ಕಾವ್ಯಯಾನ
ಗಝಲ್ ರತ್ನರಾಯಮಲ್ಲ ನೆಮ್ಮದಿಯ ಜೀವನಕ್ಕಾಗಿ ಮನಸ್ಸನ್ನು ಮರೆತುಬಿಡು ಶಾಂತಿಯುತ ಬದುಕಿಗಾಗಿ ಬುದ್ಧಿಯನ್ನು ಮರೆತುಬಿಡು ಬಾಳೊಂದು ಸುಂದರ ಸ್ವಪ್ನ ಎಂಬುದನ್ನು ಮರೆಯದಿರು ನಿರ್ಮಲ ಸಹಯೋಗದ ಸಾಂಗತ್ಯವನ್ನು ಮರೆತುಬಿಡು ಪರಪಂಚದಲ್ಲಿ ಶೂನ್ಯ ಸಂಪಾದನೆ ಮಾಡಬೇಕಾಗಿದೆ ಎಲ್ಲಾ ಬಲ್ಲೆನೆಂಬ ಸಿಹಿಯಾದ ಭ್ರಮೆಯನ್ನು ಮರೆತುಬಿಡು ಮನುಷ್ಯ ಸಮಾಜ ಜೀವಿ ಎಂದು ಸಾರಲು ಹೋಗಬೇಡ ಜಿಂದಗಿಯ ಸವಿಯನುಣಲು ಸಂಸಾರವನ್ನು ಮರೆತುಬಿಡು ‘ಮಲ್ಲಿ’ ಮರೆವು ಪ್ರಜ್ಞಾವಂತ ಜಗತ್ತಿನ ಬಹುದೊಡ್ಡ ಆಸ್ತಿ ಶಾಶ್ವತವೆಂಬ ಮಾಯಾ ಜಿಂಕೆಯನ್ನು ಮರೆತುಬಿಡು ******
ಕಾವ್ಯಯಾನ
ಯುದ್ದ ಮಲ್ನಾಡ್ ಮಣಿ ಮಾಯ ಜಾಲದ ಮಾಂತ್ರಿಕನೊಬ್ಬನ ಮಾಯೆಯಾಟದ ಛಾಯೆಯ ಕರಿನೆರಳು ಸುಡುತಿದೆ ಭೂಮಂಡಲವನ್ನು. ತುಪಾಕಿಗಳ ಗುಂಡಿನ ಘನಘೋರ ಶಬ್ದ ಗಗನ ಚುಂಬಿಯಾಗಿತ್ತು ನರ ಮಂಡಲದ ವಿಷವರ್ತುಲದಲ್ಲಿ ವಿಲವಿಲ ಒದ್ದಾಡಿ ಬೆತ್ತಲಾಗಿ ನಿಂತಿದೆ ಬದುಕು. ಅರೆಗಳಿಗೆಯ ಅಲ್ಪಸುಖದಲ್ಲಿ ತಲ್ಲೀನನಾಗಿದ್ದೆ, ಚಾಟಿಯ ಏಟು ಬೀಸಿ ಬರುತ್ತಿತ್ತು ನನ್ನೆಡೆಗೆ, ತಂಗಾಳಿಯಲ್ಲಿ ವಿಷ ಬೆರತದ್ದು ಗೊತ್ತಾಗಲೆ ಇಲ್ಲ. ಯದ್ಧಕ್ಕೆ ಸಜ್ಜು ಮಾಡುತ್ತಿದ್ದೆ ತುಕ್ಕು ಹಿಡಿದ ಅಲಗನ್ನು ಮಸೆಯುತ್ತಿದ್ದೆ, ವೈರಿಯು ಅದನ್ನೆ ನಡೆಸಿರಬೇಕು. ನನಗೆ ಶತ್ರು ಭಯ, ಶತ್ರುವಿಗೆ ನನ್ನ ಭಯ, ಆದರು […]
ಕಾವ್ಯಯಾನ
ನಿನ್ನ ಧ್ಯಾನ ಮಲ್ನಾಡ್ ಮಣಿ ಅರಳು ಮಲ್ಲಿಗೆಯ ಮಾಲೆ ಮಾಡಿ ನಿನ್ನ ಕೊರಳ ಧ್ಯಾನಿಸುತ್ತಲಿರುವೆ. ಎಂದು ಬರುವೆಯೆಂದು ದಾರಿ ಕಾಯುವ ಶಬರಿ ನಾನು. ದೇಹ ಮಲ್ಲಿಗೆ ಗೀಡವು ಭಾವ ಅದರ ಹೂವು, ನಿನ್ನ ನೆನಪಿನ ನೀರನೆರೆದು ಹೂ ಕಿತ್ತು ಕಟ್ಟಿ ಮಾಲೆ ಮಾಡಿದೆ. ನಿನ್ನ ದಾರಿ ಕಾದು ಮತ್ತೆ ಮಲ್ಲೆ ಹೂವ ಕಂಡೆ, ಅರಳು ಮಲ್ಲಿಗೆ ನಗುವ ಬೀರಿತು. ಹೊತ್ತು ಹಾದು ಹೋದರು ನಿನ್ನ ಸುಳಿವು ಕಾಣದು ಬರುವ ಸಂಜೆಗೆಂಪು ನಗುವ ಮಾಸಿತು. ನೆರಳಿನಲ್ಲಿ ನನ್ನ ನೆರಳು […]
ಕಾವ್ಯಯಾನ
ಗಝಲ್ ಡಾ.ಗೋವಿಂದ ಹೆಗಡೆ ಈ ಬೆಳಗು ಎಂದಿನಂತಿಲ್ಲ ಈ ಬದುಕು ಎಂದಿನಂತಿಲ್ಲ ಅಲೆಗಳೆಷ್ಟು ಕ್ಷುಬ್ಧವಾಗಿವೆ ಈ ಕಡಲು ಎಂದಿನಂತಿಲ್ಲ ಮಧುಶಾಲೆಗೇ ಗರ ಬಡಿದು ಈ ಗುಟುಕು ಎಂದಿನಂತಿಲ್ಲ ಎಂಥ ಮರುಳಿತ್ತು ಸಂಜೆಯಲ್ಲಿ ಈ ಇರುಳು ಎಂದಿನಂತಿಲ್ಲ ಮುಖ ತಿರುಗಿಸಿ ನಡೆದಳಲ್ಲ ಯಾಕವಳು ಎಂದಿನಂತಿಲ್ಲ ಎದೆಯೂಟೆ ಬತ್ತಿಹೋಯಿತೇ ಈ ಮಡಿಲು ಎಂದಿನಂತಿಲ್ಲ ಬಾಂದಳಕೆ ಬೆಂಕಿ ಬಿದ್ದಿದೆ ಈ ಮುಗಿಲು ಎಂದಿನಂತಿಲ್ಲ ಸಾಂತ್ವನವ ಅರಸಿದೆ ‘ಜಂಗಮ’ ಈ ಹೆಗಲು ಎಂದಿನಂತಿಲ್ಲ ********
ಕಾರ್ಮಿಕ ದಿನದ ವಿಶೇಷ-ಗಝಲ್
ಗಝಲ್ ತೇಜಾವತಿ ಹೆಚ್.ಡಿ. ಗಝಲ್ ಕನಿಷ್ಠ ಕೂಲಿಗಾಗಿ ಮೈಯೊಳು ಬೆವರ ಹರಿಸುವೆವು ಕಾರ್ಮಿಕರು ನಾವು ಒಂದ್ಹೊತ್ತಿನ ಗಂಜಿಗಾಗಿ ಶ್ರಮದ ಬದುಕ ಸಾಗಿಸುವೆವು ಕಾರ್ಮಿಕರು ನಾವು ಕರ್ತವ್ಯ ನಿಷ್ಠೆಯಲಿ ಹಗಲಿರುಳೆನ್ನದೆ ಸ್ವಾರ್ಥವ ತೊರೆದು ಹೋರಾಡುವೆವು ಬಿಸಿಲು ಮಳೆ ಗಾಳಿಗೆ ಜಗ್ಗದೆ ತನುವ ಒಡ್ದುವೆವು ಕಾರ್ಮಿಕರು ನಾವು ಮಲಗಲು ಸೂರಿಲ್ಲದೆ ಮೈಗೆ ಹೊದಿಕೆಯಿಲ್ಲದೆ ಚಳಿಗೆ ನಲುಗಿದರೂ ಒಡೆಯನಿಗೆ ಸುಸಜ್ಜಿತ ಅರಮನೆ ನಿರ್ಮಿಸುವೆವು ಕಾರ್ಮಿಕರು ನಾವು ಕೃಷಿಯನ್ನೇ ನಂಬಿ ಮುಗಿಲನ್ನು ನೋಡುತ ಮಳೆಯ ಕಾಯುವೆವು ದೇಶಕ್ಕಾಗಿ ಹೊಲವ ಉತ್ತು ಅನ್ನವ ಬೆಳೆಯುವೆವು […]
ಕಾರ್ಮಿಕ ದಿನದ ವಿಶೇಷ-ಕವಿತೆ
