Category: ಕಾವ್ಯಯಾನ

ಕಾವ್ಯಯಾನ

ಗಜಲ್

ಉಸುಕಿಗೂ ಹೊನ್ನಿಗೂ ಮಣ್ಣೇ ಮಡಿಲಾದರೂ ಧಾರಣೆ ಭಿನ್ನವಲ್ಲವೆ !
ಸತ್ಯ ಶೋಧನೆಯ ಸಂಗಾತಕೆ ಅಪಥ್ಯ ನಂಜುಣಿಸಿ ಕೊರಗಬೇಕಿಲ್ಲ ಇಲ್ಲಿ

ವಾರದ ಕವಿತೆ ಮಿಣುಕುಹುಳ ವಿಜಯಶ್ರೀ ಹಾಲಾಡಿ ನಡುರಾತ್ರಿಒಗೆದ ಬಟ್ಟೆಗಳ ಹರಡಿಅಡುಗೆಮನೆ ಶುಚಿಗೊಳಿಸಿಹೊದಿಕೆ ಜೋಡಿಸಿಕೊಂಡುಮಲಗುವ ಮುನ್ನಸಣ್ಣದೊಂದು ಬ್ಯಾಟರಿ ಬೆಳಕುಹಾಕಿಕೊಂಡು ಮನೆಯೆಲ್ಲತಿರುಗಿ ಬರಬೇಕೆನಿಸಿತು ಮಗುವಿನಂತೆ ನಿದ್ರಿಸಿದ ಮನೆಮನೆಮಂದಿ, ಕಗ್ಗತ್ತಲ ಜಗ….!ಕಪ್ಪೆ ಜೀರುಂಡೆ ಕೀಟಾದಿಗಳುಮೌನದೊಂದಿಗೆ ಸಂವಾದದಲ್ಲಿದ್ದವುಸುರಿದು ಸಾಕಾಗಿ ಬಿಟ್ಟ ಮಳೆಗೆನೆಲವೆಲ್ಲ ಥಂಡಿ ಶೀತಕಿಟಕಿಯಾಚೆಯ ಮಿಣುಕುಹುಳಗಳಜೊತೆ – ನಾನೇ ಒಂದುಮಿಂಚುಹುಳವೆಂದು ಭ್ರಮಿಸುತ್ತಕೋಣೆ ಕೋಣೆಗಳ ಸುತ್ತಾಡಿದೆಪಾದದುಸುರಿಗೆ ಬೆಚ್ಚಿದ ಹಲ್ಲಿಜಿರಳೆಗಳು ಮರೆಗೆ ಸರಿದವುದೂರದಲ್ಲೆಲ್ಲೋ ನಾಯಿಯೊಂದುಗೊಣಗುತ್ತ ಮಲಗುವ ಸೂಚನೆ ರವಾನಿಸುತ್ತಿರುವಾಗಲೇ…..ಮಿಣುಕುಹುಳವೊಂದು ಮಿಣಿಮಿಣಿಯೆಂದು ತೇಲಿಬಂದಿತು….ಮನೆಯೊಳಗೇ!!ಅಜ್ಜಿ ನೆನಪಿಸುತ್ತಿದ್ದ ‘ಜಕ್ಣಿ’ಯ ಕತೆ-ಗಳು ನುಗ್ಗಿಬಂದು ಕೈದೀಪವಾರಿಸಿದೆ!…….ವಟಗುಟ್ಟುವ ಕಪ್ಪೆಗಳುಕಣ್ಣ ಹಿತ ನೇವರಿಸುವ ಮಸಿಕತ್ತಲು!** ಟಿಪ್ಪಣಿ- […]

ಗಜಲ್

ಕಂಬಗಳೇ ಉರುಳಿಹೋಗಿ ಸಂತಸದ ಮನೆಯು ನೆಲಸಮ ವಾಗಿದೆ
ಕರುಳ ಬಳ್ಳಿ ಅನಾಥವಾದಾಗ ಆಧಾರವೆಲ್ಲಿಂದ ತರಲಿ

ಕಾವಲಿಲ್ಲದ ಹುಡುಗಿ

ಮತ್ತಿವರು ಕೊಂಕು ನುಡಿದವರಿಗೆ,
ಕುಡುಕ ಅಪ್ಪ,ತಲೆಹಿಡುಕ ಗಂಡ
ಎಡಬಿಡಂಗಿ ಅಣ್ಣ ತಮ್ಮಂದಿರು
ವೃದ್ದಾಶ್ರಮಕ್ಕೆ ಒಯ್ಯುವ ಮಗ
ಪಾಪ! ಕಾವಲಿದ್ದಾರೆ!

