ರೈತ ಗಜಲ್

ಭೂಮಿತಾಯಿ ಕೈ ಬಿಡೋಲ್ಲ ಎಂದು ನಂಬಿ ಬದುಕುತ್ತಿರುವ ನಾ ಬಡರೈತ
ನೀರಿನಿಂದಲ್ಲ ಬೆವರಿನಿಂದ ಪ್ರತಿದಿನ ಸ್ನಾನ ಮಾಡುತ್ತಿರುವ ನಾ ಬಡರೈತ

ಮೇಘರಾಜನ ಕೃಪೆಯೂ ನನಗಿಲ್ಲ ದುರಾದೃಷ್ಟವಂತ ನಾನು
ಕಪ್ಪು ಮೋಡಗಳಿಗಾಗಿ ಆಗಸವನ್ನೇ ದಿಟ್ಟಿಸಿ ನೋಡುತ್ತಿರುವ ನಾ ಬಡರೈತ

ಭೂಮಿಯೇ ಹಾಸಿಗೆ ಆಕಾಶವೇ ಹೊದಿಕೆ ನನಗೆಂದೆಂದೂ
ಬೇರೆ ಗತಿಯಿಲ್ಲ ಜೀತಕ್ಕೆಂದೇ ಈ ಜೀವನ ಮುಡಿಪಿಟ್ಟಿರುವ ನಾ ಬಡರೈತ

ದೇಶದ ಬೆನ್ನೆಲುಬು ನಾವಾದರೂ ಕಾಳಜಿ ಮಾಡೋರು ಯಾರಿಲ್ಲ
ಬರೀ ಕನಸು, ಭ್ರಮೆಯೊಳಗೇ ಜೀವನ ಸಾಗಿಸುತ್ತಿರುವ ನಾ ಬಡರೈತ

ಬರೀ ಮಾತಲ್ಲೇ ನಮ್ಮನ್ನು ಅಟ್ಟ ಹತ್ತಿಸಿ ಆಟ ನೋಡುತ್ತಿದ್ದಾರೆ ಜನ.
ಇರುಳು ಶಶಿಯ ನಗು ನೋಡಿಯೇ ಸಮಾಧಾನ ಪಡುತ್ತಿರುವ ನಾ ಬಡರೈತ

**************

ಶಶಿಕಾಂತೆ

Leave a Reply

Back To Top