ಬೆವರ ಹನಿಗಳು ಚೈತ್ರಾ ಶಿವಯೋಗಿಮಠ ಬೆವರ ಹನಿಗಳು ದುಡಿಯುವ ಕೈಗಳು, ದೇವರ ಕೈಗಳು ಹೊಲದಲಿ ಕೃಷಿಕ ಗಡಿಯಲಿ ಸೈನಿಕ ದುಡಿಯಲು ಕಾರ್ಮಿಕ ಕಾಯಕ ಯೋಗದ ಹರಿಕಾರರು ಬಸವಾದಿ ಪ್ರಮಥರು ದುಡಿಮೆ, ಶ್ರಮದ ಮಹತ್ವ ಸಾರಿದ ಜಗದ ಶ್ರೇಷ್ಠ ಕಾರ್ಮಿಕರು ದುಡಿಯುವ ಜೀವಗಳಿಗೆ ಸದಾ ಸಮೃದ್ಧಿಯಿರಲಿ ದುಡಿಸುವವರಿಗೆ, ಶ್ರಮಿಕರಿಗೆ ಪ್ರೀತಿ-ಗೌರವ ನೀಡುವ ಬುದ್ಧಿ ಸರ್ವದಾ ಇರಲಿ ಕಠಿಣ ಪರಿಶ್ರಮ ದುಡಿಮೆಯೇ ರಾಮನಾಮ. ಕಾರ್ಮಿಕನಿಗಿಲ್ಲ ವಿರಾಮ! ಇವರಿಗೆ, ದುಡಿಮೆಯೆ ದೈವ ಸ್ವಾಭಿಮಾನವೆ ಭವ-ಭಾವ ಪರಿಶ್ರಮವೆ ವಿಭವ! ಬೇಕು, ಚಿಪ್ಪಿಗೆ ಸ್ವಾತಿ […]
ಕಾವ್ಯಯಾನ
ಕಾಮಿ೯ಕರ ದಿನ ಎನ್. ಆರ್ .ರೂಪಶ್ರೀ ಕಾಮಿ೯ಕರ ದಿನ ತುತ್ತು ಅನ್ನಕ್ಕಾಗಿ ಬಾಳನ್ನು ತೆತ್ತು ತೆತ್ತು ಹಗಲಿರುಳು ದುಡಿತದ ನೆರಳಿನಲಿ ಸಾಗುತಿದೆ ಕಾಮಿ೯ಕನ ಹೊತ್ತು. ದಿನ ದಿನವೂ ಅನುದಿನವೂ ನೋವು ನರಳಾಟ ಅರಳುವುದು ಕಣ್ಣಿನಲ್ಲಿ ಕುಡಿಮಿಂಚು ನಗೆಯಾಟ ಬಲ್ಲಿದರ ಬಂಧನದಿ ಸದಾ ಶೋಷಣೆಯ ಸೆರಗು ಇದೇ ಏನೋ ಕಾಮಿ೯ಕನ ಜೀವನಕೆ ಸಂತಸದ ಮೆರಗು. ತಾನು ತನ್ನದೆನ್ನುವ ಹಕ್ಕಿನ ಹಂದರ ಹಸಿದು ಬಸವಳಿದಿದೆ ಆಸೆ ಆಮಿಷಗಳ ದೂರದ ಬಯಕೆಗಳ ಗೋಪುರದ ಗುಮ್ಮಟ ತಲೆಯೆತ್ತಿ ನಿಂತಿದೆ. ದು:ಕ ದುಗುಡ ದುಮ್ಮಾನಗಳಿಗೆ […]
ಕಾರ್ಮಿಕ ದಿನದ ವಿಶೇಷ-ಕವಿತೆ
ಕವಿತೆ ಕಾವಲಿಯಿಂದ_ಕೆಂಡಕ್ಕೆ ಲಕ್ಷ್ಮಿಕಾಂತಮಿರಜಕರ ಕಾವಲಿಯಿಂದ_ಕೆಂಡಕ್ಕೆ ಚರಂಡಿ ಬದಿಯ ಮುರುಕಲು ಶೆಡ್ ಗಳಲ್ಲಿ ಸಹಿಸುತ್ತ ಕಚ್ಚುವ ಸೊಳ್ಳೆಗಳ ನೋವು ನಾಳೆಯೂ ಕೆಲಸಕ್ಕೆ ಹೋಗದಿದ್ದರೆ ಹೊಟ್ಟೆಗೇನೂ ಸಬೂಬು ಹೇಳುವುದೆಂದು ಚಿಂತಾಮಗ್ನದಲ್ಲಿ ನಾವಿರುವಾಗ ನೀವಾಗಲೇ ಚಪ್ಪಾಳೆ ತಟ್ಟುವ ಸಂತೋಷದಲ್ಲಿ ಮೈಮರೆತು ಮೀಯುತ್ತಿದ್ದಿರಿ ನಿಮ್ಮ ನಿಮ್ಮ ಅರಮನೆಗಳ ಬಾಲ್ಕನಿಗಳಲ್ಲಿ ನಿಂತು ನಿಮ್ಮ ಚಪ್ಪಾಳೆಯ ಲಯಬದ್ಧ ಸದ್ದಿಗೆ ಸಮವಲ್ಲ ಬಿಡಿ ನಮ್ಮ ಹಸಿದ ಹೊಟ್ಟೆಗಳ ತಾಳ ತಿಂಗಳಪೂರ್ತಿ ಸಾಕಾಗುವಷ್ಟು ದಿನಸಿಗೋದಾಮು ಪೇರಿಸಿಡಲು ನೀವು ನಗುತ್ತಲೇ ಹೆಣಗಾಡುತ್ತಿದ್ದ ಸಮಯದಲ್ಲಿ ನಮ್ಮ ಬದುಕು ಪೇರಿಕಿತ್ತಿತ್ತು ಬಿಸಿಲಿಗೆ ಕಾದು […]
ಕಾರ್ಮಿಕ ದಿನದ ವಿಶೇಷ-ಕವಿತೆ
ಕೂಲಿಯವನ ಮಗ ನಾನು ವಾಯ್.ಜೆ.ಮಹಿಬೂಬ ಕೂಲಿಯವನ ಮಗ ನಾನು ಬಡವನಾದರೇನಂತ ಇಲ್ಲೆನಗ ಬ್ಯಾಸರ ಕಣ್ಣತುಂಬ ನಿದ್ದೀಗಿ ಗುಡಿಸಲೆಮಗೆ ಆಸರ !!ಪ!! ಕೂಲಿಯವನ ಮಗನಾನು ಬಿಸಿಲೆಮಗೆ ಸಹೋದರ ನಮ್ಮಪ್ಪ ಅಂತಾನ ಮುಗಿಲೆ ನಮಗೆ ಹಂದರ !!೧!! ಅವ್ವನ ಸೀರಿ ಶೆರಗೇ ಒರಿಸೇತಿ ಬೆವರ ಹಾಸಿಗೆ ಆಗತೈತಿ ಅಪ್ಪನ ಹರಕ ಧೋತರ!!೨!! ಹಬ್ಬಕವರು ಕಾಣಲಿಲ್ಲ ಹೊಸ ಸೀರಿ-ದೋತರ ಸತ್ತಾಗ ಕಟ್ಟತೀರಿ ಅರವಿ ಐದು ಮೀಟರ್ !!೩! ******
ಕಾರ್ಮಿಕ ದಿನದ ವಿಶೇಷ-ಕವಿತೆ
ಕಾರ್ಮಿಕ-ಶ್ರಮಿಕ ಪ್ರೊ.ಕವಿತಾ ಸಾರಂಗಮಠ ಕಾರ್ಮಿಕ-ಶ್ರಮಿಕ ದೇವನಿತ್ತ ಭೂಮಿಯಲ್ಲಿ ಶ್ರಮಿಕ ಪ್ರಾಮಾಣಿಕತೆಯ ಧನಿಕ ಸಮಯದ ಪರಿಪಾಲಕ ನಿತ್ಯ ದುಡಿದು ತಿನ್ನುವ ಕಾಯಕ! ಕರ್ಮದಿಂದ ಜಗವೆಲ್ಲ ಸುಗಮ ಕರ್ಮದಿಂದಲೇ ಸಂತಸದ ಉಗಮ ಹರಿಸುತ ನಿತ್ಯ ಬೆವರ ಸುಮ ಜಗವೆಲ್ಲ ಹರಡುವ ಶ್ರಮದ ಕುಸುಮ! ಶ್ರಮದೊಂದಿಗೆ ದಿನಚರಿ ಆರಂಭ ಅವಿರತ ದುಡಿದ ಬೆವರಲವನ ಬಿಂಬ ಸಹಿಸುವ ಧನಿಕರ ದಬ್ಬಾಳಿಕೆ ಆದರೂ ಇವನ ಕೆಲಸಕಿಲ್ಲ ಹೋಲಿಕೆ! ಕಟ್ಟುವ ನಿತ್ಯ ಕಾಯಕದ ಕಟ್ಟೆ ಕೈಯಲ್ಲಿ ಹಿಡಿದು ಉಣ್ಣುವ ಕರ್ಮದ ತಟ್ಟೆ ತೊಟ್ಟರೂ ಚಿಂದಿ ಬಟ್ಟೆ […]