ಸಂಕ್ರಾಂತಿ ಕಾವ್ಯ ಸುಗ್ಗಿ

ಉನ್ನತಿಯ ಕಡೆಗೆ….

ಚಂದಕಚರ್ಲ ರಮೇಶ್ ಬಾಬು

ಹೊಸವರ್ಷದ ಈ ವಾರ
ಉತ್ಥಾನದ ಕರೆಯ ವಾರ

ಏಳಿ ಎದ್ದೇಳಿ
ಗುರಿ ಮುಟ್ಟುವ ವರೆಗೆ ನಿಲ್ಲದಿರಿ
ಎನ್ನುತ್ತ ಎಲ್ಲರಿಗು
ಉತ್ತೇಜನ ಕೊಟ್ಟ
ಸಂತನೊಬ್ಬನ ಹುಟ್ಟು ದಿನ

ತನ್ನ ತಳದ ಪಯಣವನ್ನು ಮುಗಿಸಿ
ಊರ್ಧ್ವದ ಕಡೆಗೆ ನಡೆಯುತ್ತ
ಪ್ರಗತಿಯ ದಿಸೆಯಲ್ಲಿ
ಪಾಠ ಹೇಳುವ
ಉತ್ತರಾಯಣದ ಸೂರ್ಯನ ಹಬ್ಬ

ತನ್ನ ದಾರದ ಬೇರು
ಕೆಳಗಿದ್ದರೇನು
ತಾನು ಗಗನಕ್ಕೇರಿ
ನಭದ ನಗರಿಯಲ್ಲಿ
ನಗಾರೆ ಹೊಡೆಯುತ್ತ
ಎತ್ತರಕ್ಕೇರುವ ಸಂದೇಶವೀಯುವ
ಪತಂಗುಗಳ ಪರ್ವ

ಎಲ್ಲೆಲ್ಲೂ ಹರಡುತ್ತ
ಎಲ್ಲರನ್ನೂ ನಡುಗಿಸಿದ
ಮಹ ಮಾರಿಯನ್ನು
ಮಣಿಸುವ ಲಸಿಕೆಯ ಭರವಸೆ
ಶುರುವಾಗುವ ಶುಭದಿನ


7 thoughts on “

  1. ಹೆಮ್ಮರ ಕಾಣುವುದು; ಅದಕ್ಕೆ ಆಶ್ರಯ ನೀಡಿದ ಧೃಡ ಬೇರುಗಳು ಕಾಣುವುದಿಲ್ಲ. ಅದೇ ರೀತಿ, ಹಾರುವ ಗಾಳಿಪಟಗಳಿಗೆ ದಾರದ ಬೇರು ಬೇಕು. ನಾವೂ ಬೇರುಗಳನ್ನು ಮರೆಯಬಾರದು. ಸಂಕ್ರಾಂತಿ ಹಬ್ಬದ ವಿಶೇಷಗಳನ್ನೇ ರೂಪಕಗಳಾಗಿ ಬಳಸಿ ಬರೆದ ಕವನ ಬಹಳ ಚೆನ್ನಾಗಿದೆ. ಅಭಿನಂದನೆಗಳು

  2. ಹೊಸ ವರುಷಕ್ಕೆ ಹೊಸ ಹರುಷ ,ಧನಾತ್ಮಕ ಚಿಂತನೆಯನ್ನು ನೀಡುತ್ತ ಮುನ್ನಜೆಯಲು ಪ್ರೇರೇರಿಸುವ ಕವಿತೆ.

  3. ತಳದ ಪಯಣವ ಮುಗಿಸಿ ಎಂಬ ಸಾಲು ಮತ್ತು, ಗಾಳಿ ಪಟಕ್ಕೆ ದಾರದ ಬೇರಿನ ಕಲ್ಪನೆ ಅನನ್ಯ ಸರ್. ಚಂದದ ಕವನ

Leave a Reply

Back To Top