ಸಂಕ್ರಾಂತಿ ಕಾವ್ಯ ಸುಗ್ಗಿ ಸಂ-ಕ್ರಾಂತಿ! ಚೈತ್ರ ಶಿವಯೋಗಿಮಠ ಆಂತರ್ಯದಲ್ಲಿ ಭುಗಿಲೆದ್ದಿದ್ದರೂಅಸಮಾಧಾನ, ಅಶಾಂತಿಶಮನ ಮಾಡಲಿ ಅದೆಲ್ಲವಎಳ್ಳು-ಬೆಲ್ಲ ತಿನ್ನಿಸುವ ಸಂಕ್ರಾಂತಿ! ಮನದೊಳಗೆ ನಡೆದಿದ್ದರೂಭಾವನೆಗಳ ಸಂಘರ್ಷ-ಕ್ರಾಂತಿರಮಿಸಿ ತುಂಬಲಿ ಸಿಹಿ ಹರುಷವಕಬ್ಬಿನ ಜಲ್ಲೆಯ ಸಂಕ್ರಾಂತಿ! ಒಲವು ಮರೆತು, ಒಳಗೆತುಂಬಿದ್ದರೂ ಸಿರಿತನದ ಭ್ರಾಂತಿ..ಮರೆಸಿ ಭ್ರಮೆಯ, ತೆರೆಸಲಿ ಒಳಗಣ್ಣಅವರೆ, ನೆಲಗಡಲೆ ಬಿಡಿಸುವ ಸಂಕ್ರಾಂತಿ! ಮನವು ಮುದುಡಿ, ಭಾವ ಕದಡಿಹಾರಿ ಹೋಗಿದ್ದರೂ ಮನದ ಜಂತಿಅರಳಿಸಿ ಮನವ, ತುಂಬಲಿ ಸ್ಥೈರ್ಯವಬಣ್ಣದ ರಂಗವಲ್ಲಿ ಬಿಡಿಸುವ ಸಂಕ್ರಾಂತಿ!! ವರುಷವಿಡಿ ಸುಖ-ದುಃಖಗಳ ಸ್ವೀಕರಿಸಿಕೆಲವೊಮ್ಮೆ ಸಂಭ್ರಮಿಸಿ, ಮತ್ತೊಮ್ಮೆ ಕನವರಿಸಿದಣಿದು ನಲುಗಿರುವ, ಮನವೆಂಬರಾಸನ್ನ ಸಿಂಗರಿಸಿ ಬೆಂಕಿಹಾಯಿಸುವ […]
ಸಂಕ್ರಾಂತಿ ಕಾವ್ಯ ಸುಗ್ಗಿ ಸರಳ ಸೂತ್ರ ಎಸ್ ನಾಗಶ್ರೀ ಆರುತಿಂಗಳಾದರೂ ಬಳಸದ್ದನ್ನುಬಿಸಾಡುವುದು ಕ್ಷೇಮವೆಂದರುಒಪ್ಪಿದೆಬಟ್ಟೆಬರೆಯೆಲ್ಲಾ ಹರಡಿಹತ್ತಾರು ಚೂಡಿ, ಸೀರೆ, ರವಿಕೆಫಳಗುಟ್ಟುವ ಕಿವಿಯೋಲೆಜಾಮೂನ್ ಬಟ್ಟಲುಲೆಕ್ಕವಿರದಷ್ಟು ಲೋಟ, ತಟ್ಟೆಓದಲಾಗದ ಪುಸ್ತಕರೀಫಿಲ್ಲು ತೀರಿದ, ತಿರುಪು ಗಟ್ಟಿಯಿದ್ದಪೆನ್ನುಖಾಲಿ ಹಾಳೆಯ ಪುಸ್ತಕಡೈರಿಗಳನುತಿರುಗಾಮುರುಗಾ ನೋಡಿಪೇರಿಸಿಟ್ಟೆ ಗುಜರಿಗೆ ಹಾಕಿನೂರಿನ್ನೂರು ಎಣಿಸುವುದೆಷ್ಟರ ಮಾತು?