ಗಜಲ್
ನಿನ್ನ ಕಿರಿಗೆಜ್ಜೆ ಪಾದಗಳ ಸಪ್ಪಳವನ್ನ ಕಿವಿಗಳಷ್ಟೇ ಕೇಳು ವಂತಿರು ಗೆಳತಿ
ಒಲವು ಪಲಕುಗಳ ಮಾತುಗಳ ಬೇರೆಯಾರ ಎದೆಗೂ ಕೇಳಿಸದಿರು ಗೆಳತಿ
ಕಾವ್ಯ ಕಾರುಣ್ಯ
ಒದ್ದೆ ನೆಲದ ಘಮಲಾಗುವ,
ನದಿಯಗಲದ ತಂಪಾಗುವ;
ಕಡಲೊಡಲ ಉಪ್ಪಾಗುವ ನೀರಂತೆ ..
ಕವಿತೆ ಹುಟ್ಟುವಾಗ
ಕವಿತೆ ಕವಿತೆ ಹುಟ್ಟುವಾಗ ಅಬ್ಳಿ,ಹೆಗಡೆ ಸೂರ್ಯ,ಸಾಯುತ್ತಿದ್ದ.ಕಾಯುವಹಾಗಿಲ್ಲ,ತಿರುಗಿ ಹುಟ್ಟುವವರೆಗೆ.ಕತ್ತಲು ಕಳೆಯುವವರೆಗೆ.ಪ್ರಸವವೇದನೆ ತಾಯಿಗೆ–ಭಯ,ಆತಂಕ,ಸಂತಸಒಟ್ಟೊಟ್ಟಿಗೆ,ಹೊಟ್ಟೆಯೊಳಗೆಕೈ,ಕಾಲಾಡಿಸುವ ಪುಟ್ಟ-ಕವಿತೆ,ದೈತ್ಯ ಪ್ರಸವವಾದರೆ ಅಳಿವು,ಉಳಿವಿನ ಪ್ರಶ್ನೆ.ತಂದೆಯಾರೊ ಗೊತ್ತಿಲ್ಲ.ವ್ಯಭಿಚಾರಿಣಿ ಪಟ್ಟ ಗಟ್ಟಿಆಗುವ ಆತಂಕ,ಒಳಗೊಳಗೆ,ಅಸಾಧ್ಯ-ನೋವಿನಲ್ಲೂ ತಾಯ್ತನ-ದ ಖುಷಿ,ಅಪ್ಯಾಯಮಾನ.ಸುಖ ಪ್ರಸವ ಕತ್ತಲಲ್ಲಿ,ಕಣ್ತೆರೆಯಬೇಕು-ಮುದ್ದು ಕವಿತೆ,ಹುಟ್ಟುವಹೊಸ ಬೆಳಕಲ್ಲಿ.ತನ್ನ,ಪುಟ್ಟ,ಪಿಳಿ,ಪಿಳಿಕಣ್ಣುಗಳಿಂದ ನೋಡಬೇಕು,ನಿಚ್ಚಳ ಬೆಳಕಲ್ಲಿ,ಹೊಚ್ಚ ಹೊಸ ಜಗತ್ತನ್ನು.ಮುಗಿಲೆತ್ತರಕ್ಕೆ ಎದ್ದುನಿಲ್ಲಬೇಕು ನೀಳಕಾಯಳಾಗಿ.ತಾಯ್ತನದ ಸಾರ್ಥಕತೆಇರುವದೇ ಇಲ್ಲಿ.ಭಯ,ಆತಂಕ,ನೋವು,ಸಂತಸ ಎಲ್ಲದರಸಾರ್ಥಕತೆಯೂ ಇಲ್ಲೆ.ಕತ್ತಲಲ್ಲಿ ಹುಟ್ಟಿದಕವಿತೆಯಲ್ಲಿ. **************************
ಮಾಯಾಮೃಗ
ಕವಿತೆ ಮಾಯಾಮೃಗ ಡಾ.ಕಾತ್ಯಾಯಿನಿ ಕುಂಜಿಬೆಟ್ಟು ಸುಡು ಬಿಸಿಲಲ್ಲಿ ಅಲೆದಾಡಿದಧೂಳು ಮೈಯ ಗಾಳಿಗೆ ಜ್ವರವೇರಿಇಳಿದಿದೆ ಹರಿವ ನೀರಿನಲೆಗೆ ಗಾಳಿ ಮೈಕೊಡವಿದಲ್ಲಿಉದುರಿದ ಬಕುಳ ಹೂವಿಗೆ ವಿರಹ ಬೆಂಕಿಹಾ! ಹಾ! ಎನುತ ತುಂಬಿಯ ಚುಂಬನದ ನೆನಪಲ್ಲಿ ಮೈನೆನೆದುಅಲೆಗಳಿಗೆ ಮೈಯೊಡ್ಡಿ ತೇಲಿ ಹೋಗಿದೆ. ಮರಗಿಡ ಬಳ್ಳಿಗಳ ಮೈತುಂಬಮದನಶರ ನಾಟಿ ನೇಸರಗೆ ಬಸಿರಾಗಿಮೊಗ್ಗುಗಳ ಹೆತ್ತು ತೊಟ್ಟುಗಳ ತೊಟ್ಟಿಲಲಿ ತೂಗಿಕೆಂಪು ಚಿಗುರು ಬೆರಳುಗಳಹಸಿಮೈ ಬಾಣಂತಿಕೇಶಗಳ ಬಿಚ್ಚಿ ಮಳೆನೀರ ಕಾದಿದೆ ಚಿತ್ರಗಳು ತಮ್ಮನ್ನು ತಾವೆಬರೆದುಕೊಂಡಂತೆಹಕ್ಕಿಗಳು ರೆಕ್ಕೆ ಬಿಡಿಸಿ ಚಿಮ್ಮಿಬಾಂದಳವ ಬಿಳಿ ಹಾಳೆ ಮಾಡಿವೆಅವನು ಬಿಡಿಸಿದ ಚಿತ್ರದಂಥಪ್ರಕೃತಿಗೆ ಜೀವ […]
‘ ರೂಮಿ ನಿನ್ನ ಸೆರಗಿನಲ್ಲಿ…. ‘
ಕಾರಣ
ನಮಗೆ ದುರುದ್ದೇಶವೇ ಇರಲಿಲ್ಲ
…… ಮೂರ್ಖ ಮನುಷ್ಯರಿಗೆ ಪ್ರೀತಿ ಅರ್ಥವಾಗುವುದಿಲ್ಲ;
ಗಜಲ್
ಪ್ರಕೃತಿಯ ಸಹಜ ಸುಂದರ ಸೌಂದರ್ಯವ ಆರಾದಿಸುವೆನು
ಅಂದಗೆಡಿಸೊ ಆಲೋಚನೆಯಲಿ ಸುರಿಬೇಡ ಬಣ್ಣ
ಮಾಯೆ
ಯಾರೊಳಗೆ
ಯಾರು
ಮಾಯೆ
ನಾನರಿಯೆ….
ಕವಿತೆಯೇ ಎಚ್ಚರ, ಇದು ಅತ್ಯಾಚಾರಿಗಳ ಕಾಲ..
ತಾಯೇ,
ಎದೆಗೆ ತಟ್ಟಿದ ನೋವ
ತುದಿ ಬೆರಳಿಗಂಟಿಸಿಕೊಂಡು ಬದುಕಿ ಬಿಡು
ನಿಜದ ಕೆಂಡವ ಉಡಿಯೊಳಗಲ್ಲಲ್ಲ
ಅಂಗೈಯೊಳಗಿಟ್ಟುಕೊಂಡು ಉಸಿರಾಡು
ಗಜಲ್
ಗಜಲ್ ರತ್ನರಾಯಮಲ್ಲ ಅಳಬೇಕು ಎಂದಾಗಲೆಲ್ಲ ಕನ್ನಡಿಯ ಮುಂದೆ ನಿಲ್ಲುವೆನಗಬೇಕು ಅನಿಸಿದಾಗಲೆಲ್ಲ ಸಮಾಧಿಯ ಮುಂದೆ ನಿಲ್ಲುವೆ ಎಲ್ಲರೂ ಬೇಕೆನಿಸಿದಾಗಲೆ ಯಾರೂ ಬೇಡವೆನಿಸುತ್ತಾರೆಶಾಂತಿ ಬಯಸಿದಾಗಲೆಲ್ಲ ಮಸಂಟಿಗೆಯ ಮುಂದೆ ನಿಲ್ಲುವೆ ಬದುಕು ಆಟವಾಡುತಿದೆ ಹೆಜ್ಜೆ ಹೆಜ್ಜೆಗೂ ನನ್ನ ಜೊತೆಯಲ್ಲಿಬಾಳು ಬೇಡವೆನಿಸಿದಾಗಲೆಲ್ಲ ಗೋರಿಯ ಮುಂದೆ ನಿಲ್ಲುವೆ ಉಸಿರಾಡಲು ನನ್ನ ಗಾಳಿಗಾಗಿ ನಾನು ಹುಡುಕುತಿರುವೆ ಇಲ್ಲಿಪ್ರೀತಿ ಬೇಕೆನಿಸಿದಾಗಲೆಲ್ಲ ನಿನ್ನ ಮನೆಯ ಮುಂದೆ ನಿಲ್ಲುವೆ ಜೀವನವು ತೂಗುಯ್ಯಾಲೆಯಲ್ಲಿ ಕಣ್ಣಾಮುಚ್ಚಾಲೆ ಆಡುತಿದೆಸಾಯಬೇಕು ಎನಿಸಿದಾಗಲೆಲ್ಲ ‘ಮಲ್ಲಿ’ಯ ಮುಂದೆ ನಿಲ್ಲುವೆ ************************************
ಗಜಲ್
ಕೊಂಡು ತಂದ ಸೂಜಿ ಚುಚ್ಚುತ್ತದೆಂದು ಮಾಲಿಗೂ ಗೊತ್ತು
ಪುಷ್ಪ ಪಲ್ಲಂಗದೊಳಗಿಟ್ಟು ಮಲಗು ಮಲಗು ಎಂದೆನ್ನುತ್ತಾರೆ ನೀನು ಸುಮ್ಮನಿರಬೇಕು