Category: ಕಾವ್ಯಯಾನ

ಕಾವ್ಯಯಾನ

ಭಾವಗೀತೆ

ಮೇಘಗಳ ಅಂಚಲಿ ತುಂತುರು ಹನಿಯು
ಮಣ್ಣಿನ ಘಮ್ಮನೆ ವಾಸನೆಯು ತರುತಿದೆ
ನಿನ್ನದೇ ನೆನಪಿನ ದೋಣಿಯೊಂದು
ಆಡುತ ಬಿಟ್ಟಿದ್ದು ಅಂಗಳದಿ ನೆನಪಿದೆಯೇ

ಗಜಲ್

ಮಡಿಲ ಕಂದನ ಲೀಲೆಗಳಲ್ಲಿ ತನ್ಮಯಳಾಗಿ ಮರೆತಿಹಳು ತಾಯಿ ಜಗವೆಲ್ಲ.
ಎದೆಗವುಚಿಕೊಂಡು ಹಾಲೂಡಿಸುವ ತಾಯಿಯ ತದೇಕ ನೋಟದಿ ಅದೇನ ಚಂದವೇ ನೀ

ನಮ್ಮ ನಡುವಿನ ಯುವ ಕವಯಿತ್ರಿಯರಾದ ಸ್ಮಿತಾಭಟ್ ಮತ್ತು ರೇಖಾಭಟ್ ಅವರು ಪ್ರತಿವಾರ ಸಂಗಾತಿಗಾಗಿ ಗಜಲ್ ಜುಗಲ್ ಬಂದಿ ಯಲ್ಲಿ ಬರೆಯಲಿದ್ದಾರೆ

ಪುಟ್ಟಪಾದ

ಕವಿತೆ ಪುಟ್ಟಪಾದ ಡಾ. ನಿರ್ಮಲಾ ಬಟ್ಟಲ ಪುಟ್ಟ ಪಾದಗಳಮಾಯೆಯಲ್ಲಿ ಜಗತ್ತೇ ಮರೆತಿದ್ದೆ….!!ಈ ರಾಮನಾಗಿ…..ನಾನು ಕೌಸಲ್ಯೆಯಾಗಿ….!! ಅರಮನೆ…. ,ಅಂಗಳದಲ್ಲೆಲ್ಲಾಓಡಾಡುವಾಗ ಅಡಿಗಡಿಗೆ ಅಂಗೈಯನ್ನೇ ಹಿಡಿದು ನಡೆಸಿದನಾನು ಮರೆತೆಬಿಟ್ಟೆ…ಬೆತ್ತಲೆ ಪಾದಗಳಲ್ಲಿ ಹದಿನಾಲ್ಕುವರುಷ ಕಾನನದ ಕಲ್ಲುಮುಳ್ಳುಗಳಲ್ಲಿಸುತ್ತುವಾಗ ನಿನ್ನ ಕೊಮಲ ಪಾದನೊಯುವುದೆಂದು….!! ಈ ಪಾದಗಳು …ಗರ್ಭ ಬಿಟ್ಟು ಭೂಮಿಸೊಕಲುಮರೆತೆಬಿಟ್ಟೆ ಸೆರೆಮನೆಯನ್ನಾ….!!ಈ ಶಾಮನಿಗಾಗಿನಾ ದೇವಕಿಯಾಗಿ…..!! ಕರುಳಿಗಷ್ಟೆ ಅಲ್ಲಾ ಮಮತೆಗೂ ಕತ್ತರಿಹಾಕಿ…..!!ಸಾವಿನ ಸೆರೆಮನೆಯಿಂದ ಹೊರನೂಕಿನಿನ್ನ ಬಾಲ ಲೀಲೆಗಳನೆಲ್ಲಾಯಶೋಧೆಯ ಮಡಿಲಿಗೆ ಹಾಕಿನೀ ಮತ್ತೆ ಬರುವ ದಾರಿಯನ್ನೇಕಾಯುತ್ತ ಕುಳಿತೆನಲ್ಲಾ….ನೀನೆ ದೈವವೆಂದು…..!! ಈ ಪುಟ ಪಾದದ ಮಯೆಯಲ್ಲಿಮತ್ತೆ ಕಳೆದು ಹೊಗಿದ್ದೇನೆ….!ನೆನಪುಗಳ ಆಳದಲ್ಲಿ….ನೀನೆ […]

