Category: ಕಾವ್ಯಯಾನ

ಕಾವ್ಯಯಾನ

ಶಂಕರಾನಂದ ಹೆಬ್ಬಾಳ ಕವಿತೆ-ಅರ್ಥವಿಹಿನ ಬಾಳು

ಕಾವ್ಯ ಸಂಗಾತಿ

ಅರ್ಥವಿಹಿನ ಬಾಳು

ಶಂಕರಾನಂದ ಹೆಬ್ಬಾಳ

ಇರುಳುಗಣ್ಣಿಗೊಂದು ಕವಿತೆ….!!

ಕಾವ್ಯ ಸಂಗಾತಿ

ಇರುಳುಗಣ್ಣಿಗೊಂದು ಕವಿತೆ….!!

ದೇವರಾಜ್ ಹುಣಸಿಕಟ್ಟಿ

ನಾಗರೇಖಾ ಗಾಂವಕರಕವಿತೆ- ಬೇಕಿತ್ತೇ ನಿನಗೆ ಈ ಪ್ರೀತಿ?

ಕಾಡ ಮೂಲೆಮೂಲೆಯಲ್ಲೂ
ಆತುಕೂತು
ಮೋಹಿಸಿದೆವು.
ಮೋಹಮಸೆಯುವ ಲಲ್ಲೆಗರೆದೆವು.
ಕದ್ದುಕೇಳಿಸಿಕೊಂಡ
ಜೀರುಂಡೆಗಳದ್ದು
ಈಗ ಅದೇ ರಾಗ ಅದೇ ಹಾಡು
 
 
ಅವನ ಹೊಂದಲಾಗದೇ
ಪರಿತಪಿಸುತ್ತಾ ಅತ್ತೆ,
‘ಆಗಬಾರದಿತ್ತೇ ನಾವಿಬ್ಬರೂ
ಜೊತೆಜೊತೆ’
ನನ್ನ ಮುಂಗುರುಳ ನೇವರಿಸಿ
ಅವನೆಂದ, “ಆಗಿದ್ದರೆ ಜೊತೆ
ಇದೂ ಕೂಡಾ ಆಗುತ್ತಿತ್ತು
ಹಳಸಿದ ಕಥೆ,
ಅದೇ ಸಂತಾನಗಾಥೆ,
 
 
 
ಚುಟುಕ ಬರೆಯಲು
ಹೊರಟೆ
ಕುಟುಕುವ ಅವನ ಕವಿತೆಯ
ನೆನಪಾಗಿ
ಪಟಾಕಿ ಹಾರಿಸಿ
ಹೊರಬಂದೆ.
ಈಗಂತೂ ಅವನು ಚಟಾಕಿ
ಹಾರಿಸುವುದರಲ್ಲೇ ಮಗ್ನ.
 
 
 
ಅಂದು ಅವನ ಎದೆಗೂದಲಲ್ಲಿ
ಬೆರಳಾಡಿಸುತ್ತಾ
ನಾನೆಂದೆ” ನಿಜವೇನೋ ಈ ರೀತಿ?
ಮತ್ತದರ ಪರಿಮಳದ ರೀತಿ?
 
ಇಂದು ತುರುಬಿಗೆ ಕೈ ಇಟ್ಟು
ಅವನೆಂದ” ಬೇಕಿತ್ತೇ ನಿನಗೆ ಈ ಪ್ರೀತಿ?
ಬದುಕಗೊಡದ, ಸಾಯಬಿಡದ
ಉಸಿರಗಟ್ಪಿಸೋ ರೀತಿ?
ಬಿಟ್ಟು ನಡಿ ನನ್ನ ಏತಿ ಪ್ರೇತಿ?

ನಾಗರೇಖಾ ಗಾಂವಕರ

ಉಷಾಜ್ಯೋತಿ ಮಾನ್ವಿರವರ ಹೊಸ ಗಜಲ್

ನೋಟ ಬೆರೆಯಲು ಎದೆಗೆ ಹತ್ತಿರ ಬಂದೆಯಲ್ಲ ನೀನು
ಮಾಟ ಮಾಡಿ ಒಲವ ಗುಡಿಯಲ್ಲಿ ನಿಂದೆಯಲ್ಲ ನೀನು

ಪ್ರಣಯ ಪೂಜೆಗೆ ಮೌನವ ಮಂತ್ರವಾಗಿಸುತ ಉಲಿದೆ
ಮೂಕ ಪ್ರೀತಿಗೆ ಮಾತು ಕಲಿಸುತ ನಲಿದೆಯಲ್ಲ ನೀನು

ಮಂದಹಾಸದಿ ಮೊಗವರಳಿಸಿ ತುಂಟನಗೆಯ ಬೀರಿದೆ
ಶೋಕ ನೀಗಿಸಿ ಮನಕೆ ಸಾಂತ್ವನ ನೀಡಿದೆಯಲ್ಲ ನೀನು

ಮುದದಿ ನುಡಿಯಲು ಬಿರಿದಿವೆ ಮಮತೆಯ ಮಲ್ಲಿಗೆ
ಎದೆಗೂಡಲಿ ಅನುರಾಗದೀಪ ಬೆಳಗಿದೆಯಲ್ಲ ನೀನು

ಉಷೆಯ ಬಾಳಲಿ ಭಾವ ಬೆಸುಗೆಯಾಗಿ ಬಂದೆ ಇಂದು
ಅಭಯ ನೀಡುತ ಪ್ರೀತಿ ತೋರುತ ನಡೆದೆಯ

Back To Top