Category: ಕಾವ್ಯಯಾನ

ಕಾವ್ಯಯಾನ

ಗಜಲ್

ಗಜಲ್ ಅರುಣಾ ನರೇಂದ್ರ ಹುಡುಗ ಯಾಕ ನೀ ಹಿಂಗ ಮುಸುಮುಸು ನಗತೀದಿನೀ ಸುಮ್ಮನಿದ್ರೂ ನನಗ್ಯಾಕೋ ನಕ್ಕಂಗ ಕಾಣತೀದಿ ನೀ ಬಿಳಿ ಬಟ್ಟಿ ಉಟಗೊಂಡ್ರ ಬೆಳ್ಳಕ್ಕಿ ಬೆದರತಾವುಗಾಂಧಿ ಟೊಪ್ಪಿಗಿ ಹಾಕ್ಕೊಂಡು ಮದುಮಗನಾಗೀದಿ ಸೋದರ ಮಾವನೆಂದು ಸಲಿಗೀಲಿ ಮಾತಾಡೀನಿಕಣ್ಣ ಕಾಡಿಗಿ ಕದ್ದು ನೀ ಕೊಳ್ಳೆ ಹೊಡದೀದಿ ಬಗಲಿಗೆ ಬಿಂದಿಗೆ ಇಟ್ಟು ಬಳುಕಾಡಿ ಬರುತ್ತಿದ್ದೆಬಾಯಾರಿ ಬಂದು ನೀ ಬೊಗಸೆ ಒಡ್ಡಿ ಕಾಡೀದಿ ಉರಿಬಿಸಿಲ ಬೇಗೆಯಲಿ ಹರದಾರಿ ನಡೆದೀನಿಅರುಣಾ ಎಂತೆಂದ್ಯಾಕ ಕೂಗಿ ಕೂಗಿ ಕರೆದೀದಿ.. *************************************

ನನ್ನಜ್ಜ…..

ಕವಿತೆ ನನ್ನಜ್ಜ….. ಕೋಟಿಗಾನಹಳ್ಳಿ ರಾಮಯ್ಯ ಇರಬೇಕು ಇದ್ದಿರಲೇಬೇಕುಅಜ್ಜನೊಬ್ಬ ನನಗೆನಿತ್ಯ ಮುದ್ದೆ ಗೊಜ್ಜಿಗೆನೋಡಿದವನಲ್ಲ , ಆಡಿದವನಲ್ಲ , ಕಾಡಿದವನಲ್ಲರೂಪ-ಘನರಹಿತ ಮಳೆ ಕಾಡಿನ ಶಬ್ದ ಮಾತ್ರಮಳೆ ಮಾತ್ರ ,ಜಡಿಮಳೆ ಮಾತ್ರಸುರಿಮಳೆ ಮಾತ್ರಸುರಿತುತ್ತಲೇ ಇದೆ ಸಥದಕ್ಕದಲ್ಲ ದಣಿದು ದಾವಾರಿದಕಿರು ನಾಲಗೆಗೆ ಕಿರು ತುಂತುರ ಹನಿನಡೆದೇ ಇದೆ ಥಕ ಥೈಯ್ಯಿ ದೇವಿ ಭಾಗವತಕೇಳಿಯೂ ಕೇಳದಂತೆನೋಡಿಯೂ ನೋಡದಂತೆಹಗಲೆನ್ನದೆ ಇರುಳೆನ್ನದೆ ನಡದೇ ಇದೆ ಚಂಡಮದ್ದಳೆನಡೆದಿದ್ದಾನೆ ನನ್ನಜ್ಜ ನನ್ನ ಕುರುಹ ಕಂಡವನಂತೆ ಗತಅರಬ್ಬಿನ ಮರಳುಗಾಡಲಿಒಂಟೆ ಕೊರಳ ಗಂಟೆ ಕಿಂಕಿಣಿಯಲಿಗೊತ್ತಿದ್ದೂ ನಾನು ಇಲ್ಲಿರುವೆ ಎಂದುಕೈಗೆ ಸಿಗದಂತೆ ಹೊನ್ನೇರಿನಲಿಬಂದಿದೆ ಬಿತ್ತನೆ […]

