ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕವಿತೆ

ಎಂತಹ ಸಮಯವಿದು!!

ಸಂಮ್ಮೋದ ವಾಡಪ್ಪಿ

ಪ್ರೀತಿ ವಿಶ್ವಾಸ ಕೂಡಿಟ್ಟವರು
ಯಾವುದೋ ವಾರ್ಡಿನಲ್ಲಿ ಏಕಾಂಗಿ
ಶ್ವಾಸಕ್ಕಾಗಿ ಎಲ್ಲ ಕಳೆದುಕೊಂಡರು
ಉಸಿರಿಗಾಗಿ ಕಳೆದು ಹೋದರು

ಚೈತ್ರದ ಚಿಲುಮೆಯ ಕಾಲ
ಎಲ್ಲವೂ ಚಿಗುರತಿರಲಿಂದು
ಬಾಡುತಿವೆ ಸಾವಿರ ಲಕ್ಷ
ಮನೆಗಳಲಿ ರೋದನಗಳಿಂದು

ಅವ ಹೋದ ಇವ ಬಂದ
ಏನಾಯಿತು ಕೋವಿಡ್ಡಾ?
ಅದೇ ಪ್ರಶ್ನೆ..‌ ಭಯಂಕರ ಉತ್ತರ
ಸಮರವಿದು ಜಗವೆಲ್ಲ ತತ್ತರ

ಹಣ ತೆತ್ತರು ಸಿಗದಲ್ಲ
ಅಂದು ಗಿಡ ನೆಡದವ
ಆಮ್ಲಜನಕ ಬೇಡುತಿಹ
ಧಗಧಗಿಸುವ ಸೂರ್ಯ ನಗುತಿಹ

ಸಮಯವಿದು ಕಳೆದು ಹೋಗಲಿ
ಕಳೆದು ಹೋದ ನಗು ಮರಳಲಿ
ಮರಳಿನಲಿ‌ ಓಯಾಸಿಸ್ ಸಿಗಲಿ
ವೈರಾಣುವಿನ ಸಂಹಾರವಾಗಲಿ

*************************************************

About The Author

3 thoughts on “ಎಂತಹ ಸಮಯವಿದು!!”

Leave a Reply

You cannot copy content of this page

Scroll to Top