Category: ಕಾವ್ಯಯಾನ

ಕಾವ್ಯಯಾನ

ನಿನ್ನ ಪಾಪದ ಹೆಣ

ಕವಿತೆ ನಿನ್ನ ಪಾಪದ ಹೆಣ ಬೆಂಶ್ರೀ. ರವೀಂದ್ರ ಹೇಳಿ ಬಿಡಬಹುದಿತ್ತು ಈ ಮಾತುಗಳಪ್ರತಿಮೆ ರೂಪಕಗಳಲ್ಲಿಕತೆಯೊಂದರ ಮುಸುಕಿನಲ್ಲಿಪುರಾಣಗಳ ಪುಣ್ಯಕತೆಗಳ ಅವತರಣಿಕೆಗಳಲಿಅಥವಾಆಧುನಿಕತೆಯ ಹೆಸರಿನಲಿಎಲ್ಲೆ ಮುರಿದಿದ್ದನ್ನು ತರ್ಕಿಸಿ ಸುಸಂಬದ್ಧಗೊಳಿಸಬಹುದಿತ್ತು.ಪ್ರಾಣಿಗಳ ಹುಟ್ಟುಗುಣವಿದು ಎಂದು ಮನಶ್ಶಾಸ್ತ್ರದ ಮೆರಗನೀಯಬಹುದಿತ್ತು ಹೇಳಿಬಿಡುತ್ತೇನೆ ಎಲ್ಲವೀಗಬಟಾಬಯಲಲ್ಲಿ ನಿಂದುನಿನಗೆ ನಿನ್ನಂತವರಿಗೆ ಹಿಂದಿನವರಿಗೆ ಮುಂದಿನವರಿಗೆ ಸಾಕು ಸಾಕಾಗಿದೆನಿಶಸ್ತ್ರಿಯ ಮೇಲೆ ದುರಹಂಕಾರದ ನಿನ್ನ ಶಸ್ತ್ರವ ತೂರಿ ಆಕ್ರಮಿಸುವುದನ್ನು ಸಹಿಸಹಿಸಿ. ಮತ್ತಿಂದುಪೋಲಿಸು ಠಾಣೆಗಳಲ್ಲಿ, ಪತ್ರಿಕೆಗಳಲಿ, ಮುಗಿಲಿಗೆ ಲಗ್ಗೆ ಹಾಕಿದ ಭುಗಿಲುಮಾಧ್ಯಮಗಳಲಿಗುಪ್ತ ವಿಚಾರಣೆಗಳಲಿ ನ್ಯಾಯಾಲಯಗಳಲಿ ಮತ್ತೆನನ್ನ ನಗ್ನಗೊಳಿಸಿ ಹುರಿದು ಮುಕ್ಕುವ ನಿನಗೆ ಹಳೆಯದು,ಹೊಸದಾಗಿ ಹೊಸೆದ ಹಳೆಯಶಾಸ್ತ್ರಗಳ ಧಿಕ್ಕರಿಸಿ […]

ಕೊಡಲಾಗದ್ದು – ಪಡೆಯಲಾಗದ್ದು

ಮರೀಚಿಕೆಯಾದ ಪ್ರೀತಿಗಾಗಿ ಹಂಬಲವೋ
ದೂರ ಸರಿದವರಿಗಾಗಿ ಬೇಡುವಿಕೆಯೋ
ಪ್ರಶ್ನಿಸಿದ ಮನಕೆ
ಅವಳದು ನಿರುತ್ತರ

ಸಿಲುಕಬಾರದು

ದುಡಿದು ಕಾಯಸವೆಸಿ ಕಾಲ‌ವನೂ ದೂಡಿಬಿಡಬಹುದೇನೋ
ನೆನಪುಗಳ‌ ಅಬ್ಬರದ ಅಲೆಗಳ
ಒಳಗೆ ನುಸುಳಿಕೊಳ್ಳಬಾರದು

ಹುಡುಕಾಟ

ಆಡಿದ ಮಾತು ಮರಳಿ ನೋಯಿಸುತಿವೆ
ಮರೆಯಲಾಗದೆ ನೆನಪು ಕಾಡುತ್ತಿವೆ
ಶೃಂಗರಿಸಿ ಕೊಂಡು ಮಾಸಿದೆ ನೀಬಾರದೆ
ಅದೆಂತ ನಿನ್ನ ಶಕ್ತಿ ಕಾಣದೆ ಹಿಂಡುತಿದೆ

ನಾವಿಲ್ಲದಿದ್ದರೂ

ಬಾಳ ಉಯ್ಯಾಲೆಯಲಿ ಜೀಕುತ್ತ
ನಲಿ ನಲಿದು ಕುಣಿದು ಕುಪ್ಪಳಿಸಿದ
ಭಾವ ಕ್ಷಣಗಳ ಸ್ಮರಿಸಿ ಮುದಗೊಳ್ಳಬಾರದೇ