ತಿಮಿರ

ಕವಿತೆ ತಿಮಿರ ಡಾ. ಅಜಿತ್ ಹರೀಶಿ ಸೂಡಿ ಹಿಡಿದು ಓಡಾಡುವ ಕಾಲದಲ್ಲಿಕೊಳ್ಳಿ ದೆವ್ವಗಳು ಕಾಲಿಗೊಂದು ತಲೆಗೊಂದುಹರದಾರಿ ನಡೆದು ಸಾಗುವ ದಿನಗಳಲ್ಲಿಅವುಗಳ ಜಾತ್ರೆ ರಸ್ತೆ ಪಕ್ಕದಲ್ಲಿ ಕಳೆದ ಬಾಯಿ ಮುಚ್ಚದಂತೆ ಲಾಟೀನು-ಬೆಳಕಿನಲ್ಲಿ ಕೇಳಿ ಸುದ್ದಿ ಹೆದರಿಕೆ ಬೇಜಾನುತಿರುಚಿದ ಪಾದ ಗುರುತರವಾದ ಗುರುತುದೆವ್ವ ಕಂಡವನಿಂದ ಇತರರಿಗೆ ತರಬೇತು! ಕತ್ತಲಿನಲ್ಲಿ ಇಣುಕುವ ಬೆಳಕು, ಬರುವ ಶಬ್ದಎಂತಹವರನ್ನೂ ಮಾಡುವುದು ಸ್ತಬ್ಧಎಲ್ಲರೊಳಗೊಬ್ಬ ಕವಿ, ಆಗ ರವಿಯಿಲ್ಲಕಲ್ಪನೆಗೆ ಕಾಲು ಬಾಲ ಗಲ್ ಗಲ್, ಸರ ಪರಚಿತ್ತದಲ್ಲಿ ಮೂಡುವ ಚಿತ್ರಗುಂಡಿಗೆಯಲ್ಲಿ ನಡುಕಆಕ್ರಮಿಸುವ ಆತಂಕ ಅಕ್ರಮಕ್ಕೆ ಸೂಕ್ತ ಅಮಾವಾಸ್ಯೆವಿದ್ಯುತ್ […]

ದಾಖಲೆಗಳಿವೆ

ಕವಿತೆ ದಾಖಲೆಗಳಿವೆ ವಸುಂಧರಾ ಕದಲೂರು ಸುಧಾರಕರನು ಹುಚ್ಚರೆಂದುಕರೆದು ಥಳಿಸಿದುದಕೆ, ಕೂಡುರಸ್ತೆಗಳ ನಡುವಲ್ಲಿ ಹೀಗಳೆದುಕಲ್ಲುತೂರಿ ಕಟುನುಡಿ ಮಳೆಗರೆದು,ತೋಯಿಸಿ ನೋಯಿಸಿದುದಕೆ. ಗಾಸೀಪು ತೂಪಾಕಿಗಳ ತೂಫಾನುಸಿಡಿಸಿ ಗಡೀಪಾರು ಮಾಡಿಸಿ; ಗುಲ್ಲೆಬ್ಬಿಸಿ ಗಲ್ಲಿಗೇರಿಸಿ, ಗುಂಪುಗುಂಪಾಗಿ ಗುಟ್ಟು ಮಾಡಿ; ಒಳಸಂಚು ಮಾಡಿ ಮೂಲೆ ಗುಂಪಾಗಿಸಲು ಕಾರ್ಯ ಗೇಯ್ದದದಕೆ. ಇದರ ನಡುವೆಯೂ ಅವರು, ಅವರ ವರ್ತಮಾನಗಳಲಿ ದಂತಕತೆಗಳಾಗಿ, ಭವಿಷ್ಯತ್ತಿನಲಿ ಹುತಾತ್ಮರಾಗಿ ಇತಿಹಾಸದ ಪುಟಗಳಲಿ ಮಹಾತ್ಮರಾಗಿ ಸೇರಿಹೋದುದಕೆ ಸಾಕ್ಷ್ಯಗಳಿವೆ.. ********************************************

