗ್ಗಿ
ಹಿಗ್ಗಿ ಸಗ್ಗವನೆ ಕಂಡೆವು/

ಕಣ್ಣು ಕಣ್ಣುಗಳಲಿ ಮಿಂಚಿನ
ನಗೆಯೊಂದು ಮಿಂಚುತಲಿತ್ತು,
ಕಣ್ಣ ಕೊಳದೊಳಗೆ ನಮ್ಮಿಬ್ಬರ
ಪ್ರತಿಬಿಂಬ ಕಾಣುತಲಿತ್ತು/

ಜನಜಂಗುಳಿಯಲಿ ಜಗವ
ಮರೆತು ಒಲವ ಜಾತ್ರೆಯಲಿ
ಸಂಚರಿಸಿದೆವು, ಕೈಕೈ ಹಿಡಿದು ಪ್ರೀತಿ ತೇರನೆಳೆದೆವು/


About The Author

1 thought on “ಪ್ರೀತಿ ತೇರು-ಕಸ್ತೂರಿ ಡಿ ಪತ್ತಾರ”

Leave a Reply

You cannot copy content of this page

Scroll to Top