ಆತ್ಮಸಖಿ ಅಕ್ಕಾ

ಆತ್ಮಸಖಿ ಅಕ್ಕಾ

ಸುಮಾವೀಣಾ

ಆತ್ಮಸಖಿ ನೀ.. ಅಕ್ಕಾ
ಮಹಾಮನೆಯ ಮಹಾದೇವಿ
ನೀ ವಸುಂಧರೆಯ ಆತ್ಮಸಖಿ!
ಸಾವಿಲ್ಲದ ಸೀಮೆಯಿಲ್ಲದ ಮಲ್ಲ್ಲಿಕನಿಗೊಲಿದ
ನಿನ್ನ ಸೀಮಾತೀತ ಭಾವಕ್ಕೆ ಜಗವೇ…
ಜಗವೆ ಬಾರಿಸುತಿದೆ ಜಂಗಮದ ಗಂಟೆಯನು!
ಸ್ತ್ರೀಕುಲವ ನೋಡುವ ಸೀಮೆಯ
ಬದಲಾಯಿಸಿದ ನೀ ನಮ್ಮ ಆತ್ಮ ಸಖೀ!
ನಿತ್ಯ ಸ್ಮರಣಕೆ ಬಂದು ನಿಲುವ ಮಹಾದೇವಿ ನೀ
ಅಕ್ಕಾ.. ಮಹಾದೇವನಾ ಮಹಾದೇವಿ
ಗಂಡುಹೆಣ್ಣೆಂಬ ಸೂತಕ ಕಳೆದ ಸೌಖ್ಯ ದೇವಿ!
ನರನಾರೀ ಹೃದಯಗಳ ಪತಿತಭಾವದಿಂದಲೇ
ಭಾಂಧವ್ಯ ಬೆಸೆದ ನೀ ಶರಣೆಯರ ಆತ್ಮಸಖೀ!
ಸ್ತ್ರೀಕುಲದ ಸಚಿಜೀವಿನಿ. ಹೂವ ತರುವರ
ಮನೆಗೆ ಹುಲ್ಲ ತಾರದ ನಿನ್ನ ಸೌಧರ್ಮಿಕಕೆಯ
ಆ ಹೊನ್ನುಡಿ ನಮಗೆ ಬೆನ್ನುಡಿ,ಚೆನ್ನುಡಿ!
ಆತ್ಮಬಲಕ್ಕೆ ಸಾಕ್ಷಿಯಾದ ಅಕ್ಕಾ ನೀ
ಆತ್ಮಸಂವರ್ಧನೆಯ ತವನಿಧಿ, ಲೋಕಬಂಧುಗಳ ಆತ್ಮಸಖೀ..
ಲೋಕದಾ ಸಿರಿಗೊಲಿಯದ ನಿನ್ನಶ್ರೀಶೈಲದಾ ನಾಡು
ಹೆಣ್ಮಕ್ಕಳ ನಿಜ ತವರು. ಉಡಿತುಂಬಾ ತುಂಬಿರುವೆ
ನೀ ನುಡಿಬಾಗಿನವನ್ನೇ ಬೇಕಿಲ್ಲ ನಮಗೇನಿನ್ನು..
ಕರೆದಾಗಲೆಲ್ಲಾ ಬರುವೆಯಾ ನೀನು ?ಬರುವೆ
ಖಂಡಿತಾ ಬರುವೆ. ನೀ ನಮ್ಮ ಆತ್ಮಸಖೀ…
ವಿಚಾರವಂತಿಕೆಯ ಮಡಿವಂತಿಕೆಯಲೆ ಎಲ್ಲರನು ತವಿಸಿರುವೆ
ನೀ ನಮಗೆ ಆತ್ಮಸಖೀ.. ಆತ್ಮಸುಖೀ
ನೀ ಬರೆ ಹೆಣ್ಣಲ್ಲ! ನೀ ಬರೆ ಶರಣೆಯಲ್ಲಾ!
ಶರಣಾರ್ಥಿಗಳ ನಿತ್ಯ ಸ್ಮರಣಾರ್ಥೀ
ವಸುಂಧರೆಯ ಆತ್ಮ ಸಖೀ… ಆತ್ಮ ಸುಖೀ…

******************************

Leave a Reply

Back To Top