ಬಿಡುಗಡೆ

ಕವಿತೆ ಬಿಡುಗಡೆ ಪ್ರೊ.ರಾಜನಂದಾ ಘಾರ್ಗಿ ಭಾವಗಳ ಬಡತನವಿಲ್ಲವಿಚಾರಗಳ ಕೊರತೆಯಲ್ಲಬರಿ ಅಸಹಾಯಕತೆಪ್ರತಿರೋಧದ ಕೊರತೆ ಎತ್ತಿ ನೀಡುವ ಕೈಗಳಲ್ಲಿಮೌಲ್ಯಗಳ ಸಂಕೋಲೆಎದ್ದುಬರಲು ಕಾಲುಗಳಲ್ಲಿಜವಾಬ್ದಾರಿಗಳ ಬೇಡಿ ಸುತ್ತಲೂ ಮನುಸ್ಮೃತಿಬರೆದ ಲಕ್ಮಣರೇಖೆಜ್ವಾಲೆಗಳಾಗಿ ಉರಿಯುತಕಾಲುಗಳ ಸುಡುತಿದೆ ಎದುರಿನಲಿ ತುಂಡಾದಮಾನವೀಯತೆ ನರಳುತಿದೆಸಾಮಾಜಿಕ ಕಟ್ಟಳೆಗಳಹರಿತ ಖಡ್ಗ ಪ್ರಹಾರಕ್ಕೆ ಸಬಲೀಕರಣದ ಮಂತ್ರಘೋಷಣೆಗಳ ಭಾಷಣಗಳಬುರುಡೆಗಳು ಉರುಳುತ್ತಿವೆಮರಿಚಿಕೆಗಳು ಕೈ ಬೀಸುತ್ತಿವೆ ಎಟುಕಿ ಮಾಯವಾಗುತ್ತಿರುವಬಿಡುಗಡೆಯನರಸುತನಡೆದಿರುವೆ ಬುದ್ದ ಬಸವಣ್ಣರೆಡೆಗೆಗಾಂಧಿಜಿಯ ಸ್ವಾತಂತ್ರದೆಡೆಗೆ.

ನಾನು ಭೂಮಿ , ನೀನು?

ಕವಿತೆ ನಾನು ಭೂಮಿ , ನೀನು? ನಾಗರಾಜ್ ಹರಪನಹಳ್ಳಿ ನನ್ನ ಎದೆ ಈಗ ಭೂಮಿಅಲ್ಲಿ ಬೆಳೆದ ಮರ ನೀನುಮೌನಿ ನೀಬೇರುಗಳು ನನ್ನೊಳಗೆ ಪಿಸುಗುಡುತ್ತಿವೆ ; ಪ್ರೇಮದ ಹೂ ಮರದ ತುದಿ ತುದಿಗೆ ಅರಳಿದೆ ನೋಡುಯಾರೋ ಹೂಗಳ ಮನೆಗೊಯ್ಯಯ್ದರು,ಇನ್ನಾರೂ ಸುಂದರಿ ಮುಡಿದು , ತನ್ನ ಗೆಳೆಯನ ಜೊತೆ ಕುಳಿತು ವೈಯಾರದ ಮಾತಾಡಿದಳು ; ಇಲ್ಲಿ ,‌ಈ ಮರದ ಬೇರು ನಸು ನಕ್ಕಿತು: ನಾನು ಆಕಾಶ ,ಅಲ್ಲಿ ಚಲಿಸುವ ನೀನುಆಕಾಶದಷ್ಟಗಲ ಅರಳಿದ ಬೆಳದಿಂಗಳುಬೆಳದಿಂಗಳ ಉಂಡ ಭೂಮಿಯ ಜನಅವರೀಗ ನಮ್ಮ ಪ್ರೇಮವ […]

