Category: ಕಾವ್ಯಯಾನ

ಕಾವ್ಯಯಾನ

ಬರೀ ಮಾತಲ್ಲೇ ನಮ್ಮನ್ನು ಅಟ್ಟ ಹತ್ತಿಸಿ ಆಟ ನೋಡುತ್ತಿದ್ದಾರೆ ಜನ.
ಇರುಳು ಶಶಿಯ ನಗು ನೋಡಿಯೇ ಸಮಾಧಾನ ಪಡುತ್ತಿರುವ ನಾ ಬಡರೈತ

ಬರದ ಛಾಯೆಗೆ ಬುವಿ ಮೇಲೆ ಬಿರುಕಿನ ಚಿತ್ರ ಜೀವತಳೆದಿದೆ
ವರುಣ ದೇವನ ಕೃಪೆಯಿಂದ ಅವತರಿಸಬೇಕಿದೆ ಹನಿ ಮುತ್ತು

ಅಂಬಲಿಗೂ ಗತಿಯಿಲ್ಲದೆ ಅನ್ನದಾತನ ಮನೆಯಲ್ಲಿ ಹಸಿವು ಧಡಭಡಿಸಿದೆ
ಸ್ವಾಭಿಮಾನದ ಪಟಗೆಗಳು ಉಳ್ಳವರಲ್ಲಿ ಜೀತದಾಳಾಗಿ ದುಡಿಯುತಿವೆ

ಇಲ್ಲದವರಿಗೆ ಕೊಟ್ಟ ನೂರು ಭರವಸೆಗಳು ಹುಸಿಯಾಗಿ ಹೋದವು ಸುಳಿವಿಲ್ಲದೆ
ಅನ್ನದಾತನ ಮನೆಯಲ್ಲಿ ಅಗುಳನ್ನವೂ ಸಹ ಕೊಪ್ಪರಿಗೆ ಹೊನ್ನಾಗಿ ಕಾಣಿಸುತ್ತವೆ

ಎಂತಹ ಸಮಯವಿದು!!

ಕವಿತೆ ಎಂತಹ ಸಮಯವಿದು!! ಸಂಮ್ಮೋದ ವಾಡಪ್ಪಿ ಪ್ರೀತಿ ವಿಶ್ವಾಸ ಕೂಡಿಟ್ಟವರುಯಾವುದೋ ವಾರ್ಡಿನಲ್ಲಿ ಏಕಾಂಗಿಶ್ವಾಸಕ್ಕಾಗಿ ಎಲ್ಲ ಕಳೆದುಕೊಂಡರುಉಸಿರಿಗಾಗಿ ಕಳೆದು ಹೋದರು ಚೈತ್ರದ ಚಿಲುಮೆಯ ಕಾಲಎಲ್ಲವೂ ಚಿಗುರತಿರಲಿಂದುಬಾಡುತಿವೆ ಸಾವಿರ ಲಕ್ಷಮನೆಗಳಲಿ ರೋದನಗಳಿಂದು ಅವ ಹೋದ ಇವ ಬಂದಏನಾಯಿತು ಕೋವಿಡ್ಡಾ?ಅದೇ ಪ್ರಶ್ನೆ..‌ ಭಯಂಕರ ಉತ್ತರಸಮರವಿದು ಜಗವೆಲ್ಲ ತತ್ತರ ಹಣ ತೆತ್ತರು ಸಿಗದಲ್ಲಅಂದು ಗಿಡ ನೆಡದವಆಮ್ಲಜನಕ ಬೇಡುತಿಹಧಗಧಗಿಸುವ ಸೂರ್ಯ ನಗುತಿಹ ಸಮಯವಿದು ಕಳೆದು ಹೋಗಲಿಕಳೆದು ಹೋದ ನಗು ಮರಳಲಿಮರಳಿನಲಿ‌ ಓಯಾಸಿಸ್ ಸಿಗಲಿವೈರಾಣುವಿನ ಸಂಹಾರವಾಗಲಿ *************************************************