ಕವಿತೆಯ ಜೀವನ

ಕವಿತೆ ಕವಿತೆಯ ಜೀವನ ಟಿಪಿ.ಉಮೇಶ್ ಅಸಹಾಯಕ ಅಕ್ಷರದ ಕಾಲುಗಳ ಊರುತ್ತಾಪೇಲವ ಮುಖ ಚಿಹ್ನೆಗಳ ಹೊತ್ತು ಬಂದವುಪ್ರೇಯಸಿಯ ಮನೆಗೆ;ಭಿಕ್ಷಾಂದೇಹಿ!ಕೆದರಿದ ಕೂದಲು ಕೆಸರಾದ ಕೈಕಾಲು ಹರಿದ ಬಟ್ಟೆಗಳ ಮುಗ್ಗಲು ನಾರುತ್ತಿರುವಕವಿತೆಗಳ ಕಂಡೊಡನೆ;ಪ್ರೇಯಸಿ ಅನ್ನ ಹಾಕುವುದಿರಲಿಒಂದು ಹಸನಾದ ಮಾತುಹಸನ್ಮುಖ ನಗುವನ್ನು ತೋರದೆದಡಾರನೆ ಕದವಿಕ್ಕಿಗೊಂಡು ಒಳ ಹೋದಳು!ಮರುದಿನಕವಿತೆಪತ್ರಿಕೆಯಲ್ಲಿ ರಾರಾಜಿಸುತ್ತಿದೆ!!ಬಹುಖ್ಯಾತಿಗೊಂಡು ಮನೆ ಮನ ಬೀದಿ ಓಣಿಗಳಲ್ಲಿ ಕುಣಿಯುತ್ತಿದೆ!ಪ್ರೇಯಸಿ ದಾರಿಗಿಳಿದು ಬಂದವಳೇ;ಕವಿತೆಯ ಬೆನ್ನ ನೇವರಿಸಿದಂತೆ ಮಾಡಿಜುಟ್ಟು ಹಿಡಿದುಕೊಂಡುದರದರನೆ ಮನೆಯ ಒಳಗೆ ಎಳೆದೊಯ್ದಳು! ಬೀದಿಯಲ್ಲಿ ನಿಶ್ಯಬ್ಧ!ಮನೆಯಲ್ಲಿ ಸಶಬ್ಧ! ಅವರ ಮನೆ ಕತೆ ನಮಗೆ ನಿಮಗೇಕೆಲೋಕದ ಡೊಂಕು ಕೊಂಕು […]

ಅಮೃತಾ ಮೆಹಂದಳೆ ಹೊಸ ಕವಿತೆ

ಕವಿತೆ ಅಮೃತಾ ಮೆಹಂದಳೆ ಹೊಸ ಕವಿತೆ ಕೋಮುದಂಗೆಗೆಆಕ್ರೋಶಗೊಳ್ಳುವ ನಾನುಸಹಿಷ್ಣುತೆಯ ಕವಿತೆ ಬರೆವೆಸಾಮಾಜಿಕ ಕಾಳಜಿಯಬಗ್ಗೆ ಬರೆವ ನಾನುಇಂದು ನೋಡಬೇಕಾದಹೊಸ ಚಿತ್ರದ ಪಟ್ಟಿ ಮಾಡುವೆಸೀರೆ ಚಾಲೆಂಜ್ ಗೆಸಿಡಿಮಿಡಿಗೊಳ್ಳುವ ನಾನುಸೆಲ್ಫೀಯಲ್ಲಿ ಮೈಮರೆವೆಹಸಿದವರ ವಿಡಿಯೋಗೆಕಣ್ಣೀರ್ಗರೆಯುವ ನಾನುಪಾನಿಪುರಿಗೆ ಪುದಿನಾ ಜೋಡಿಸುವೆರಾಜಕೀಯ ದೊಂಬರಾಟಕ್ಕೆಅಸಹ್ಯಿಸಿಕೊಳ್ಳುವ ನಾನುಭಾಷಣಕ್ಕೆ ಕೈತಟ್ಟುವೆಉಚಿತ ಭಾಗ್ಯಗಳ ಬಗ್ಗೆಮೆಚ್ಚುಗೆ ತೋರುವ ನಾನುಪರಿಣಾಮಗಳಿಗೆ ಕುರುಡಳಾಗುವೆಬೇಕಿಂಗ್ ನ್ಯೂಸ್ಹಂಚಿಕೊಳ್ಳುವ ನಾನುಹಕ್ಕಿಗಾಗಿ ನೀರಿಡಲು ಮರೆವೆಆರ್ಥಿಕ ಮುಗ್ಗಟ್ಟಿಗೆಚಿಂತಿತಳಾಗುವ ನಾನುಬಾರದ ಪಾರ್ಸೆಲ್ಲಿಗೆ ಮರುಗುವೆನಾಳಿನ ಭವಿಷ್ಯಕ್ಕೆಸಿನಿಕಳಾಗುವ ನಾನುಹಪ್ಪಳಕ್ಕೆ ಅಕ್ಕಿ ನೆನೆಸುವೆಆಧುನಿಕ ಜೀವನಶೈಲಿಗೆಹಿಡಿಶಾಪ ಹಾಕುವ ನಾನುಪಿಜ್ಜಾ ಆಫರಿಗೆ ಕಣ್ಣರಳಿಸುವೆದೇಶಪ್ರೇಮದ ರೀಮೇಕ್ ಹಾಡಿಗೆಲವ್ ಇಮೋಜಿ ಒತ್ತುವ ನಾನುಮೆಚ್ಚಿನ ನಟನ […]

