ಡಾ.ಡೋ ನಾ ವೆಂಕಟೇಶ ಕವಿತೆ-ಕಲಿ ನಲಿ

ಕಾವ್ಯ ಸಂಗಾತಿ

ಕಲಿ ನಲಿ

ಡಾ.ಡೋ ನಾ ವೆಂಕಟೇಶ

.

ಬೆಂಗಳೂರಿಗೆ ಬಂತು ಮಳೆ
ತುಂತುರು ನೀರ ಧಾರೆ
ಮನ ತುಂಬಿ
ಕೆರೆ ಕಟ್ಟೆ ತುಂಬಿ
ಮೇರೆ ಮೀರಿ
ಗಲ್ಲಿ ಗಲ್ಲಿಗಳಲ್ಲಿ ಮನೆ ಮನೆಗಳಲ್ಲಿ
ಆಯಿತು
ಆಸ್ಫೋಟ
ನಿಲ್ಲದ ಆಕ್ರೋಶ

ದೇವಿ ಪ್ರಕೃತಿಗೆ ಮಾಡಿದ
ವಿಕೃತಿ
ಕೆರೆಕಟ್ಟೆಗಳ ತಳ ಬಗೆದು, ಸಿಗಿದು ಆ ದೇವಿಯ
ಒಡಲಾಳ!
ಕಟ್ಟಿದೆ ನಿನ್ನ ದಾಹದ
ಮಜಲು
ಮಜಲು ಮಜಲಾಗಿ ನಿಂತದ್ದು, ನಿರಾಧಾರ ಮಹಲು
ಕುಸಿದಿದ್ದು ಕೊನೆಗೆ

ನಿನ್ನದೇ ದಾರಿಗೆ !

ಏನೆಂದು ಹೇಳಲಿ ಗೆಳೆಯಾ ತೀರದಾಸೆಗೆ
ಸಿಗದಾಯಿತು ಹಿಡಿ ನೀರು
ಮೇಲಿಂದ ರೌದ್ರಾವತಾರ
ಕೆಳಗಿಂದ ಕಲ್ಕಿಯವತಾರ

ಕಲಿತು ಕೋ ಚಿನ್ನ ಬದುಕು
ಬದುಕಲು ಬಿಡು
ಬಿಡು ನಿನ್ನ ಢಾಂಬಿಕ ತೆವಲು

ನಮಿಸು ನಿನ್ನ ತಾಯಿಗೆ
ಆ ಭೂ ಮಾತೆಗೆ
ಮಾಡದಿರು ಅಪಮಾನ
ಕ್ಷಮಯಾ ಧರಿತ್ರಿಗೆ

ಬದುಕು
ಬದುಕುವುವ ಕಲೆ
ಕಲಿ ನಲಿ


2 thoughts on “ಡಾ.ಡೋ ನಾ ವೆಂಕಟೇಶ ಕವಿತೆ-ಕಲಿ ನಲಿ

  1. “ಕವಿ ನಲಿ” ಕವಿತೆ ಓದಿ ನಾನು ತುಂಬಾ ಪ್ರಭಾವಿತನಾಗಿದ್ದೇನೆ. ಧನ್ಯವಾದಒಗಳು

Leave a Reply

Back To Top