ಆಕಾಶದಾವರೆ

ಕವಿತೆ ಆಕಾಶದಾವರೆ ಲಕ್ಷ್ಮೀದೇವಿ ಪತ್ತಾರ ಆಕಾಶಗಂಗೆಯಲ್ಲಿಪ್ರತಿದಿನ ಬೆಳಗಿನ ಜಾವದಲ್ಲಿಅರಳುವದೊಂದು ಅಸದಳದ ತಾವರೆ ಹೂವು ಮುಂಜಾವಿನಲ್ಲಿ ಕೆಂದಾವರೆಮಧ್ಯಾಹ್ನ ನೀಲ್ದಾವರೆಮತ್ತೆ ಸಂಜೆ ಹೊನ್ನದಾವರೆಅಪರಿಮಿತ ಚೆಲುವಿನಅಪರೂಪದ ಹೂವು ಬಗೆ ಬಗೆ ಬಣ್ಣ ಧರಿಸುತಾಮುದಗೊಳಿಸುವ ತಾವರೆಹೊಂಗಿರಣದ ಸುಗಂಧವಎಲ್ಲೆಡೆ ಚೆಲ್ಲಿ ಚೈತನ್ಯ ಉಕ್ಕಿಸುವ ತಾವರೆ ಹೂವು ಯಾರು ಮುಟ್ಟದ ತಾವರೆಯಾರು ಮುಡಿಯದ ತಾವರೆಅರಳಿದರೆ ಭೂರಮೆಗೆ ಬೆಳಗು ಸೊಬಗು ಗೆಲುವು ತರುವ ತಾವರೆ ಹೂ ಜೀವಿಗಳ ಜೀವ ಜೀವನಬಾನಿಗೆ ಶೋಭೆ ಈ ಭಾನುನಮಗಾಗಿ ಹೂವಾಗಿ ಅರಳಿದ ದೇವರುಆದಿತ್ಯನೆಂಬೊ ಅವಿನಾಶಿ ತಾವರೆ ಹೂವು

ಯಾತನೆ

ಕವಿತೆ ಯಾತನೆ ಲಕ್ಷ್ಮೀ ಮಾನಸ ಚಿತಾಗಾರದ  ಚಿತ್ರಣ,ಮನದಲ್ಲಿ ಮರುಕಳಿಸಲು,ಎದೆಯಲ್ಲಿ ಬಿರುಗಾಳಿಬೀಸಿ,ತಾರೆಗಳ ಕಾಣುತಲಿವೆ ,ಬಣ್ಣ ಮಾಸಿದ ಪಕ್ಷಿಗಳು,ಕಿಟಕಿಗಳ ಚಿಕ್ಕ  ಸಂದಿನಲ್ಲಿ.., ಲೋಕದ  ತುಂಬೆಲ್ಲಾಪರದೆಗಳು,ಮಾಸಿದ  ಚಿತ್ತಾರಗಳು,ಮುಗಿಲು ಮುಟ್ಟುತ್ತಲಿವೆ ,ಚೀತ್ಕಾರಗಳು,ಮಂಜಿನ  ಮಹಲುಗಳಲ್ಲಿ,ಕಾಂಚಾಣದ ಮಡಿಲಲ್ಲಿನ,ನಂಜಿಲ್ಲದ ವಾಯುವಿಗಾಗಿ.., ಸುಟ್ಟ ವಾಸನೆಬೀರುತಲಿವೆ,ಚಿತೆಯೇರಿದ ಮನಗಳು,ಬೂದಿಯ ಸ್ಪರ್ಶಿಸಲುಚಡಪಡಿಸುತಿವೆ,ಕಾಲವಾದ ನೆನಪುಗಳಲ್ಲಿ,ಮುಳುಗಿ ಮೇಲೇಳುವುದಕ್ಕೋ …?ಮೇಲೇಳದೆ  ಮುಳುಗುವುದಕ್ಕೋ….?   ಚಿ0ತೆಯಲ್ಲಿ ದಹಿಸುತಿವೆ,ಬಾಳಿನ ನಾಳೆಗಳು ,ಬಿರುಗಾಳಿಯಲ್ಲಿಹಾರಬಯಸುತಿರೆ..,ಬೆಚ್ಚನೆಯ ಮನೆಯಲ್ಲೂ,ಮುಳ್ಳಾಗಿ ಚುಚ್ಚುತ್ತಿವೆ,ಮೆತ್ತನೆಯ ಗಾದಿಗಳು ,ಅರುಣೋದಯದ ಹಂಬಲದಲ್ಲಿ…….. ******************************************************* ,    ….. *******************

ಮಹಾದೇವಿ ಅಕ್ಕ

ಕವಿತೆ ಮಹಾದೇವಿ ಅಕ್ಕ ಡಾ.ಕೆ.ಶಶಿಕಾಂತ ಬರೀ ಹಗಲಭ್ರಮೆಯೊಳಗಿನಈ ಜಗಕೆ,ನಿನ್ನಬೆತ್ತಲೆತನದ್ದೇ ಚಿಂತೆ….ತನ್ನ ಬೆತ್ತಲ ಬದುಕಿನಅರಿವು ಇದ್ದರಲ್ಲವೇ…ಬಟ್ಟೆ ಹೊದ್ದಿಸಲಾಗದನಿನ್ನ ದಿಗಂಬರತನವತಿಳಿಯಲು… ಬೋಳು ಗುಡ್ಡದಂತೆಬರೀ ಮಂಡೆ ಬೋಳಾದಈ ಹಿರಿಯರ ಲೋಕದಲ್ಲಿಹುಡುಕುತ್ತಲೇ ಇದೆ ಈ ಜಗಮೋಟು ಮರಗಳ ಗುಂಪಿನಲ್ಲಿಚಿಗುರೊಡೆದ ಗಿಡವನರಸುವಂತೆಬರಡಾಗಿರುವ ಭಾವದಲಿಬಯಲ ಚೆಲುವ ಚೆನ್ನನ…. ಮರವೇ ಮರುಗುವಂತೆಗರಗರ ಸುತ್ತಿದ್ದಾಯ್ತು ,ನೀರೇ ಕಲಕುವಂತೆಮುಳುಮುಳುಗಿಮಿಂದದ್ದಾಯ್ತು ,ಅರ್ಥವನರಿಯದಗಿಳಿಯಂತೆ ನುಡಿದುತನ್ನ ಹಿರಿಮೆಯ ಸೊಲ್ಲುದನಿಯಿಲ್ಲದಾಯ್ತು,ತಲೆಮಾರುಗಳ ಕಾಲಚೆನ್ನನನು ಕಾಣದಾಯ್ತು… ದೃಢವಲ್ಲದ ಹೊಟ್ಟೆಗಾಗಿಮೃಡನನು ಗುರಿಮಾಡಿಹೇಮಕಾಮದ ಇಚ್ಛೆಗೆಚೆನ್ನನರಿವ ಮನಕೆ ಕಿಚ್ಚಿಟ್ಟುಕದಳಿಯ ದಾರಿಯರಿಯದೇದಿಕ್ಕೆಟ್ಟ ಬದುಕಿಗೆಸಾವ ವಿದ್ಯೆಯನರುಹಿದಮಹದ ಗುರು ಮಹಾದೇವಿ…. ಹರಕೆ ಕಾಣಿಕೆಗಳಿಡದಜೀವಕೋಟಿಯನಿರಿಯುವನೂರುದೇವತೆಗಳಈ ಲೋಕದಲ್ಲಿ,,ಬಿಲ್ವಬೆಳವಲಗಳಸಂದೇಹವ ಬಿಡಿಸಿಟ್ಟುಬಾಳೆಮಾವುಗಳಿಗೆನೀರೆರೆದು ಸಲಹಿದವನಕುರುಹನು […]