ಬಡವರಿಗೆ ಕೊಡಬೇಕುಹಬ್ಬದ ಸಂಜೆ ಅವರುಟ್ಟು ತೊಟ್ಟುಸಂಭ್ರಮಿಸಬೇಕುಕನಸುಗಳ ಮುಗುಚಿ ಹಾಕಿಮಲಗಿದ್ದು ಗೊತ್ತುಈ ನೆನಪುಗಳು ಜೀವ ತಿನ್ನುತ್ತವೆಹೊತ್ತೊಯ್ಯುತ್ತವೆ ಕಪ್ಪಿರುವೆಯಂತೆತಲೆ ಮೇಲೆ ಭಾರ ಗಂಟೊಂದನುನಜ್ಜುಗುಜ್ಜಾದ ತಟ್ಟೆಯಲ್ಲೇಅನ್ನವುಣ್ಣುವ ಅಪ್ಪಹರಿದ ಸೀರೆಯುಡುವ ಅಜ್ಜಿಬೇಯಿಸುವ ಪಾತ್ರೆಯೂ ಇಲ್ಲದೆಬೀದಿಗೆ ಬಿದ್ದಗೃಹಭಂಗದ ನಂಜಮ್ಮಹೀಗೆ ಯಾವುದೋ ನೆನಪುಗಳುಗೀಟುಗಳೆಳೆದುಕಾಟಕೊಡುತ್ತವೆತಂತಿಯ ಮೇಲಿನ ಬಟ್ಟೆಗಳಂತೆಫಟಫಟಿಸುತ್ತದೆ […]
ಸಂಕ್ರಾಂತಿ ಕಾವ್ಯ ಸುಗ್ಗಿ ಸಂಕ್ರಾಂತಿ ಕೆ.ಟಿ.ಜಯಶ್ರೀ ಮುಂಬಾಗಿಲ ತಳಿರ ಸ್ವಾಗತಪಂಚಭೂತ ತತ್ವದರಿವನುಹರವುವ ಹೊಸ ಮಡಕೆಯಲಿಘಮಘಮಿಸುತಿದೆ ಪೊಂಗಲ್ಎಳ್ಳು ಬೆಲ್ಲ ಮೆಲುನುಡಿದಿವೆ ಜರತಾರಿ ತೊಟ್ಟ ಕುವರಿಯರಮೆರವಣಿಗೆ ಸಾಗಿದೆ ಸಂಜೆಯಲಿ ಪಥ ಬದಲಿಸಿ ಸಾಗುವಾಗಸೂರ್ಯ ಸಂಭ್ರಮದಿನಗೆ ಚೆಲ್ಲಿತಾ ರಂಗಿನ ರಂಗವಲ್ಲಿಉಷೆ ಸ್ಪರ್ಶಕೆಪುಳಕಮೈಮನದಲಿ ಎಳ್ಳು ಬೆಲ್ಲ ಹಂಚುವ ಸಡಗರಕೆಲಲನೆಯರ ಲಾಲಿತ್ಯದ ಮೆರಗು ರಾಸುಗಳ ಕಿಚ್ಚಿನ ಓಟಎಳೆಯರ ಗಾಳಿಪಟದಾಟಮುಗುದೆಯರ ಕೋಲ್ಮಿಂಚಿನೋಟಹರುಷ ಉಕ್ಕಿದೆ ಸುಗ್ಗಿಕಣಿತದಿ ಸಂಕುಚಿತ ಮನದ ತಮ ಕರಗಿಸಾಗಲಿ ಸೂರ್ಯ ಅಶಾಂತಿಯ ಪಥದಿಂದ ಶಾಂತಿ ಸಾಮರಸ್ಯದ ಸಂಕ್ರಮಣ ಕಾಲದತ್ತ
ವೀಣಾ ನಿರಂಜನ ಬರೆಯುತ್ತಾರೆ
ಎದೆಯ ಕದ ಇಷ್ಟಿಷ್ಟೇ ತೆಗೆದು
ಮೌನವನ್ನು ಒಳಗೆ
ಬಿಟ್ಟುಕೊಳ್ಳುವ ಸುಖ
ದಕ್ಕಿದವರಿಗಷ್ಟೇ ಗೊತ್ತು
ಸಂಕ್ರಾಂತಿ ಕಾವ್ಯ ಸುಗ್ಗಿ ಉನ್ನತಿಯ ಕಡೆಗೆ…. ಚಂದಕಚರ್ಲ ರಮೇಶ್ ಬಾಬು ಹೊಸವರ್ಷದ ಈ ವಾರಉತ್ಥಾನದ ಕರೆಯ ವಾರ ಏಳಿ ಎದ್ದೇಳಿಗುರಿ ಮುಟ್ಟುವ ವರೆಗೆ ನಿಲ್ಲದಿರಿಎನ್ನುತ್ತ ಎಲ್ಲರಿಗುಉತ್ತೇಜನ ಕೊಟ್ಟಸಂತನೊಬ್ಬನ ಹುಟ್ಟು ದಿನ ತನ್ನ ತಳದ ಪಯಣವನ್ನು ಮುಗಿಸಿಊರ್ಧ್ವದ ಕಡೆಗೆ ನಡೆಯುತ್ತಪ್ರಗತಿಯ ದಿಸೆಯಲ್ಲಿಪಾಠ ಹೇಳುವಉತ್ತರಾಯಣದ ಸೂರ್ಯನ ಹಬ್ಬ ತನ್ನ ದಾರದ ಬೇರುಕೆಳಗಿದ್ದರೇನುತಾನು ಗಗನಕ್ಕೇರಿನಭದ ನಗರಿಯಲ್ಲಿನಗಾರೆ ಹೊಡೆಯುತ್ತಎತ್ತರಕ್ಕೇರುವ ಸಂದೇಶವೀಯುವಪತಂಗುಗಳ ಪರ್ವ ಎಲ್ಲೆಲ್ಲೂ ಹರಡುತ್ತಎಲ್ಲರನ್ನೂ ನಡುಗಿಸಿದಮಹ ಮಾರಿಯನ್ನುಮಣಿಸುವ ಲಸಿಕೆಯ ಭರವಸೆಶುರುವಾಗುವ ಶುಭದಿನ
ನಡುವೆ ಅಂತರ…
ಆಶಾ ಜಗದೀಶ್
ಇತ್ತ ನಾನು ಅತ್ತ ನೀನು…
ಕೂತ ಬೆಂಚು ಒಂದೇ ತಾನೇ!?
ಅಂತರವೆಂಬ ವಾಮನನಿಗೆ
ಅಷ್ಟೇ ಸಾಕಿತ್ತು!