ಹೊಂಗನಸು

ಕವಿತೆ ಹೊಂಗನಸು ಶಂಕರಾನಂದ ಹೆಬ್ಬಾಳ ರಾತ್ರಿ ಹೊತ್ತು ದೀಪಹಚ್ಚದೆ ಕುಳಿತಿದ್ದೇನೆನಿನ್ನ ಕಣ್ಣ ಬೆಳಕಿನಲ್ಲಿಜಗ ನೋಡಬೇಕೆಂದು ಹಪಹಪಿಸುವ ಮನದಲ್ಲಿಮೂಲೆಗೊರಗಿದ್ದೇನೆನೀ ಸಾಂತ್ವನ ಹೇಳಲುಬಂದೆ ಬರುವೆಯೆಂದು ಕಣ್ಣು ಕಾಣಿಸದಿದ್ದರೂನಡೆಯುತ್ತಿದ್ದೇನೆನೀನು ಈ ಕುರುಡನಕೈಹಿಡಿಯುವೆಯೆಂದು ಸ್ತಬ್ಧ ಹೃದಯದ ಬಡಿತದಲಿನಿನ್ನ ಅರಸಿ ನಿಂತಿದ್ದೇನೆಒಳಗೆ ನೀ ರಾಣಿಯಾಗಿಜೊತೆಯಿರುವೆಯೆಂದು ಕನಸುಗಳನು ಕಾಣುವದನ್ನೆಬಿಟ್ಟಿದ್ದೇನೆನೀನೆ ಬಾಳಿನ ಹೊಂಗನಸಾಗಿಬಂದಿರುವೆಯೆಂದು… ಜೀವವನ್ನು ಅಂಗೈಯಲ್ಲಿಹಿಡಿದಿದ್ದೇನೆನೀನೆ ನನ್ನ ಜೀವವಾಗಿಇರುವೆಯೆಂದು |*************

ಭಾವಗೀತೆ

ಮೇಘಗಳ ಅಂಚಲಿ ತುಂತುರು ಹನಿಯು
ಮಣ್ಣಿನ ಘಮ್ಮನೆ ವಾಸನೆಯು ತರುತಿದೆ
ನಿನ್ನದೇ ನೆನಪಿನ ದೋಣಿಯೊಂದು
ಆಡುತ ಬಿಟ್ಟಿದ್ದು ಅಂಗಳದಿ ನೆನಪಿದೆಯೇ

ಗಜಲ್

ಮಡಿಲ ಕಂದನ ಲೀಲೆಗಳಲ್ಲಿ ತನ್ಮಯಳಾಗಿ ಮರೆತಿಹಳು ತಾಯಿ ಜಗವೆಲ್ಲ.
ಎದೆಗವುಚಿಕೊಂಡು ಹಾಲೂಡಿಸುವ ತಾಯಿಯ ತದೇಕ ನೋಟದಿ ಅದೇನ ಚಂದವೇ ನೀ

ನಮ್ಮ ನಡುವಿನ ಯುವ ಕವಯಿತ್ರಿಯರಾದ ಸ್ಮಿತಾಭಟ್ ಮತ್ತು ರೇಖಾಭಟ್ ಅವರು ಪ್ರತಿವಾರ ಸಂಗಾತಿಗಾಗಿ ಗಜಲ್ ಜುಗಲ್ ಬಂದಿ ಯಲ್ಲಿ ಬರೆಯಲಿದ್ದಾರೆ

ಪುಟ್ಟಪಾದ

ಕವಿತೆ ಪುಟ್ಟಪಾದ ಡಾ. ನಿರ್ಮಲಾ ಬಟ್ಟಲ ಪುಟ್ಟ ಪಾದಗಳಮಾಯೆಯಲ್ಲಿ ಜಗತ್ತೇ ಮರೆತಿದ್ದೆ….!!ಈ ರಾಮನಾಗಿ…..ನಾನು ಕೌಸಲ್ಯೆಯಾಗಿ….!! ಅರಮನೆ…. ,ಅಂಗಳದಲ್ಲೆಲ್ಲಾಓಡಾಡುವಾಗ ಅಡಿಗಡಿಗೆ ಅಂಗೈಯನ್ನೇ ಹಿಡಿದು ನಡೆಸಿದನಾನು ಮರೆತೆಬಿಟ್ಟೆ…ಬೆತ್ತಲೆ ಪಾದಗಳಲ್ಲಿ ಹದಿನಾಲ್ಕುವರುಷ ಕಾನನದ ಕಲ್ಲುಮುಳ್ಳುಗಳಲ್ಲಿಸುತ್ತುವಾಗ ನಿನ್ನ ಕೊಮಲ ಪಾದನೊಯುವುದೆಂದು….!! ಈ ಪಾದಗಳು …ಗರ್ಭ ಬಿಟ್ಟು ಭೂಮಿಸೊಕಲುಮರೆತೆಬಿಟ್ಟೆ ಸೆರೆಮನೆಯನ್ನಾ….!!ಈ ಶಾಮನಿಗಾಗಿನಾ ದೇವಕಿಯಾಗಿ…..!! ಕರುಳಿಗಷ್ಟೆ ಅಲ್ಲಾ ಮಮತೆಗೂ ಕತ್ತರಿಹಾಕಿ…..!!ಸಾವಿನ ಸೆರೆಮನೆಯಿಂದ ಹೊರನೂಕಿನಿನ್ನ ಬಾಲ ಲೀಲೆಗಳನೆಲ್ಲಾಯಶೋಧೆಯ ಮಡಿಲಿಗೆ ಹಾಕಿನೀ ಮತ್ತೆ ಬರುವ ದಾರಿಯನ್ನೇಕಾಯುತ್ತ ಕುಳಿತೆನಲ್ಲಾ….ನೀನೆ ದೈವವೆಂದು…..!! ಈ ಪುಟ ಪಾದದ ಮಯೆಯಲ್ಲಿಮತ್ತೆ ಕಳೆದು ಹೊಗಿದ್ದೇನೆ….!ನೆನಪುಗಳ ಆಳದಲ್ಲಿ….ನೀನೆ […]

Back To Top