ಒಲವಿನ ಭೇಟಿ

ಕವಿತೆ ಒಲವಿನ ಭೇಟಿ ಆಸೀಫಾ ಮಂದಹಾಸದ ಮುಖವೇನೋ ಶಾಂತವಿತ್ತುಕಂಗಳು ಸಾವಿರಸಾವಿರ ಮಾತು ಹೇಳುತ್ತಿತ್ತುಮನದ ತಲ್ಲಣಗಳು ಮುಖವಾಡ ಧರಿಸಿತ್ತುಅಸಹಾಯಕತೆ ನನ್ನಲಿ ತಾಂಡವಾಡುತಿತ್ತು ಪರಿಚಿತ ಸ್ಪರ್ಷವೊಂದು ನನ್ನ ಕರೆದಂತಿತ್ತುಅಧರದ ಸಕ್ಕರೆ ಸವಿವ ಬಯಕೆಯುಇರಿದಿರಿದು ತಿವಿದು ಕೊಲ್ಲುವಂತಿತ್ತುಮತ್ತದೇ ಅಸಹಾಯಕತೆ ಕಾಡುತಿತ್ತು ನೋಡಿದಷ್ಟೂ ನೋಡಬೇಕೆನಿಸುವ ನೋಟಕಣ್ಣುಕಣ್ಣಲ್ಲೇ ಸಂಭಾಷಣೆಯ ಸವಿಯೂಟಸನಿಹ ಸರಿದುಹೋದಾಗ ಹೆಚ್ಚಿದ ಪುಳಕಜಗಕೆ ಕಾಣದು ಪ್ರೇಮದ ವಿಚಿತ್ರ ಹೋರಾಟ ಬಹುದಿನಗಳ ನಂತರದ ಮುಖಾಮುಖಿ ಭೇಟಿಹಸಿರಾಗಿಸಿತು ಕಳೆದ ಕ್ಷಣಗಳ ಅಮೃತ ಸ್ಮೃತಿತಣಿಯಿತು ಅವನ ಕೊರಗಿನ ಹಂಬಲದ ಸ್ಥಿತಿಅಂತೂ ಒಲವಿಗೆ ಆಯಿತು ಒಲವಿನ ಭೇಟಿ **********

ಗಜಲ್

ಗಜಲ್ ರೇಮಾಸಂ ಹಳೆಯ ಹೊಸತುಗಳ ಜಗಳದಲಿ ಬೆಸೆದಿರಲಿ ಸಮರಸ/ಬೆರೆತು ಅರಿತ ಬಾಳುವೆಯಲಿ ಜಿನುಗುತಿರಲಿ ಮಧುರಸ// ಹಮ್ಮು ಬಿಮ್ಮಿನ ಜಗ್ಗಾಟದಲಿ ನುಗ್ಗಾಗದಿರಲಿ ಜೀವನ/ಪ್ರೀತಿಯು ಸವೆಯಲು ಬಿಡದೆ ಚಿಮ್ಮುತಿರಲಿ ಪ್ರೇಮರಸ// ಹೂಡಿಕೆಯಾಗಲಿ ಅನುರಾಗದ ರಿಂಗಣವು ಅನುದಿನವು/ನೋವುಗಳು ಬೇವು ಬೆಲ್ಲದಂತೆ ಸುರಿಯುತಿರಲಿ ನವರಸ// ವಿರಸವು ತರುವ ಮಾತಿಗೆಲ್ಲ ವಿರಾಮದ ಚಿಹ್ನೆ ಇಡುತಿರಲಿ/ಸರಸ-ಸಲ್ಲಾಪದ ಪದಗಳು ಪುಟಿದು ಚೆಲ್ಲುತಿರಲಿ ಗಾನರಸ// ತಾಯಿಯ ಸೆರಗು ಹೊದಿಕೆಯಂತಿರಲಿ ಪ್ರೇಮದ ಚಪ್ಪರವು/ಗಂಧದಂತೆ ಜೀವಗಳು ಪಸರಿಸುತ ತೇಯುತಿರಲಿ ದ್ರವ್ಯರಸ/ ***************************