ಸ್ಥಾನ ಪಲ್ಲಟ

ಕವಿತೆ ಸ್ಥಾನ ಪಲ್ಲಟ ಡಾ. ನಿರ್ಮಲಾ ಬಟ್ಟಲ ದಶಕಗಳೆ ಕಳೆದುಹೋದವುಒಲೆ ಊದುವುದು ನಿಂತುಹೋಗೆ ಹಿಡಿಯುವುದು ನಿಂತುಸುಡುವುದು ನಿಂತಿಲ್ಲ…‌! ಇಗೋ….ಎಸರಿಡುವುದೆಮರೆತುಹೋಗಿದೆಪ್ರೆಶರ್ ಕುಕ್ಕರಿನಲ್ಲಿ ಹಾಕಿಕೂಗು ಹೋಡೆಸುವುದಷ್ಟೆಒತ್ತಡದಲಿ ಬೇಯುವುದು ನಿಂತಿಲ್ಲ…! ರೊಟ್ಟಿ ಬೇಯಿಸುವಾಗಮುಂಗೈಗೆ ಬೀಳುವಹೆಂಚಿನ ಬರೆಗಳಿಗ ಕಂಡಿಲ್ಲಾ…ಕಾಣದ ಬರೆಗಳು ಮನಸ ತುಂಬಾಬಿಳುವುದು ನಿಂತಿಲ್ಲ….! ಮನೆಯೊಡತಿ ಎಂದುಹೊರಗೆ ಬಿಗೀದರುಒಳ ಒಳಗೆ ದಾಸ್ಯ ಒಪ್ಪಿ ಕೊಳ್ಳುವುದು ನಿಂತಿಲ್ಲಾ…! ಏನೆಲ್ಲಾ ಬದಲಾಗಿಏನೆನೋ ಹೊಸದಾಗಿಬಂದು ಹಳೆಯದೆಲ್ಲ ಬದಲಾದರೂಬಸಿರುಹೊರುವುದು ನಿಂತಿಲ್ಲ….!! ಆಕಾಶಕ್ಕೆ ಹಾರಿದರೂಪಾತಾಳಕ್ಕೆ ಇಳಿದರೂಕುಕ್ಕುವ ಮುಕ್ಕುವದಾಳಿಗಳಿನ್ನು ನಿಂತಿಲ್ಲ….! ಹೆಣ್ಣೆಂದು ಪ್ರತಿ ಘಳಿಗೆಹಣ್ಣು ಮಾಡುವ,ಎತ್ತರಿಸಿದ ಧ್ವನಿ ಕತ್ತರಿಸಿಭ್ರೂಣಗಳ ಹೂಳುವುದುನ್ನುನಿಂತಿಲ್ಲ….! *******************************

ಗಜಲ್

ಕದಿಯದ ಒಲವ ನಕ್ಷತ್ರ ಬಾಳ ಬಾಂದಳದ
ಹೊಳೆಯಲಿ
ಮಧುರದಾಲಾಪನೆಗೆ ಮಿಡಿದು ಚಿಮ್ಮಿಸಿರುವೆ
ನೀಲಿ ಕೊಡೆ,

ತಣಿಸಬಾರದೇ

ಮೋಹಕ ಆಟಕೆ ಮಧುರ ನಿನಾದಕೆ,
ಮೈಯೊಡ್ಡಿ ನಿಂದಿರುವ ವ್ರಕ್ಷ ಸಾಲು
ಪುಷ್ಪಗಳ ವರ್ಣಚಿತ್ತಾರವ ಬಣ್ಣಿಸಿದಂತಿದೆ,

Back To Top