ಆತ್ಮಸಖಿ ಅಕ್ಕಾ

ಆತ್ಮಸಖಿ ಅಕ್ಕಾ ಸುಮಾವೀಣಾ ಆತ್ಮಸಖಿ ನೀ.. ಅಕ್ಕಾಮಹಾಮನೆಯ ಮಹಾದೇವಿನೀ ವಸುಂಧರೆಯ ಆತ್ಮಸಖಿ!ಸಾವಿಲ್ಲದ ಸೀಮೆಯಿಲ್ಲದ ಮಲ್ಲ್ಲಿಕನಿಗೊಲಿದನಿನ್ನ ಸೀಮಾತೀತ ಭಾವಕ್ಕೆ ಜಗವೇ…ಜಗವೆ ಬಾರಿಸುತಿದೆ ಜಂಗಮದ ಗಂಟೆಯನು!ಸ್ತ್ರೀಕುಲವ ನೋಡುವ ಸೀಮೆಯಬದಲಾಯಿಸಿದ ನೀ ನಮ್ಮ ಆತ್ಮ ಸಖೀ!ನಿತ್ಯ ಸ್ಮರಣಕೆ ಬಂದು ನಿಲುವ ಮಹಾದೇವಿ ನೀಅಕ್ಕಾ.. ಮಹಾದೇವನಾ ಮಹಾದೇವಿಗಂಡುಹೆಣ್ಣೆಂಬ ಸೂತಕ ಕಳೆದ ಸೌಖ್ಯ ದೇವಿ!ನರನಾರೀ ಹೃದಯಗಳ ಪತಿತಭಾವದಿಂದಲೇಭಾಂಧವ್ಯ ಬೆಸೆದ ನೀ ಶರಣೆಯರ ಆತ್ಮಸಖೀ!ಸ್ತ್ರೀಕುಲದ ಸಚಿಜೀವಿನಿ. ಹೂವ ತರುವರಮನೆಗೆ ಹುಲ್ಲ ತಾರದ ನಿನ್ನ ಸೌಧರ್ಮಿಕಕೆಯಆ ಹೊನ್ನುಡಿ ನಮಗೆ ಬೆನ್ನುಡಿ,ಚೆನ್ನುಡಿ!ಆತ್ಮಬಲಕ್ಕೆ ಸಾಕ್ಷಿಯಾದ ಅಕ್ಕಾ ನೀಆತ್ಮಸಂವರ್ಧನೆಯ ತವನಿಧಿ, ಲೋಕಬಂಧುಗಳ […]

ಜಗದ ಜ್ಯೋತಿ

ಜಗದ ಜ್ಯೋತಿ ರೇಮಾಸಂ ದಂಡಿ ಕಟ್ಟದೇ ಮಾಡಿಕೊಂಡೆಯಲ್ಲಕೊರಳಿಗೆ ತಾಳಿಯನೂ ಬಿಗಿಯಲಿಲ್ಲಮೈಗೆ ಅರಿಶಿಣ ಮೆತ್ತಿಕೊಳ್ಳಲಿಲ್ಲಮದುವೆಯ ಹಂದರವು ಹರಿವಿರಲಿಲ್ಲಹೊಸ ಇತಿಹಾಸವ ಸೃಷ್ಟಿಸಿಬಿಟ್ಟೆಯಲ್ಲ ಸಮಾನತೆಗಾಗಿ ಧರಣಿ ಹೂಡದೆಹೆಣ್ಣೆಂದು ಅವಕಾಶವಾದಿಯಾಗದೆಅಲ್ಲಮರ ಮಂಟಪದ ಜ್ಯೋತಿಯಾದೆಉಡತಡಿ ಉಡುಗೊರೆಯಾಗಿ ಉದಯಿಸಿದೆಕದಳಿಗೆ ಕರ್ಪುರದಂತೆ ಅರ್ಪಿತಳಾದೆ ನೀ ಶರಣ ಚಳುವಳಿಯ ಚೇತನಅಲ್ಲಮರ ಸಮ ಸಂವೇದನಶೀಲಳುಅನುಭಾವಿಯುಕ್ತ ಮೇರು ಸಾಹಿತಿವಿಶಿಷ್ಟ ವೈಚಾರಿಕ ಮೌಲಿಕ ವಚನಗಾರ್ತಿಕನ್ನಡದ ಪ್ರಥಮ ಬಂಡಾಯ ಕವಯತ್ರಿ ಸಾರಿದೆ ಜಗದ ಕಣ್ಣು ಬೆತ್ತಲಾಗಿದೆಮನವು ಚಂಚಲದಿ ಬೆತ್ತಲಾಗಿದೆಇಷ್ಟ ಕಾಮ್ಯಗಳಡಿ ಸಿಕ್ಕಿಕೊಂಡಿದೆಭೌತಿಕ ಭೋಗ ಬಂಧನದಲಿದೆಯಂದೆಜಗದ ಬೆತ್ತಲ ನೀ ಸ್ವತಃ ತೋರಿದೆ ಭೋಗ ಜೀವನದ ಬಲಿದಾನಕರ್ಮಠ […]

Back To Top