ಸಂಕ್ರಾಂತಿ ಕಾವ್ಯ ಸುಗ್ಗಿ ನಂದಿನಿ ಹೆದ್ದುರ್ಗ ನನ್ನದೆಯ ಗಾಯಗಳಾವೂ ನನ್ನವಲ್ಲ..ನೀನದರ ಒಡೆಯ..ನನ್ನ ವಾಸ್ತವ ,ಭ್ರಮೆ, ಕಲ್ಪನೆಗಳೂನಿನ್ನವೇ ಕೊಡುಗೆ..ನೊಂದು ನೋಯಿಸಿದ್ದಾದ ಮೇಲೆಒಂದು ಅಂತರದಲಿ ನೀ ನಿಂತು ನೋಡುವೆ.ಈ ಕ್ರೂರ ಮೌನದೊಳಗೆಎಷ್ಟೊಂದು ಪ್ರಶ್ನೆಗಳು.. ಬಗೆದು ತೋರಬಹುದೇ ಒಲವ ಈ ಬಗೆಯನ್ನು?ಹಗಲು ಹೊಳೆಯುವುದೆ ಇರುಳ ಈ ಹುಣ್ಣಿಮೆಗೆ?ಎದೆಯೊಳಗೆ ನೋವು ಉಲಿಯುವ ಹಕ್ಕಿಗೆ ಹೆಸರಿದೆಯೇ?ನಾನು ಬರುವ ಮೊದಲು ಎಷ್ಟೊಂದು ಸುಖಿ ನೀನು!! ಮಾತು ಮಹಲುಗಳಿಗಿಲ್ಲಿ ನೋವ ಅಡಿಪಾಯಹೊರಡಲೇ ಎನುವಾಗಷ್ಟೇ ನರಳು ನಿಟ್ಟುಸಿರುಎರಡು ಹೂವೆಸಳು,ಬೆಳುದಿಂಗಳು,ಎದೆಯ ಆಲಾಪಕ್ಕೂಬಿಡುವಿಲ್ಲ ನಿನಗೆ ಶೂನ್ಯ ಹುಟ್ಟಿಸಿದ್ದೂ ನೀನೇ.ಕೋಲಾಹಲಕ್ಕೆ ಕಾರಣವೂ ನೀನೇನಾನು […]
ಸಂಕ್ರಾಂತಿ ಕಾವ್ಯ ಸುಗ್ಗಿ ಹೊಸ ಹಾಡು ವಸುಂಧರಾ ಕದಲೂರು ಇಂದಿನ ಹೊಸತುನಾಳೆ ಹಳತಾಗಬೇಕುಮತ್ತೆ ನಾಳೆಯೂ ಹೊಸತುದಿನವಾಗಬೇಕು.ಕ್ಷಣ ಕಳೆದು ಸಮಯಉರುಳುತಿರಬೇಕುಬೇರೆ ಗಳಿಗೆ ನಮಗಾಗಿಮರಳಿ ಬರಬೇಕು. ಬೆಳಕು ಮತ್ತೆ ಮತ್ತೆಉದಯಿಸುತಾ ತಾಹೇಳುವುದು ಏನನ್ನು?ನಿನ್ನೆಯೂಬಂದಿದ್ದೆನೆಂಬ ಬೇಸರವನ್ನೇ?!ಇರುಳ ಕತ್ತಲಲಿ ಮತ್ತೆಮುಳುಗುವ ಭಯವನ್ನೇ..?! ಅನುಕರಿಸು ದಿನಪನನುಅನುಸರಿಸು ಇಳೆಯಪರಿಭ್ರಮಣೆಯನು.ಆಗು ನೀ ನವ ನಾವೀನ್ಯಚೈತನ್ಯ ದೀವಿಗೆ.ಅಲೆಯಾಗು ಸೆಲೆಯಾಗುಭೋರ್ಗರೆದು ಮೊರೆದುಮಗುವಾಗಿ ಶರಣಾಗುಕಡಲ ದೇವಿಗೆ. ನೀನಾಗದಿರು ಎಂದೆಂದಿಗೂಚಿತ್ತ ಚಾಂಚಲ್ಯಚಕ್ರವ್ಯೂಹದಲಿ ಸಿಲುಕಿತೊಳಲುವ ಬಂಧಿಯಾದಖೈದಿಯಂತೆ;ಚಿಂತಿಸೊಮ್ಮೆ ಮನದೆರೆದುನೀ ಆಗು ನಿಗೂಢ ವ್ಯೂಹಕಳಿಚಿ ಅನಂತದೆಡೆಗೆ ಹಾರುವಪತಂಗದಂತೆ.