ನಾವು ಮತ್ತು ಅವರು

ಕವಿತೆ ನಾವು ಮತ್ತು ಅವರು ರೇಶ್ಮಾ ಗುಳೇದಗುಡ್ಡಾಕರ್ ಇಳೆಯಿದು ಬುದ್ದನುಬದುಕಿ ಬಾಳಿದ ಬೆಳಕಿರುವದು ಭುವಿಯಿದು ಅಲ್ಲಮನಬಯಲಿಗೆ ಬೆರಗಾದ ತಾಣವಿದು ಧರಣಿಯಿದು ಅಣ್ಣ ಬಸವಣ್ಣನಕ್ರಾಂತಿಗೆ ಸಾಕ್ಷಿಯಾದ ನೆಲವಿದು ಭಾರತವಿದು ಗಾಂಧಿಯಅಹಿಂಸೆಯ ಒಲುಮೆಯಲಿಮಿಂದೆದ್ದ ಸತ್ಯವಿದು ಕತ್ತಿಯ ಅಂಚಿಗೆ ಬಲಿಯಾಗುವವೆಇವರೆಲ್ಲ ಮಾರ್ಗಗಳು ?ಉಳಿದಿಲ್ಲವೆ ಅಥವಾ ಉಳಿಸುವದುಬೇಡವೇ ನೆಮ್ಮದಿಯ ನಾಳೆಗಳನು‌? ಹಸಿದ ಒಡಲಿಗೆ ದ್ವೇಷಅನ್ನ ನೀಡುವದೇ?ಸ್ನೇಹ ಬೆಸೆಯುವದೇ?ಬಾಳಿಗೆ ಹೆಗಲಾಗುವದೇ? ಸಾಮರಸ್ಯ ಅಲೆ ಇಲ್ಲದಸೌಹಾರ್ದದತೆಯ ಕಡಲು ಇರುವುದೇ?ಸಂಕೋಲೆಗಳ ಕಿತ್ತೊಸೆದುಸಂಬಂಧಗಳ ಹೊಸೆದುನಡೆಯುವ ಬನ್ನಿರಿನಮ್ಮ ಗಳ ದಾರಿಗೆ ನಾವೇಮುಳ್ಳಾಗಿ ಭಾವನೆಗಳುಕೃಷವಾಗಿ ಜೀವಿಸುವದು ಬೇಕೆ? *******************************************

ಅಷ್ಟೇ ಸಾಕು.

ಕವಿತೆ ಅಷ್ಟೇ ಸಾಕು. ಅಬ್ಳಿ,ಹೆಗಡೆ ಈ…ನೀರವದೊಳಗೂಸಂತೆಯ ಗಿಜಿ,ಗಿಜಿ.ಈ ರೌರವದೊಳಗೂಏನಾದರೊಂದು ಖುಷಿ,ಸಂಭ್ರಮ ನನ್ನೊಟ್ಟಿಗೆ.ಒಂಟಿತನದ ನಂಟುಬಾದಿಸುವದಿಲ್ಲ ನನ್ನ ನನ್ನೊಟ್ಟಿಗಿನ ಸಂಜೆಬಂಜೆಯಾದರೂ..ಹಗಲ ನಗು ಮಾಸಿದರೂ,ಹಿಂಬಾಲಿಸಲೊಂದುನೆರಳು,ನೋಡಿಕೊಳ್ಳಲೊಂದುಕನ್ನಡಿ,ಇಷ್ಟಿದ್ದರೂ ಸಾಕು,ನನಗೆನಾ ಒಂಟಿಯೆನಿಸುವದಿಲ್ಲ ಸಾಲದ್ದಕ್ಕೆ……ಸಾವಿನಮನೆಯ ನಿಶ್ಶಬ್ಧಕತ್ತಲಲ್ಲಿ ಹಚ್ಚಿಟ್ಟ-ಮಿಣುಕು ದೀಪವೊಂದಿದೆಯಲ್ಲ ಮಸ್ತಕದಲ್ಲಿನೆನಪಿನ ಪುಸ್ತಕತೆರೆದೋದಲು.ಅಷ್ಟೇ ಸಾಕು,ನಾಒಂಟಿಯೆನಿಸುವದಿಲ್ಲ. ಹೊತ್ತಿನ ಹೊತ್ತಿಗೆಯಲ್ಲಿರಾಶಿ,ರಾಶಿ,ಸಂಭ್ರಮಗಳನೆನಪಿನ ಚಿತ್ತಾರಗಳಿವೆ,ಚಿತ್ತವನು ಸಂತೈಲು.ಬಾಲ್ಯದಲ್ಲಿ…..ಮರಿ-ಹಾಕಲಿಟ್ಟ ನವಿಲುಗರಿ,ಮರದ ಟೊಂಗೆಯಲ್ಲಿಸಿಕ್ಕಿಬಿದ್ದ ದಾರ ಹರಿದಬಣ್ಣದ ಗಾಳಿಪಟ,ಬದುಕಿನೆಲ್ಲ ಮೊದಲುಗಳಸವಿ,ಸವಿ ನೆನಪು,ಇದ್ದೇ ಇವೆಯಲ್ಲ..ನನ್ನೊಟ್ಟಿಗೆ..!ಅಸಹ್ಯದ ಕ಼ಣಗಳನ್ನೂಸಹ್ಯವಾಗಿಸಲು.ಒಂಟಿತನ ನೀಗಿಸಲು. ಯಾವುದಿಲ್ಲವಾದರೂಕೊನೇಪಕ಼ ನನ್ನೊಳಗಿನ‘ನಾನಂತೂ’….ಇದ್ದೇ ಇದೆಯಲ್ಲ,ನನ್ನೊಟ್ಟಿಗೆ.ಅಷ್ಟೇ ಸಾಕು ಬದುಕಿಗೆ. **********

Back To Top