ಕವಿತೆ
ಯಾತನೆ
ಲಕ್ಷ್ಮೀ ಮಾನಸ
ಚಿತಾಗಾರದ ಚಿತ್ರಣ,
ಮನದಲ್ಲಿ ಮರುಕಳಿಸಲು,
ಎದೆಯಲ್ಲಿ ಬಿರುಗಾಳಿ
ಬೀಸಿ,
ತಾರೆಗಳ ಕಾಣುತಲಿವೆ ,
ಬಣ್ಣ ಮಾಸಿದ ಪಕ್ಷಿಗಳು,
ಕಿಟಕಿಗಳ ಚಿಕ್ಕ ಸಂದಿನಲ್ಲಿ..,
ಲೋಕದ ತುಂಬೆಲ್ಲಾ
ಪರದೆಗಳು,
ಮಾಸಿದ ಚಿತ್ತಾರಗಳು,
ಮುಗಿಲು ಮುಟ್ಟುತ್ತಲಿವೆ ,
ಚೀತ್ಕಾರಗಳು,
ಮಂಜಿನ ಮಹಲುಗಳಲ್ಲಿ,
ಕಾಂಚಾಣದ ಮಡಿಲಲ್ಲಿನ,
ನಂಜಿಲ್ಲದ ವಾಯುವಿಗಾಗಿ..,
ಸುಟ್ಟ ವಾಸನೆ
ಬೀರುತಲಿವೆ,
ಚಿತೆಯೇರಿದ ಮನಗಳು,
ಬೂದಿಯ ಸ್ಪರ್ಶಿಸಲು
ಚಡಪಡಿಸುತಿವೆ,
ಕಾಲವಾದ ನೆನಪುಗಳಲ್ಲಿ,
ಮುಳುಗಿ ಮೇಲೇಳುವುದಕ್ಕೋ …?
ಮೇಲೇಳದೆ ಮುಳುಗುವುದಕ್ಕೋ….?
ಚಿ0ತೆಯಲ್ಲಿ ದಹಿಸುತಿವೆ,
ಬಾಳಿನ ನಾಳೆಗಳು ,
ಬಿರುಗಾಳಿಯಲ್ಲಿ
ಹಾರಬಯಸುತಿರೆ..,
ಬೆಚ್ಚನೆಯ ಮನೆಯಲ್ಲೂ,
ಮುಳ್ಳಾಗಿ ಚುಚ್ಚುತ್ತಿವೆ,
ಮೆತ್ತನೆಯ ಗಾದಿಗಳು ,
ಅರುಣೋದಯದ ಹಂಬಲದಲ್ಲಿ……..
*******************************************************
,
…..
*******************