ಕಾವ್ಯ ಸಂಗಾತಿ
ಅಮ್ಮನ ಮಡಿಲು
ಡಾ ದಾನಮ್ಮ ಝಳಕಿ
ಕಣ್ಣು ಬಿಟ್ಟಾಗ
ಕಂದನ ಸ್ವರ್ಗ ಅಮ್ಮನ ಮಡಿಲು
ಸುಖ ಸಂತೋಷವಾದಾಗ
ಬಯಸುವುದು ಅಮ್ಮನ ಮಡಿಲು
ದುಖಃವಾಗಿ ಮನನೊಂದಾಗ
ಆಸರೆಯಾಗುವುದು ಅಮ್ಮನ ಮಡಿಲು
ಜಗತ್ತನ್ನೇ ಗೆಲ್ಲಬೇಕೆಂಬ
ಛಲ ಮೂಡಿಸುವುದು ಅಮ್ಮನ ಮಡಿಲು
ಸಾಧನೆ ಮಾಡಬೇಕೆಂದಾಗ
ಬಲ ನೀಡುವುದು ಅಮ್ಮನ ಮಡಿಲು
ತಪ್ಪುಗಳನ್ನು ವಿರೋಧಿಸುವ
ಶಕ್ತಿ ನೀಡುವುದು ಅಮ್ಮನ ಮಡಿಲು
ನೈತಿಕ ಮೌಲ್ಯಗಳನ್ನು
ಪೋಷಿಸುವುದು ಅಮ್ಮನ ಮಡಿಲು
ಜಗತ್ತಿನ ಸ್ವರ್ಗ
ಅಡಗಿದೆ ಅಮ್ಮನ ಮಡಿಲಲಿ
Super danamma
ಅಮ್ಮನ ಮಡಿಲಲ್ಲಿ ಸ್ವಗ೯ಸುಖ