ಮಣ್ಣು ,ಅನ್ನ ಮತ್ತು ಪ್ರಭು

ಕವಿತೆ ಮಣ್ಣು ,ಅನ್ನ ಮತ್ತು ಪ್ರಭು ಬಿ.ಶ್ರೀನಿವಾಸ ನೆಲಕೆ ಬಿದ್ದರೆ ಅನ್ನದಾತದಂಗೆಯೇಳುತ್ತದೆ ಅನ್ನ * ಮಕ್ಕಳ ಮುಂದೆ ಅಪ್ಪ ಅಳಬಾರದು ಅಪ್ಪನ ಮುಂದೆ ಮಕ್ಕಳು ಸಾಯಬಾರದು ಪ್ರಭುಗಳ ಮುಂದೆ ಪ್ರಜೆಗಳು ನರಳಬಾರದು ಸುಳ್ಳಾಯಿತುಲೋಕರೂಢಿಯ ಮಾತು. * ಮಣ್ಣಿನೆದೆಯ ಮೇಲೆಯೆ ಇದ್ದವು ಪಾದಗಳುನೆಲದ ಮೇಲಿರುವ ತನಕ ಅದೇ ಮಣ್ಣಿನ ಮೃದು ಪಾದಗಳುನೆಲದಡಿಗೆ ಸೇರಿದವನ ಎದೆಯ ಮೇಲೆ * ಮಣ್ಣಿಗೂಅಪ್ಪನಿಗೂ ಸಂಬಂಧ ಕೇಳುವಿರಿ ನೀವು ಇದೆಅಜ್ಜ-ಮೊಮ್ಮಗನ ಸಂಬಂಧ! * ಉಣ್ಣುವ ಅನ್ನದ ಕಣ್ಣುಎದುರಿಸಲಾಗದ ಕೊಲೆಗಾರ ಹೇಡಿಹೇಡಿಯೆಂದು ಕಿರುಚಾಡುತ್ತಾನೆ * ಕಳಚಿ […]

ತೀಡುವ ತಂಗಾಳಿಯಲ್ಲಿ ನಿನ್ನ ದನಿಯು ಕೇಳಿದೆ

ಕವಿತೆ ತೀಡುವ ತಂಗಾಳಿಯಲ್ಲಿ ನಿನ್ನ ದನಿಯು ಕೇಳಿದೆ ನಾಗರಾಜ್ ಹರಪನಹಳ್ಳಿ. ಆಗೋ ನೋಡುಈ ಉರಿಬಿಸಿಲಲ್ಲಿ ಸಮುದ್ರ ನಿದ್ದೆ ಹೋಗಿದೆ ||ತೀಡುವ ತಂಗಾಳಿಯಲ್ಲಿ ನಿನ್ನ ದನಿಯು ಕೇಳಿದೆ|| ತಂಗಾಳಿ ನಿನ್ನ ಪ್ರೀತಿಯ ಮಿಂದು ಬಂದಿದೆ ||ಈ ಕಾರಣಮರಗಿಡಗಳು ಹೂ ಬಟ್ಟೆ ತೊಟ್ಟಿದೆ ||ಮೈತುಂಬಿದ ಮಾವುಬಯಲಲಿ ನಿಂತು ನಕ್ಕಿದೆ || ನೀನಲ್ಲಿ ಕೈ ತುಂಬಾ ಬಳೆ ತೊಟ್ಟು ||ತೆಳು ನೀಲಿ ಮಿಶ್ರಿತ ಹಳದಿ ಬಣ್ಣದ ರೇಶಿಮೆ‌ ಸೀರೆಯುಟ್ಟು ||ಹೊಸದಾಗಿ ತಂದ ಬಂಗಾರದ ಓಲೆ ತೊಟ್ಟು ||ನಿನ್ನ ನೀನೇ ಕನ್ನಡಿಯಲ್ಲಿ ದೃಷ್ಟಿ […]

Back To Top