ಸಂಕ್ರಾಂತಿ ಕಾವ್ಯ ಸುಗ್ಗಿ ಸಂಕ್ರಾಂತಿಗೊಂದು ಪ್ರಶ್ನೆ ಸುಜಾತಾ ರವೀಶ್ ದುಗುಡದ ಛಾಯೆ ಆವರಿಸಿದ ಚಿಂತೆಯ ಕಾವಳ ಹೊದ್ದ ಮನಕೆ ತರಬಹುದೇ ಸಂಕ್ರಾಂತಿ ನಿನ್ನಾಗಮನ ಹೊಸ ಚೈತನ್ಯದ ಶಾಖದ ಕಾವನು? ಜಡ್ಡು ಕಟ್ಟಿರುವ ಜೀವನ ಜಾಡ್ಯಕೆಋತು ಪರಿವರ್ತನೆಯ ಔಷಧಿಯೇ? ಹೇಮಂತನ ಮಬ್ಬು ಆಲಸ್ಯಕೆ ಮಾಗಿಯ ರೋಗಕೆ ನೀ ಮದ್ದೇ? ಪ್ರಕೃತಿಗಂತೂ ಈ ಭೂಮಿ ಪರಿಭ್ರಮಣೆನಿತ್ಯ ನೂತನ ಸಂಭ್ರಮ ತರುವ ಆವರ್ತನೆ ಏಕತಾನತೆಯ ಬೇಸರದ ಬದುಕಿಗೆ ನೀ ತರಬಹುದೇನು ಹೊಸ ಬದಲಾವಣೆ? ಬದುಕಿನಿಡೀ ನಡೆಯುತಿದೆ ಬವಣೆ ಕೃಷಿ ಬರಬಹುದೆ ಈಗ ಸಫಲತೆಯ ಸುಗ್ಗಿ? ಸಿಗುವುದೇ ಪರಿಶ್ರಮಕ್ಕೊಂದು ಬೆಲೆ ಬಾಳಪಯಣಕೊಂದು ಗಮ್ಯ ನೆಲೆ? ಕಾಯುತಲಿದೆ ಹೃದಯ […]
ಸಂಕ್ರಾಂತಿ ಕಾವ್ಯ ಸುಗ್ಗಿ ಯಕ್ಷಿಯ ಪ್ರಶ್ನೋತ್ತರ ಡಾ. ರೇಣುಕಾ ಅರುಣ ಕಠಾರಿ ಗಂಭೀರವಾಗಿ ಭೀಗುತ್ತಿದ್ದ ಕಾಲವದುಮನಸಿನ ಹುಚ್ಚಾಟಕ್ಕೆ ಎಣೆಯೇ ಇರಲಿಲ್ಲಕಾಲದೊಳಗೆಯೆ ಅಡಗಿದ ಜೀವಸಾರದ ಕಡೆಗೆಬವಣೆಯ ಹುಡಕ ಹೊರಟ ಯಕ್ಷಿ ನಾ! ಮುರುಟಿದ ಕನಸಗಳೆಲ್ಲವೂ ಮೆರವಣಿಗೆಗೆ ಸಿದ್ದವಾಗಿದ್ದು ತಿಳಿಯಲಿಲ್ಲ.ಎಲ್ಲಾ ಎಲ್ಲೆಯನ್ನು ಮೀರಿ ಹತಾಟೆಯ ಹಿಂದೆ ಸರಿದಿತ್ತು.ಹಂಸದ ನಡುಗೆ ಕುರ್ಮದ ಆಯಸ್ಸು ಕಣ್ಮಂದೆ ನಿಂತಿತ್ತು..ಕಡಲಳೊಗಿನ ಲವಣ ಮಾತ್ರ ನೀರಲ್ಲಿಯೇ ತೆಲುತ್ತಿತ್ತು. ದುಗುಡು ದುಮ್ಮಾನಗಳಿಗೆ ವಿವೇಕ ಹೇಳಿ ಸಾಕಾಗಿತ್ತುಅನುಭವ ಅನುಭಾವದತ್ತ ಸಾಗಿದ ಪಯಣ ನಿಲ್ಲುತ್ತಿರಲಿಲ್ಲಬದುಕಿನ ಎಲ್ಲ ಮಗ್ಗಲುಗಳು ಸ್ಮಶಾನದ ಅಂಗಳದಲ್ಲಿ ನಲಿಯುತ್ತಿದ್ದವು.ಹೇಳದೆ […]